ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಕರ್ತವ್ಯ ಎಂದ ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Jun 01, 2026, 01:30 AM IST
ಸಾರ್ವಜನಿಕರಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹ ಣೆಯ ಜಾಗೃತಿ ಮೂಡಿಸಲು ಸ್ವಚ್ಛ ಭಾರತ್ ಮಿಷನ್ 2.0 ರ ಅಡಿಯಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಯಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ವಸ್ತುಪ್ರದರ್ಶನ ಹಾಗೂ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಘನತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ- 2026 ಕಾಯ್ದೆ ಪಾಲನೆ ಕಡ್ಡಾಯವಾಗಿದ್ದು, ೨೦೨೬ ಏಪ್ರಿಲ್ ೧ರಿಂದ ಜಾರಿಗೆ ಬಂದಿದೆ. ಹಸಿ- ಒಣ ತ್ಯಾಜ್ಯದೊಂದಿಗೆ ಇದೀಗ ಮತ್ತೆರಡು ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಚಿಂತನೆ ನಡೆಸಿದ್ದು, ಸಾರ್ವಜನಿಕರು ಇನ್ಮುಂದೆ ಮೂಲದಲ್ಲಿಯೇ ಕಸ ವಿಂಗಡಣೆ ಮಾಡಬೇಕಾಗಿದೆ. ಪ್ರತಿ ಮನೆಯಿಂದ ನಾಲ್ಕು ತರಹದ ಕಸವನ್ನು ವಿಂಗಡೆ ಮಾಡಿ ಕೊಡಲೇಬೇಕಿದೆ. ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಸಂಗ್ರಹಿಸಿ ನೀಡುವಂತೆ ಸಾರ್ವಜನಿಕರಿಗೆ ನಿರ್ದೇಶನ ನೀಡಲಾಗಿದೆ. ಪಟ್ಟಣದಲ್ಲಿ ನಿತ್ಯ ಮನೆ ಬಾಗಿಲಿಗೆ ಕಸದ ಗಾಡಿಗಳು ಬರುತ್ತಿವೆ. ಈ ಸಮಯದಲ್ಲಿ ಬಹಳಷ್ಟು ಮಂದಿ ಹೊರಗೆ ಬಂದು ಕಸಕೊಡದೇ, ಗಾಡಿ ತೆರಳಿದ ನಂತರ ಚಂರಡಿಗಳಿಗೆ, ರಸ್ತೆ ಬದಿಗಳಲ್ಲಿ ಬೀಸಾಡುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸ್ವಚ್ಛತೆ ಎಂಬುದು ಯಾರೋ ಒಬ್ಬರಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೀಮಿತವಾದ ಕಾರ್ಯವಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಪುರಸಭೆ ವತಿಯಿಂದ ಸಾರ್ವಜನಿಕರಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸಲು ಸ್ವಚ್ಛ ಭಾರತ್ ಮಿಷನ್ 2.0, ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಯಡಿ ಘನ ತ್ಯಾಜ್ಯ ನಿರ್ವಹಣೆ, ವಸ್ತುಪ್ರದರ್ಶನ ಹಾಗೂ ಮ್ಯಾರಾಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾರದ್ದೋ ಒತ್ತಾಯಕ್ಕೆ, ಯಾರದ್ದೋ ತೋರಿಕೆಗೆ ನಡೆಸುವ ಬದಲು ಪ್ರತಿಯೊಬ್ಬರೂ ಸ್ವ- ಇಚ್ಛೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದಾಗ ಮಾತ್ರ ಅದರ ಆಶಯ ಸಂಪೂರ್ಣ ಯಶಸ್ಸು ಕಾಣುತ್ತದೆ ಎಂದರು.

ಘನತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ- 2026 ಕಾಯ್ದೆ ಪಾಲನೆ ಕಡ್ಡಾಯವಾಗಿದ್ದು, ೨೦೨೬ ಏಪ್ರಿಲ್ ೧ರಿಂದ ಜಾರಿಗೆ ಬಂದಿದೆ. ಹಸಿ- ಒಣ ತ್ಯಾಜ್ಯದೊಂದಿಗೆ ಇದೀಗ ಮತ್ತೆರಡು ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಚಿಂತನೆ ನಡೆಸಿದ್ದು, ಸಾರ್ವಜನಿಕರು ಇನ್ಮುಂದೆ ಮೂಲದಲ್ಲಿಯೇ ಕಸ ವಿಂಗಡಣೆ ಮಾಡಬೇಕಾಗಿದೆ. ಪ್ರತಿ ಮನೆಯಿಂದ ನಾಲ್ಕು ತರಹದ ಕಸವನ್ನು ವಿಂಗಡೆ ಮಾಡಿ ಕೊಡಲೇಬೇಕಿದೆ. ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಸಂಗ್ರಹಿಸಿ ನೀಡುವಂತೆ ಸಾರ್ವಜನಿಕರಿಗೆ ನಿರ್ದೇಶನ ನೀಡಲಾಗಿದೆ. ಪಟ್ಟಣದಲ್ಲಿ ನಿತ್ಯ ಮನೆ ಬಾಗಿಲಿಗೆ ಕಸದ ಗಾಡಿಗಳು ಬರುತ್ತಿವೆ. ಈ ಸಮಯದಲ್ಲಿ ಬಹಳಷ್ಟು ಮಂದಿ ಹೊರಗೆ ಬಂದು ಕಸಕೊಡದೇ, ಗಾಡಿ ತೆರಳಿದ ನಂತರ ಚಂರಡಿಗಳಿಗೆ, ರಸ್ತೆ ಬದಿಗಳಲ್ಲಿ ಬೀಸಾಡುತ್ತಿದ್ದಾರೆಂದು

ಅಸಮಾಧಾನ ವ್ಯಕ್ತಪಡಿಸಿದರು.

