ಗದಗ: ಹಿರಿಯ ಶಾಸಕ ಎಚ್.ಕೆ. ಪಾಟೀಲ ಅವರಿಗೆ 2ನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ನೂತನ ಮಂತ್ರಿಗಳಿಗೆ ಕ್ಷೌರಸೇವೆ ಬಹಿಷ್ಕರಿಸುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಗದಗ- ಬೆಟಗೇರಿ ನಗರ ಘಟಕ ಹಾಗೂ ಜಿಲ್ಲಾ ಸವಿತಾ ಮತ್ತು ನಾಭಿಕ್ ಮರಾಠ ಸಮಾಜದ ವಿವಿಧ ಪದಾಧಿಕಾರಿಗಳು ಜಂಟಿಯಾಗಿ ಮಾತನಾಡಿದರು. ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರಾದ ಹನುಮಂತಪ್ಪ ರಾಂಪುರ, ವಿಕಾಸ ಕ್ಷೀರಸಾಗರ, ಅರುಣ ರಾಂಪುರ, ಪರಶುರಾಮ ಕೋಟೆಕಲ್ಲ, ರಾಜು ಮಾನೆ, ಎಲ್ಲಪ್ಪ ರಾಯಚೂರು, ನರಸಿಂಹ ಗುರ್ಜಾಲಕರ್ ಹಾಗೂ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಇದ್ದರು. 16ರಂದು ಎಚ್.ಕೆ. ಪಾಟೀಲ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ
ಗದಗ: ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅವರ ಅಭಿಮಾನಿ ಬಳಗದ ವತಿಯಿಂದ ಜೂ. 16ರಂದು ಮಂಗಳವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಅಭಿಮಾನಿ ಬಳಗದ ಪ್ರಮುಖರು ತಿಳಿಸಿದ್ದಾರೆ.ಮಂಗಳವಾರ ಬೆಳಗ್ಗೆ 11ಕ್ಕೆ ನಗರದ ದಿ. ಕಾಟನ್ ಸೇಲ್ ಸೊಸೈಟಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಭೂಮರಡ್ಡಿ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಟಾಂಗಾ ಕೂಟ, ಬಸವೇಶ್ವರ ಸರ್ಕಲ್, ಪಂಚರ ಹೊಂಡ, ಜೋಡ ಮಾರುತಿ ದೇವಸ್ಥಾನ ಮಾರ್ಗವಾಗಿ ಮುಳಗುಂದ ನಾಕಾ ತಲುಪಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿ.ಬಿ. ಅಸೂಟಿ, ಗುರಣ್ಣ ಬಳಗಾನೂರ, ರವಿ ಮೂಲಿಮನಿ, ಬಸವರಾಜ ಸುಂಕಾಪೂರ, ನೀಲಮ್ಮ ಬೋಳನವರ, ಅಶೋಕ ಮಂದಾಲಿ, ಬರಕತಅಲಿ ಮುಲ್ಲಾ, ಅನ್ವರ ನದಾಫ್, ಬಸವರಾಜ ಕಡೆಮನಿ, ಶಾಂತಣ್ಣ ಮುಳವಾಡ, ಬಿ.ಆರ್. ದೇವರಡ್ಡಿ, ಮಹಮ್ಮದ್ ಶಾಲಗಾರ, ಪರಪ್ಪ ಕಮತರ, ಮೋಹನ ದುರಗಣ್ಣವರ ಮುಂತಾದವರು ತಿಳಿಸಿದ್ದಾರೆ.