ತವರು ಜಿಲ್ಲೆಗೆ ಮೆತ್ತಿದ ಕೊಳೆ ತೊಳೆವರೆ ಸಚಿವ ಪ್ರಿಯಾಂಕ್‌ ಖರ್ಗೆ

KannadaprabhaNewsNetwork |  
Published : Oct 16, 2025, 02:00 AM IST
ಫೋಟೋ- ಗ್ರಂಥಪಾಲಕಿಆತ್ಮಹತ್ಯೆ ಮಾಡಿಕೊಂಡ ಗ್ರಂಥಪಾಲಕಿ ಭಾಗ್ಯವಂತಿ | Kannada Prabha

ಸಾರಾಂಶ

Minister Priyank Kharge cleans up the mess he has brought to his home district

-ಮಳಖೇಡ ಪಂಚಾಯಿತಿ ಗ್ರಂಥಪಾಲಕಿ ಆತ್ಮಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

----

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಪಂಚಾಯಿತಿಯಲ್ಲಿ ಸಮಯಕ್ಕೆ ಸರಿಯಾಗಿ ಸಂಬಳ ಸಿಗದ್ದಕ್ಕೆ ಮನನೊಂದು ಅರಿವು ಕೇಂದ್ರ ಗ್ರಂಥಪಾಲಕಿ ಭಾಗ್ಯವಂತಿ ನೇಣಿಗೆ ಶರಣಾದ ಘಟನೆಯ ಹಿಂದೆ ಪಂಚಾಯಿತಿ ಹಂತದಲ್ಲಿನ ಹುಳುಕು ಬಯಲಾಗುತ್ತಿವೆ.

ಅನುದಾನ ಲಭ್ಯವಿದ್ದರೂ ಸಂಬಳ ನೀಡದೆ ಪಂಚಾಯಿತಿಯವರು ಅಲಕ್ಷತನ ತೋರಿದರು. ಸಂಬಳಕ್ಕಾಗಿ ಮೊರೆ ಇಟ್ಟರೆ ಕಿರುಕುಳ ನೀಡಿದ್ದಾರೆಂಬ ಆರೋಪಗಳನ್ನು ಮೃತ ಭಾಗ್ಯವಂತಿ ಕುಟುಂಬದ ವ್ಯವಸ್ಥೆಯಲ್ಲಿನ ಹುಳಕನ್ನು ಎತ್ತಿ ಹಿಡಿದಿದೆ. ಗ್ರಂಥಪಾಲಕರ ಸಂಘದವರು ಅನುದಾನವಿದ್ದರೂ ಸಂಬಳ ದೊರಕದೆ ಅನ್ಯಾಯವಾಗಿ ಭಾಗ್ಯವಂತಿ ಬಲಿಯಾದಳೆಂದು ಆಕ್ರೋಶ ನೋಡಿದರೆ ಕೆಲಸ ಮಾಡಿ ಸಂಬಳಕ್ಕೆ ಗ್ರಂಥಪಾಲಕರ ಪರದಾಟ ಸಾಗಿರೋದು ಸ್ಪಷ್ಟವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆಯಲ್ಲೇ ಅರಿವು ಗ್ರಂಥಾಲಯದಲ್ಲಿನ ಈ ಆತ್ಮಹತ್ಯೆ ರಾಜ್ಯದ ಗಮನಸೆಳೆದಿದೆ.

ಸೇಡಂ ತಾಲೂಕು ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರ ತವರು. ಅದರಡಿ ಮಳಖೇಡ ಪಂಚಾಯಿತಿಯಲ್ಲಿನ ಹಲವು ಹಂತದ ಅಲಕ್ಷತನವೇ ಗ್ರಂಥಪಾಲಕಿ ಕೊರಳಿಗೆ ಉರುಳಾಯ್ತೆಂಬ ಆರೋಪಗಳಿವೆ.

ಅರಿವು ಗ್ರಂಥ ಪಾಲಕರಿಗೆ ಸಂಬಳ ಬಾರದೆ ಮಾನಸಿಕ, ದೈಹಿಕವಾಗಿ ಕುಗ್ಗುವಂತಹ ಪರಿಸ್ಥಿತಿ ಮಳಖೇಡ್‌ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಗ್ರಂಥಪಾಲಕಿ ಸಾವಿನ ಪ್ರಸಂಗ ಎತ್ತಿ ತೋರಿಸಿದೆ.

