ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಸಚಿವ ತಂಗಡಗಿ ಚಾಲನೆ

KannadaprabhaNewsNetwork |  
Published : Aug 26, 2025, 01:05 AM IST
 ನವಲಿ ಸಮೀಪ: ಸಂಕನಾಳ - ಕಲ್ಮಂಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವ ಶಿವರಾಜ್ ತಂಗಡಗಿ ಅವರು ರವಿವಾರ ಭೂಮಿ ಪೂಜೆ ಮಾಡುವುದರ ಮೂಲಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಅಕ್ರಮ ಮರಳು ದಂಧೆ ನೆಪದಲ್ಲಿ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. 20 ವರ್ಷಗಳ ಹಿಂದೆ ರೈತರೊಬ್ಬರ ಹೊಲದ ಪಹಣಿ ಮೇಲೆ ಬೋಜಾ ಹೆಚ್ಚಿಸಿದ್ದರು. ಮತ್ತೆ ಈ ಅಧಿಕಾರಿ ಅದೇ ರೈತರ ಹೊಲದ ಮೇಲೆ ವಿನಾಕಾರಣ ಬೋಜಾ ಹೆಚ್ಚಿಸಿದ್ದಾರೆ ಎಂದು ಸಂಕನಾಳ ಗ್ರಾಮಸ್ಥರು ಕಂದಾಯ ನಿರೀಕ್ಷಕ ಹನುಮಂತಪ್ಪ ವಿರುದ್ಧ ಸಚಿವ ಶಿವರಾಜ ತಂಗಡಗಿ ಬಳಿ ಬಳಿ ದೂರು ಸಲ್ಲಿಸಿದರು.

ನವಲಿ:

ನವಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನಾಳದಿಂದ ಕಲ್ಮಂಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಶಿವರಾಜ್ ತಂಗಡಗಿ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಸಚಿವರು, ಕಳೆದ ಸಾಲಿನಲ್ಲಿ ₹ 1. 90 ಕೋಟಿ ವೆಚ್ಚದಲ್ಲಿ ಸಂಕನಾಳದಿಂದ 2 ಕಿಲೋ ಮೀಟರ್‌ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಈಗ ಮುಂದುವರಿದ 1 ಕಿಲೋ ಮೀಟರ್‌ ಡಾಂಬರೀಕರಣಕ್ಕೆ ₹ 1 ಕೋಟಿ ಬಿಡುಗಡೆಯಾಗಿದೆ ಎಂದರು.

ಕಿರುಕುಳ ಆರೋಪ:

ಇದೇ ವೇಳೆ ರೈತರು ಕಂದಾಯ ನಿರೀಕ್ಷಕ ಹನುಮಂತಪ್ಪ ವಿರುದ್ಧ ಸಚಿವರ ಬಳಿ ದೂರು ಸಲ್ಲಿಸಿದರು. ಅಕ್ರಮ ಮರಳು ದಂಧೆ ನೆಪದಲ್ಲಿ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. 20 ವರ್ಷಗಳ ಹಿಂದೆ ರೈತರೊಬ್ಬರ ಹೊಲದ ಪಹಣಿ ಮೇಲೆ ಬೋಜಾ ಹೆಚ್ಚಿಸಿದ್ದರು. ಮತ್ತೆ ಈ ಅಧಿಕಾರಿ ಅದೇ ರೈತರ ಹೊಲದ ಮೇಲೆ ವಿನಾಕಾರಣ ಬೋಜಾ ಹೆಚ್ಚಿಸಿದ್ದಾರೆ ಎಂದು ಸಂಕನಾಳ ಗ್ರಾಮಸ್ಥರು ದೂರಿದರು. ಪಕ್ಷಪಾತ ನೀತಿ ಅನುಸರಿಸುತ್ತಿರುವ ಅಧಿಕಾರಿಯನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಈ ಹಿಂದೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಜನ ಬೇಸರ ವ್ಯಕ್ತಪಡಿಸಿದರು. ಆಗ ಸಚಿವರು, ರೈತರಿಗೆ ಕಿರುಕುಳ ಕೊಡದಂತೆ ಎಚ್ಚರ ವಹಿಸಬೇಕೆಂದು ತಾಕೀತು ಮಾಡಿದರು.

ಈ ವೇಳೆ ಗ್ರಾಪಂ ಪಿಡಿಒ ವೀರಣ್ಣ ನೇಕ್ರಳ್ಳಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ವಿರುಪಣ್ಣ ಕಲ್ಲೂರು, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶಿವರೆಡ್ಡಿ ಖ್ಯಾಡೇದ, ನವಲಿ ಗ್ರಾಪಂ ಉಪಾಧ್ಯಕ್ಷ ನಾಗರಾಜ್ ತಳವಾರ, ಕೆ.ಎನ್. ಪಾಟೀಲ್, ಶಿವರೆಡ್ಡಿ ವಕೀಲರು. ಸಿದ್ಧನಗೌಡ ಮಾಲಿಪಾಟೀಲ್, ಜಡಿಯಪ್ಪ ಭೋವಿ, ಹನುಮಂತಪ್ಪ ಕಲ್ಲೂರು, ಚಿದಾನಂದಪ್ಪ ಈಳಿಗೇರ, ಗ್ರಾಪಂ ಸದಸ್ಯರಾದ ದುರುಗಪ್ಪ ಭಜಂತ್ರಿ, ದೇವರಾಜ್ ಉದ್ದಿಹಾಳ, ಉಮೇಶ, ಕೆಡಿಪಿ ಸದಸ್ಯ ಯಲ್ಲಪ್ಪ ಉದ್ಯಾಳ, ಬಸವರಾಜ್ ಸಂಕನಾಳ ಉಪಸ್ಥಿತರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