ಸಾಸಲು ಭಾಗದ ಕೆನಾಲ್‌ನಲ್ಲಿ ಇನ್ನೂ ಸ್ವಲ್ಪ ಹೂಳು ತುಂಬಿದ್ದರಿಂದ ಅದರ ತೆರವು ಕಾರ್ಯ ನಡೆಯುತ್ತಿದೆ, ಇನ್ನೆರಡು ಮೂರು ದಿನಗಳಲ್ಲಿ ಸಾಸಲು, ಪೆಮ್ಮಲದೆವರಹಳ್ಳಿ, ಶೆಟ್ಟಿಕೆರೆ ಭಾಗಕ್ಕೂ ನೀರು ಹರಿಸಲಾಗುವುದು, ನಂತರ ಇತ್ತೀಚೆಗೆ ಗ್ಯಾರೇಹಳ್ಳಿ ಬಳಿ ಚಾನಲ್ ಕೆಲಸದಲ್ಲಿ ಮಣ್ಣು ಕುಸಿತವಾಗಿದ್ದು ಅದನ್ನು ತೆರವು ಗೊಳಿಸಿದ ತಕ್ಷಣ ದಬ್ಬೇಘಟ್ಟದ ಭಾಗಕ್ಕೂ ಹರಿಸಿ ನವಿಲೆ ಕೆರೆಗೂ ಹರಿಸಲು ಕ್ರಮ ಕೈಗೊಳ್ಳಲಾಗುವುದು.
ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನ ೨೬ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಯಡಿ 4 ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ಈ ವರ್ಷದಲ್ಲಿ ಸಮರ್ಪಕವಾಗಿ ನೀರು ಹರಿಸಲು ಚಾಲನೆ ನೀಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ತಾಲೂಕಿನ ಏತ ನೀರಾವರಿ ಯೋಜನೆಯ ಕುಂದೂರು ಬಳಿಯ ಪಂಪ್‌ಹೌಸ್‌ನಲ್ಲಿ ಯಂತ್ರಗಳಿಗೆ ಚಾಲನೆ ನೀಡಿ ಮಾತನಾಡಿ, ಚಿಕ್ಕನಾಯಕನಹಳ್ಳಿ ಭಾಗದ ಹೇಮಾವತಿ ನೀರಾವರಿ ಯೋಜನೆಯಿಂದ ನಮ್ಮ ತಾಲೂಕಿನ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುವುದು ಸೇರಿದಂತೆ ೨೬ ಕೆರೆಗಳ ಪೈಕಿ ಜೆ.ಸಿ.ಪುರ, ಬ್ಯಾಡರಹಳ್ಳಿ, ನಡುವನಹಳ್ಳಿ ಹಾಗೂ ನಾಗೇನಹಳ್ಳಿಯ ೪ ಕೆರೆಗಳಿಗೆ ಏತ ನೀರಾವರಿಯ ಮೂಲಕ ನೀರು ಹರಿಯಲಿದ್ದು, ಇದು ಕುಡಿಯುವ ನೀರಿನ ಉದ್ದೇಶಕ್ಕೆ ಆಗಿರುತ್ತದೆ. ಕೆರೆಗಳಿಗೆ ನೀರು ಹರಿಸುವುದರಿಂದ ಅಂತರ್ಜಲ ಹೆಚ್ಚಾಗಿ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.
ಸಾಸಲು ಭಾಗದ ಕೆನಾಲ್‌ನಲ್ಲಿ ಇನ್ನೂ ಸ್ವಲ್ಪ ಹೂಳು ತುಂಬಿದ್ದರಿಂದ ಅದರ ತೆರವು ಕಾರ್ಯ ನಡೆಯುತ್ತಿದೆ, ಇನ್ನೆರಡು ಮೂರು ದಿನಗಳಲ್ಲಿ ಸಾಸಲು, ಪೆಮ್ಮಲದೆವರಹಳ್ಳಿ, ಶೆಟ್ಟಿಕೆರೆ ಭಾಗಕ್ಕೂ ನೀರು ಹರಿಸಲಾಗುವುದು, ನಂತರ ಇತ್ತೀಚೆಗೆ ಗ್ಯಾರೇಹಳ್ಳಿ ಬಳಿ ಚಾನಲ್ ಕೆಲಸದಲ್ಲಿ ಮಣ್ಣು ಕುಸಿತವಾಗಿದ್ದು ಅದನ್ನು ತೆರವು ಗೊಳಿಸಿದ ತಕ್ಷಣ ದಬ್ಬೇಘಟ್ಟದ ಭಾಗಕ್ಕೂ ಹರಿಸಿ ನವಿಲೆ ಕೆರೆಗೂ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹೇಮಾವತಿ ನಾಲಾ ಇಂಜಿನಿಯರ್ ಪ್ರಭಾಕರ್ ಮಾತನಾಡಿ, ೨೬ ಕೆರೆಗಳ ಹೇಮಾವತಿ ನೀರಾವರಿ ಯೋಜನೆಯಡಿ ೪ ಕೆರೆಗಳಿಗೆ ಲಿಫ್ಟ್ ಮೂಲಕ ೧೪ ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು, ಇದು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರವಾಗಿದೆ, ಇನ್ನು ಉಳಿದ ಕೆರೆಗಳ ಭಾಗದ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ನಂತರ ಸಮರ್ಪಕವಾಗಿ ಈ ಭಾಗಕ್ಕೆ ಹಂಚಿಕೆಯಾಗಿರುವ ೦.೮೦ಟಿಎಂಸಿ ನೀರನ್ನು ಹರಿಸಲಾಗುವುದು ಎಂದರು.
ಹೇಮಾವತಿ ಎಇ ಸೌಜನ್ಯ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಮಚಂದ್ರಯ್ಯ, ಅಗಸರಹಳ್ಳಿ ನರಸಿಂಹಮೂರ್ತಿ ಹಾಗೂ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.