------------

....ಬಾಕ್ಸ್‌.....

20 ವರ್ಷದಿಂದ ಕೆಲಸದಲ್ಲಿದ್ದ ಭಾಗ್ಯವಂತಿ

ಗ್ರಾಪಂ, ತಾಪಂ ಅಧಿಕಾರಿಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಸಂಬಳ ವಿತರಿಸಿ ಎಂದು ಬೇಡಿಕೊಂಡರೂ ಆಕೆಗೆ ಸಂಬಳ ದೊರಕಿರಲಿಲ್ಲ. ಸಂಬಳ ದೊರಕದೆ ನಿರಾಶರಾದ ಭಾಗ್ಯವತಿ ವಿ ಅಗ್ಗಿಮಠ ಮಾನಸಿಕವಾಗಿ ಜರ್ಜರಿತರಾಗಿದ್ದರು, ಅರಿವು (ಗ್ರಂಥಾಲಯಕ್ಕೆ) ಕೇಂದ್ರಕ್ಕೆ ಹೋಗಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಪತಿ ವಿಶ್ವೇಶ್ವರಯ್ಯ ಹೇಳಿದ್ದಾರೆ. ಗ್ರಂಥಾಲಯದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಬೆನ್ನಲ್ಲೇ ಕುಟುಂಬಸ್ಥರು ಉದ್ಯೋಗ ಪರಿಹಾರಕ್ಕಾಗಿ ಧರಣಿ ನಡೆಸಿದ್ದಾರೆ. ಪರಿಹಾರದ ಮೊತ್ತ ಹೆಚ್ಚಳ ಮಾಡದೆ ಇರುವುದರಿಂದ ಶಿವಕುಮಾರ್ ಪಾಟೀಲ್ ತೇಲ್ಕೂರ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಿದ್ದು ಗಮನಿಸಿದರೆ ಪಂಚಾಯಿತಿ ಅವ್ಯವಸ್ಥೆ ಸ್ಪಷ್ಟವಾಗಿದೆ.

ಗ್ರಂಥಾಲಯದ ಮೇಲ್ವಿಚಾರಕರ ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ಸಿದ್ದರಾಮಪ್ಪ ಹಾರಿ, ಜಿಲ್ಲಾ ಸಂಘದ ಕಾರ್ಯದರ್ಶಿ ಶರಣಗೌಡ ಪಾಟೀಲ್, ಸೇಡಂ ತಾಲೂಕಿನ ಗ್ರಂಥ ಪಾಲಕರ ಸಂಘದ ಅಧ್ಯಕ್ಷ ಜೈ ಭೀಮ್ ಮಳಖೇಡಕ್ಕೆ ಧಾವಿಸಿ ಹೋರಾಟಕ್ಕಿಳಿದು ಗಮನ ಸೆಳೆದಿದ್ದಾರೆ..

....ಕೋಟ್‌...

ರಾಜ್ಯ ಸರ್ಕಾರವು ನೇರವಾಗಿ ಗ್ರಂಥ ಮೇಲ್ವಿಚಾರಕರಿಗೆ ಸಂಬಳ ವಿತರಿಸಬೇಕು, ಜೊತೆಗೆ ದಿನಪತ್ರಿಕೆ , ವಾರಪತ್ರಿಕೆ ಮಾಸಿಕ, ಸ್ಪರ್ಧಾತ್ಮಕ ಪುಸ್ತಕಗಳು ಗ್ರಂಥಾಲಯಕ್ಕೆ ಸೇರಿದ ನಂತರ ತಕ್ಷಣ ಸಂಬಂಧಿಸಿದವರಿಗೆ ಹಣ ಸಂದಾಯವಾಗಬೇಕು.

-ಮಲ್ಲಿಕಾರ್ಜುನ್ ಬಿರಾದಾರ್, ಗ್ರಂಥಾಲಯದ ಮೇಲ್ವಿಚಾರಕರ ರಾಜ್ಯ ಸಂಘದ ನಿರ್ದೇಶಕರು ಬೆಂಗಳೂರು

-------------------

....ಕೋಟ್‌....

