ಕನ್ನಡಪ್ರಭ ವಾರ್ತೆ ಬೀದರ್ಸಕ್ಕರೆ ಕಾರ್ಖಾನೆ ಹಾಗೂ ರೈತರು ಒಂದೇ ನಾಣ್ಯದ ಎರಡು ಮುಖವಿದ್ದಂತೆ, ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆಗಳು ಕಳೆದ ಸಾಲಿನ ಬೆಲೆಗಿಂತ ಪ್ರತಿ ಟನ್‌ಗೆ 100 ರು. ಹೆಚ್ಚು ಬೆಲೆ ನೀಡುವಂತೆ ಸಚಿವ ಈಶ್ವರ ಖಂಡ್ರೆ ಕಾರ್ಖಾನೆ ಅಧ್ಯಕ್ಷರಿಗೆ ತಿಳಿಸಿದರು.ಕಬ್ಬು ದರ ಹೆಚ್ಚಳ ಹಾಗೂ ಬೆಲೆ ನಿಗದಿ ಕುರಿತಂತೆ ಜಿಲ್ಲಾಡಳಿತದ ಸಭಾಂಗಣದಲ್ಲಿ ಆಯೋಜಿಸಲಾದ ರೈತ ಮುಖಂಡರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಬಾರಿ 2600 ರು. ದರ ನೀಡಿದ್ದು ಈ ಬಾರಿ 2700 ರು. ಹಾಗೂ ಒಂದು ಕೆಜಿ ಸಕ್ಕರೆ ನೀಡುವ ಬಗ್ಗೆ ಸಚಿವರು ತಿಳಿಸಿದರು.ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಕನಿಷ್ಟ 3 ಸಾವಿರ ಪ್ರತಿ ಟನ್‌ಗೆ ನೀಡುವಂತೆ ರೈತ ಸಂಘದ ಪದಾಧಿಕಾರಿಗಳು ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರ ಸಮಸ್ಯೆಗಳನ್ನು ಸಹ ಆಲಿಸಿದ ಸಚಿವರು ಈ ಬಾರಿ ಸಕ್ಕರೆ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆ ಯಾಗಿದ್ದು, ಮೊಲಾಸಿಸ್ ಬೆಲೆ ಸಹ ಕಡಿಮೆಯಾಗಿದ್ದು, ಕಬ್ಬು ಕಟಾವು ಬೆಲೆ ಸಹ ಹೆಚ್ಚಾಗಿರುವುದನ್ನು ತಿಳಿಸಿದರು.ಕಬ್ಬು ಸಾಗಾಟ ಮಾಡಿದ ರೈತರಿಗೆ ಕಾರ್ಖಾನೆಗಳು ಕಡ್ಡಾಯವಾಗಿ 15 ದಿನಕ್ಕೊಮ್ಮೆ ಹಣ ಪಾವತಿಸುವಂತೆ ಸಚಿವರು ಸೂಚಿಸಿದರು. ಆಕಸ್ಮಿಕ ಬೆಂಕಿ ತಗುಲಿದ ಕಬ್ಬು ಬೆಳೆಯನ್ನು ಆದ್ಯತೆ ಮೇರೆಗೆ ಕಟಾವು ಮಾಡಿ ಸಾಗಿಸುವಂತೆಯೂ ಸಚಿವರು ಕಾರ್ಖಾನೆಗಳಿಗೆ ಸೂಚಿಸಿದರು. ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಪ್ರವಿಣ ಬರಗಲ್, ನಾರಾಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಡಿ.ಕೆ.ಸಿದ್ರಾಮ, ಭಾಲ್ಯೇಶ್ವರ ಬೀದರ ಕಿಸಾನ, ಭವಾನಿ ಶುಗರ, ಮಹಾತ್ಮಾಗಾಂಧಿ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರು ಸೇರಿದಂತೆ ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಕಾಶಿನಾಥ ಮಲಶೆಟ್ಟಿ, ಖಾಸಿಂ ಅಲಿ, ವಿಠಲರಾವ ಮೇತ್ರೆ, ಸೋಮನಾಥ ಬಣಕೂರ, ಸತೀಶ ನನ್ನಾರೆ, ನಾಗನಾಥ ಪಾಟೀಲ, ಕರಬಸಪ್ಪ ಹುಡಗಿ, ಶಾಂತಮ್ಮ ಮಾಲಗೆ, ರಾಮರಾವ, ವಿಠಲರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.----
ಕೋಟ್:--ಚಿತ್ರ 5ಬಿಡಿಆರ್59ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ರೈತ ಮುಖಂಡರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.--