)
ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಎಸ್ಐಆರ್‌ಗೆ ಯಾವತ್ತೂ ವಿರೋಧ ಮಾಡಿಲ್ಲ. ಅಲ್ಲದೆ ಎಸ್‌ಐಆರ್ ನಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇಲ್ಲ. ನಾವು ಕೇವಲ ಎಸ್‌ಐಆರ್ ನಡೆಸುವುದಕ್ಕೆ ಸಹಾಯ ಮಾತ್ರ ಮಾಡುತ್ತಿದ್ದೇವೆ. ಇದನ್ನು ಬಿಜೆಪಿ ರಾಜಕೀಯ ಉದ್ದೇಶದಿಂದ ಯಾಕೆ ನೋಡಬೇಕು? ಈ ರೀತಿ ರಾಜಕೀಯ ಆರೋಪ ಮಾಡುವ ಬದಲು ಚುನಾವಣಾ ಆಯೋಗಕ್ಕೆ ತಿಳಿಸಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಲಹೆ ನೀಡಿದರು.
108 ಆ್ಯಂಬುಲೆನ್ಸ್ 15 ನಿಮಿಷದಲ್ಲಿ ತಲುಪಬೇಕು !
ರಾಜ್ಯದಲ್ಲಿ ಇನ್ನು ಮುಂದೆ 108 ಆ್ಯಂಬುಲೆನ್ಸ್ ನ ಚಾಲಕರು ಸ್ಥಳಕ್ಕೆ ತಲುಪದಿದ್ದರೇ ಅವರಿಗೆ 5 ಸಾವಿರ ರು. ದಂಡ ವಿಧಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಫರೀದ್ ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ 20 ನಿಮಿಷಗಳಲ್ಲಿ ಆ್ಯಂಬುಲೆನ್ಸ್ ನ ಚಾಲಕರು ಸ್ಥಳಕ್ಕೆ ತಲುಪಬೇಕು ಎಂಬ ನಿಯಮ ಇದೆ. ಆದರೆ ರಾಜ್ಯದಲ್ಲಿ 15 ನಿಮಿಷದಲ್ಲಿ ತಲುಪುವ ನಿಯಮ ತರುತ್ತೇವೆ. 15 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತಲುಪಿಸಿದರೆ ಶೇ. 90 ಸಮಸ್ಯೆ ಸರಿಯಾಗುತ್ತದೆ ಎಂದು ಅವರು ಹೇಳಿದರು. ರಾಜ್ಯದಲ್ಲಿರುವ 700ರಿಂದ 800 ಆ್ಯಂಬುಲೆನ್ಸ್ ಸೇವೆಗಳನ್ನು ವ್ಯವಸ್ಥಿತ ಮಾಡಬೇಕಾಗಿದೆ. ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಮಾರ್ಗಸೂಚಿ ಬಿಡುಗಡೆಯಾಗಿ ಕಾರ್ಯಗತವಾಗಲು ಮೂರು ತಿಂಗಳು ಹಿಡಿಯುತ್ತದೆ ಎಂದು ಅವರು ಹೇಳಿದರು.
ಬಿಡದಿಯಲ್ಲಿ ಸೆಟಲೈಟ್ ಟೌನ್ ನಿರ್ಮಾಣಕ್ಕೆ ಅಲ್ಲಿನ ಕೃಷಿಕರ ವಿರೋಧಕ್ಕೆ ಅವರು ಪ್ರತಿಕ್ರಿಯಿಸಿದರು. ಮುಂದಿನ ಜನಾಂಗಕ್ಕೆ ಮಾಡರ್ನ್ ಟೆಕ್ನಾಲಜಿ ಇರುವ ರಾಜ್ಯ ನಿರ್ಮಾಣ ಮಾಡಬೇಕಾ? ಬೇಡ್ವಾ? ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡದಿದ್ದಾರೆ ನೂರಾರು ವರ್ಷ ಕೃಷಿಯೇ ನಡೆಯುತ್ತಾ ? ಮುಂದೆ ಅಲ್ಲಿ ಯಾರೂ ಕಟ್ಟಡಗಳನ್ನ ಕಟ್ಟೋದಿಲ್ವಾ ? ಎಂದು ಅವರು ಪ್ರಶ್ನಿಸಿದರು.