ನಾವು ಅಧಿಕಾರಿಗಳ ಕಾಲು ಬಿದ್ದರೂ ಕೂಡಾ ಕರುಣೆ ತೋರಿಸಿದೆ ಇರುವುದರಿಂದ ನನ್ನ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದಾರೆ, ಗ್ರಂಥಪಾಲಕರು ಯಾವುದೇ ಕಾರಣಕ್ಕೂ ಗ್ರಂಥಾಲಯದ ಕೆಲಸ ಬಿಟ್ಟು ಬೇರೆ ಕೆಲಸ ಮಾಡಿ ಜೀವನ ನಡೆಸಿ. ಇಲ್ಲಿ ಕೆಲಸ ಮಾಡಿದರೂ ಸಂಬಳ ಭರವಸೆ ಇಲ್ಲ.

-ವಿಶ್ವೇಶ್ವರಯ್ಯ, ಆತ್ಮಹತ್ಯೆ ಮಾಡಿಕೊಂಡ ಗ್ರಂಥಪಾಲಕಿ ಪತಿ

--..ಬಾಕ್ಸ್‌..

ಸಂಬಳ ಕೇಳಿದ್ದಕ್ಕೆ ಅಧಿಕಾರಿಗಳಿಂದ ಕಿರುಕುಳ!

ಭಾಗ್ಯವಂತಿ ಸಂಬಳ ಕೇಳಿದರೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ತಾಪಂ ಅಧಿಕಾರಿ ಮುಂದೆ ಆಕೆಯ ಪತಿ ವಿಶ್ವೇಶ್ವರಯ್ಯ ಇರುವಾಗಲೇ ಭಾಗ್ಯವತಿ ತಾನು ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ಹೇಳಿ ಕರೆ ಮಾಡಿದ್ದೆ ಕೊನೆ. ಇಂತಹ ಪಂಚಾಯಿತಿ ಸಿಬ್ಬಂದಿ ದುರ್ನಡೆಯೇ ಭಾಗ್ಯವತಿ ಬಲಿ ಪಡೆಯಿತೆಂದು ದೂರು ಕೇಳಿ ಬರುತ್ತಿವೆ. ಜಿಪಂ ಸಿಇಒ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಲಿ.

....ಬಾಕ್ಸ್‌....

ಸಂಬಳ ಕೈ ಸೇರದೆ ಹೋದ್ರೆ ಬದುಕೋದು ಹೇಗೆ?

ರಾಜ್ಯ ಸರ್ಕಾರವು ಗ್ರಾಪಂ ವ್ಯಾಪ್ತಿ ಒಳಗೆ (ಅರಿವು ಕೇಂದ್ರ) ಗ್ರಂಥಾಲಯದ ಮೂಲಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪುಸ್ತಕಗಳು ಲ್ಯಾಪ್ಟಾಪ್, ಕಂಪ್ಯೂಟರ್, ದಿನಪತ್ರಿಕೆಗಳ ಮೂಲಕ ಸಾರ್ವಜನಿಕರಿಗೂ ಅನುಕೂಲಕರ ಮಾಡಿದೆ. ಅದರ ನಿರ್ವಹಣೆಗೆ ಗ್ರಂಥ ಪಾಲಕರು ನಿತ್ಯ ಕಾರ್ಯನಿರ್ವಹಿಸುತ್ತಿದ್ದರೂ ಸಂಬಳ ಇಲ್ಲದೆ ಅವರು ಬದುಕಬೇಕು ಹೇಗೆ? ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಫೋಟೋ- ಪ್ರೊಟೆಸ್ಟ್‌

ಮಳಖೇಡ ಪಂಚಾಯಿತಿ ಗ್ರಂಥಪಾಲಕಿ ಆತ್ಮಹತ್ಯೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.

ಫೋಟೋ- ಗ್ರಂಥಪಾಲಕಿ

ಆತ್ಮಹತ್ಯೆ ಮಾಡಿಕೊಂಡ ಗ್ರಂಥಪಾಲಕಿ ಭಾಗ್ಯವಂತಿ

PREV

Recommended Stories

ಪರಿಹಾರ ನೀಡಲು ಸರ್ಕಾರ ಬದ್ಧವಿದೆ
ನಾಯಿ ಕಡಿತಕ್ಕೊಳಗಾಗಿದ್ದರೆನಿರ್ಲಕ್ಷ್ಯ ಬೇಡ, ಚಿಕಿತ್ಸೆ ಪಡೆಯಿರಿ