ಚಿಂತಾಮಣಿ: ಗುರುಕುಲ ಪದ್ಧತಿಯ ಮೂಲಕ ಶಿಕ್ಷಣ, ವಿವಿಧ ರೀತಿಯ ಸತ್ಸಂಗಗಳು, ಶಿಬಿರಗಳು, ವಿಶೇಷ ಉಪನ್ಯಾಸಗಳು, ಯುವಕರನ್ನು ದುಶ್ಚಟಗಳಿಂದ ವಿಮುಕ್ತಗೊಳಿಸುವುದು ಸೇರಿದಂತೆ ಸತ್ಪ್ರಜೆಗಳನ್ನಾಗಿ ಮಾಡುವ ಧ್ಯೇಯದೊಂದಿಗೆ ಈ ಭವನ ಕಾರ್ಯ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆಯೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ಗ್ರಾಮವನ್ನು ರಾಮರಾಜ್ಯವನ್ನಾಗಿಸುವಲ್ಲಿ ಮಂಜುನಾಥ್‌ರ ಕಾರ್ಯ ಸಾಕಾರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಸ್ವಚ್ಛತಾ ಅಭಿಯಾನ, ಯೋಗ ಆರೋಗ್ಯ ಶಿಬಿರಗಳು ಇತ್ಯಾದಿಗಳನ್ನು ನೀಡುತ್ತಿರುವುದು ಶ್ಲಾಘನೀಯ ವಿಚಾರವೆಂದರು.
ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಸಧ್ಯಕ್ಕಿಲ್ಲ, ಏಕೆಂದರೆ ಮುಖ್ಯಮಂತ್ರಿಗಳಾಗಿ ಸಿದ್ಧರಾಮಯ್ಯನವರು ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದು, ಅವರು ತಮ್ಮ ಸ್ಥಾನದಲ್ಲಿ ಅಭಾದಿತವಾಗಿ ಮುಂದುವರಿಯುತ್ತಾರೆ. ಯಾವುದೇ ಅಡೆತಡೆ ಇಲ್ಲದೆ ಕೆಲಸ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದರು. ಡಾ.ಸಿದ್ದಲಿಂಗಯ್ಯ ಸ್ವಾಮೀಜಿ, ನರೋತ್ತಮಾನಂದಸ್ವಾಮೀಜಿ, ಸಹಜಾನಂದ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಮಂಜುನಾಥ್, ರಜನಿ ಸೇರಿದಂತೆ ಸುಬ್ಬರಾಯನಪೇಟೆಯ ಗ್ರಾಮಸ್ಥರು ಉಪಸ್ಥಿತರಿದ್ದರು.