ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಸಂತೇವೇರಿ ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಸಂತೇವೇರಿ ಬಡಾವಣೆಯಲ್ಲಿ ತಲಾ ₹5ಲಕ್ಷ ವೆಚ್ಚದಲ್ಲಿ ಒಟ್ಟು 10 ಲಕ್ಷ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ದೊರಕುವಂತಾಗಿದೆ. ಪಟ್ಟಣದಲ್ಲಿ ಅಮೃತ್ 2 ಯೋಜನೆಯಡಿ ಸುಮಾರು 15 ಕೋಟಿ ರು. ವೆಚ್ಚದಲ್ಲಿ ಇಡೀ ಪಟ್ಟಣಕ್ಕೆ ಶುದ್ಧ ನೀರು ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಾಮಗಾರಿ ಮುಗಿದರೆ ಪ್ರತಿಯೊಂದು ಕುಟುಂಬಗಳಿಗೂ ಶುದ್ಧ ಕುಡಿಯುವ ನೀರು ದೊರಕುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಬಿಜೆಪಿ ಮುಖಂಡರುಗಳಾದ ವಿನಯ್, ನವೀನ್ ಶೆಟ್ಟಿ, ಮದನ್, ಚಂದ್ರಣ್ಣ ಮುಂತಾದವರು ಹಾಜರಿದ್ದರು.