ಹೀಗಾಗಿ ನಗರ ಸ್ವಚ್ಛಮುಕ್ತವಾಗಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ತಪ್ಪದೇ ಕಸವನ್ನು ಬುಟ್ಟಿಗೆ ಅಥವಾ ಕಸದ ಗಾಡಿಗೆ ಕೊಟ್ಟರೆ ಪಟ್ಟಣ ಸ್ವಚ್ಛ ನಗರವಾಗುವುದರಲ್ಲಿ ಸಂಶಯವಿಲ್ಲ. ಪಟ್ಟಣ ಸುಂದರ ಹಾಗೂ ಸದಾ ಸ್ವಚ್ಛವಾಗಿರಬೇಕಾದರೆ ಸಾರ್ವಜನಿಕರ ಸಹಕಾರವೂ ಅತೀ ಮುಖ್ಯ. ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುವ ಮನಸ್ಥಿತಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ಪ್ರತಿನಿತ್ಯ ಅಡುಗೆ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಬೇರ್ಪಡಿಸಿ ಕಸದ ಗಾಡಿಗಳಿಗೆ ತಪ್ಪದೇ ಕಸವನ್ನು ಕೊಡಬೇಕು ಎಂದು ಸೂಚಿಸಿದರು.

ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಮಾತನಾಡಿ, 2026ರ ನಿಯಮಗಳ ಪ್ರಕಾರ ಹಸಿ, ಒಣಕಸಗಳ ಜೊತೆ ಸ್ಯಾನಿಟರಿ ತ್ಯಾಜ್ಯ (ಡೈಪರ್, ಪ್ಯಾಡ್, ನಿರೋಧಗಳು) ಹಾಗೂ ವಿಶೇಷ ಕಾಳಜಿ ತ್ಯಾಜ್ಯ (ಗಾಜು, ಬಲ್ಪ್, ಬ್ಯಾಟರಿ, ಔಷಧಿ ಬಾಟಲ್, ಬಣ್ಣದ ಡಬ್ಬ, ಕ್ರಿಮಿನಾಶಕ ಡಬ್ಬ, ಬಳಸಿದ ಸೂಜಿ, ಸಿರೀಂಜ್ ಇತ್ಯಾದಿ) ವಸ್ತುಗಳನ್ನು ಕೂಡ ಪ್ರತ್ಯೇಕವಾಗಿ ನೀಡಬೇಕಿದೆ ಎಂದರು.

ಪಟ್ಟಣದ ಫೋಕಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪುರಸಭೆ ಸಹಯೋಗದೊಂದಿಗೆ ಘನ ತ್ಯಾಜ್ಯ ನಿರ್ವಹಣೆ ಅಂಗವಾಗಿ ಆಯೋಜಿಸಲಾಗಿದ್ದ ಸ್ವಚ್ಛತಾ ಮ್ಯಾರಾಥಾನ್‌ಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.

ಘನತ್ಯಾಜ್ಯ ವಿಲೇವಾರಿ, ಹಸಿ ಕಸ, ಒಣ ಕಸ ಹಾಗೂ ಸ್ಯಾನಿಟರಿ ಕಸ ವಿಂಗಡಣೆ, ಆರಂಭದಲ್ಲಿ ತ್ಯಾಜ್ಯವನ್ನು ಸಂಸ್ಕರಿಸುವ, ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡದಿರುವುದು. ಖಾಲಿ ನಿವೇಶನಗಳಲ್ಲಿ ಕಸ ಹಾಕದಿರುವುದು ಸೇರಿ ಇನ್ನಿತರ ವಿಷಯಗಳ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಪುರಸಭಾ ಪರಿಸರ ಅಭ್ಯಂತರರಾದ ಕಾವ್ಯಶ್ರೀ, ಕಚೇರಿ ವ್ಯವಸ್ಥಾಪಕಿ ಎಲ್.ಬಿ. ಆಶಾದೇವಿ, ಹಿರಿಯ ಆರೋಗ್ಯ ನಿರೀಕ್ಷಕ ಕೆ. ಎಚ್. ಮೂರ್ತಿ, ಸಮುದಾಯ ಸಂಘಟಕಿ ಶಾರದಮ್ಮ ಕಿರಿಯ ಅಭಿಯಂತರ ಎಸ್.ಇ. ಗಿರೀಶ್, ಪೌರಕಾರ್ಮಿಕರು, ವರ್ಗದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನ- ಸೋಲಾಪುರ ರೈಲು ನಿಲುಗಡೆಗೆ ಸಚಿವ ಸೋಮಣ್ಣ ಚಾಲನೆ
ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲು ಬಂಜಾರ ಸಮಾಜದ ಆಗ್ರಹ