ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿಯ ದಲಾಲ್ ಪರಿವಾರದ ಚನ್ನಮ್ಮಾ ಫಾರ್ಮಹೌಸ್‌ನಲ್ಲಿ ಶನಿವಾರ ಬಾಗಲಕೋಟ ಜಿಲ್ಲಾ, ರಬಕವಿ-ಬನಹಟ್ಟಿ ತಾಲೂಕು ಪಂಚಮಸಾಲಿ ಮಹಾಸಭಾ ಮತ್ತು ವಕೀಲರ ಪರಿಷತ್ ಜಂಟಿಯಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮದೇ ಸರ್ಕಾರವಿದ್ದರೂ ಪ್ರತಿಭಟನೆ ನಡೆಸಿ, ಸಿಎಂ ಭೇಟಿ ಮಾಡಿಸಿ ೨ಡಿ ಮೀಸಲಾತಿ ಕಲ್ಪಿಸಿದ್ದರೂ ಅದನ್ನು ಸುಪ್ರೀಂನಲ್ಲಿ ಪ್ರಶ್ನಿಸಿ ತಡೆ ತಂದ ಕಾರಣ ನಮ್ಮ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ಸರ್ಕಾರ ಬಂದು ಒಂದೂವರೆ ವರ್ಷ ಗತಿಸಿದರೂ ಬೊಗಳೆ ಬಿಟ್ಟವರು ತೆಪ್ಪಗಿರುವುದನ್ನು ಸಮಾಜ ಖಂಡಿಸಬೇಕೆಂದು ಕರೆ ನೀಡಿದರು.ಕೂಡಲಸಂಗಮ ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ಕಳೆದ ಮೂರುವರೆ ವರ್ಷಗಳ ಹೋರಾಟಕ್ಕೆ ತೀವ್ರ ಬಲ ಬಂದಿದೆ. ಇದೀಗ ಕನಿಷ್ಟವೆಂದರೂ ೧೦ ಸಾವಿರ ವಕೀಲರು ಹಾಗೂ ೫ ಸಾವಿರ ಟ್ರ್ಯಾಕ್ಟರ್‌ಗಳ ಮೂಲಕ ಡಿ.೧೦ ರಂದು ಸುವರ್ಣಸೌಧ ಮುತ್ತಿಗೆ ಹಾಕುವ ಮೂಲಕ ಪಂಚಮಸಾಲಿ ಹೋರಾಟದ ಸ್ವರೂಪ ಬದಲಾವಣೆಯೊಂದಿಗೆ ಮೀಸಲಾತಿ ಹೋರಾಟದ ಜಯ ಸಾಧಿಸಲಿದೆ ಎಂದರು.
ಜನಪ್ರತಿನಿಧಿಗಳ ಮನಸ್ಥಿತಿ ಬದಲಾದೀತು ಆದರೆ ಸಮಾಜದ ಹೋರಾಟಗಾರರದ್ದು ಮೀಸಲಾತಿ ದೊರಕುವುದೊಂದೇ ಉದ್ದೇಶ. ಈ ಹೋರಾಟದಿಂದ ಮತ್ತೊಂದು ನರಗುಂದ ಬಂಡಾಯವಾಗುವುದು ನಿಶ್ಚಿತ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ತಿಳಿಸಿದರು.
ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ, ತಾಲೂಕಾಧ್ಯಕ್ಷ ಶ್ರೀಶೈಲ ದಲಾಲ, ಏಗಪ್ಪ ಸವದಿ, ಬಾಬಾಗೌಡ ಪಾಟೀಲ, ಸಿದ್ಧನಗೌಡ ಪಾಟೀಲ, ಜಯವಂತ ಮಿಳ್ಳಿ, ಲಕ್ಕಪ್ಪ ಪಾಟೀಲ, ಮಹಾದೇವ ಕೊಟ್ಯಾಳ, ಪ್ರಭು ಪಾಲಭಾಂವಿ, ಪ್ರಭು ನೇಸೂರ, ಸಂಜಯ ತೆಗ್ಗಿ, ನ್ಯಾಯವಾದಿ ಎಸ್.ಬಿ.ಗೌಡಪ್ಪನವರ, ರವೀಂದ್ರ ಸಂಪಗಾಂವಿ, ಅಪ್ಪು ಪಾಟೀಲ ಸೇರಿದಂತೆ ರಬಕವಿ-ಬನಹಟ್ಟಿ, ತೇರದಾಳ, ರಾಯಭಾಗ, ಮಹಾಲಿಂಗಪುರ, ಬೆಳಗಲಿ, ಚಿಮ್ಮಡ, ಜಗದಾಳ, ನಾವಲಗಿ, ಯಲ್ಲಟ್ಟಿ ಗ್ರಾಮಗಳ ಪ್ರಮುಖರಿದ್ದರು.