ತುಂಗಾ ನದಿಗೆ ಶಾಸಕರಿಂದ ಭಕ್ತಿಪೂರ್ವಕ ಬಾಗಿನ ಸಲ್ಲಿಸಿದ ಶಾಸಕ ಚನ್ನಬಸಪ್ಪ

KannadaprabhaNewsNetwork |  
Published : Aug 05, 2026, 03:30 AM IST
ಪೋಟೋ: 04ಎಸ್‌ಎಂಜಿಕೆಪಿ01ಶಿವಮೊಗ್ಗದಲ್ಲಿ ಉಕ್ಕಿ ಹರಿಯುತ್ತಿರುವ ತುಂಗಾ ನದಿಗೆ ಜಿಲ್ಲಾ ಬಬ್ಬೂರು ಕಮ್ಮೆ ಸೇವಾ ಸಮಿತಿ ಹಾಗೂ ಮಹಿಳಾ ಘಟಕದಿಂದ ಸಂಘದಿಂದ ಬಾಗಿನ ಸಮರ್ಪಣೆ ಮಾಡಲಾಯಿತು.  | Kannada Prabha

ಸಾರಾಂಶ

MLA S.N. Channabasappa said that offering a bow to the mother Tunga River, the lifeblood and symbol of prosperity of Shivamogga city, is a sacred heritage of our country and a symbol of gratitude.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ ಮೈದುಂಬಿ ಹರಿಯುತ್ತಿರುವ ಜೀವನದಾಯಿನಿ ತಾಯಿ ತುಂಗಾ ನದಿಗೆ ಬಾಗಿನ ಅರ್ಪಿಸುವುದು ನಮ್ಮ ನಾಡಿನ ಪವಿತ್ರ ಪರಂಪರೆ ಮತ್ತು ಕೃತಜ್ಞತೆಯ ಸಂಕೇತವಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ ನಗರ ಬಿಜೆಪಿ ವತಿಯಿಂದ, ಕೋಟೆ ರಸ್ತೆಯ ಐತಿಹಾಸಿಕ ಕೋರ್ಪಳಯ್ಯನ ಛತ್ರದ ಆವರಣದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಭಕ್ತಿಪೂರ್ವಕವಾಗಿ ಬಾಗಿನ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಯಿ ತುಂಗೆಯ ಅನಂತ ಕೃಪೆಯಿಂದ ನಮ್ಮ ಶಿವಮೊಗ್ಗ ನಗರ ಹಾಗೂ ಇಡೀ ಜಿಲ್ಲೆಯಲ್ಲಿ ಸದಾ ಸುಭಿಕ್ಷೆ, ಸಮೃದ್ಧಿ ನೆಲೆಸಲಿ. ನಮ್ಮ ಭಾಗದ ಅನ್ನದಾತರ ಮೊಗದಲ್ಲಿ ನಿರಂತರ ಮಂದಹಾಸ ಮೂಡಿ, ಪ್ರತಿಯೊಬ್ಬ ನಾಗರಿಕನಿಗೂ ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಸೌಹಾರ್ದತೆ ಸಿಗಲಿ ಎಂದು ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಪ್ರಮುಖರಾದ ಎಸ್.ಜ್ಞಾನೇಶ್ವರ್, ಮೋಹನ್‌ರೆಡ್ಡಿ, ರಶ್ಮಿ ಶ್ರೀನಿವಾಸ್, ಅನಿತಾ ರವಿಶಂಕರ್, ಅಣ್ಣಪ್ಪ, ಮಂಜುನಾಥ್, ಶ್ರೀನಾಗ್, ಬಿಜೆಪಿ ಶಿವಮೊಗ್ಗ ಜಿಲ್ಲಾ ಮತ್ತು ನಗರ ಘಟಕದ ಗೌರವಾನ್ವಿತ ಪದಾಧಿಕಾರಿಗಳು, ಪ್ರಮುಖ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

----------------

ಬಾಕ್ಸ್.....ಬಬ್ಬೂರು ಕಮ್ಮೆ ಸೇವಾ ಮಹಿಳೆಯರಿಂದಲೂ ಬಾಗಿನ

ಶಿವಮೊಗ್ಗದಲ್ಲಿ ಉಕ್ಕಿ ಹರಿಯುತ್ತಿರುವ ತುಂಗಾ ನದಿಗೆ ಜಿಲ್ಲಾ ಬಬ್ಬೂರು ಕಮ್ಮೆ ಸೇವಾ ಸಮಿತಿ ಹಾಗೂ ಮಹಿಳಾ ಘಟಕದಿಂದ ಸಂಘದಿಂದ ಬಾಗಿನ ಸಮರ್ಪಣೆ ಮಾಡಲಾಯಿತು.

ಜಿಲ್ಲಾ ಬಬ್ಬೂರು ಕಮ್ಮೆ ಸೇವಾ ಸಮಿತಿ ಅಧ್ಯಕ್ಷ ವೇ.ಬ್ರ.ಶ್ರೀ ಕಾರಕೋಡ್ಲು ಗುರುಮೂರ್ತಿ, ಉಪಾಧ್ಯಕ್ಷ ಶಂಕರಮೂರ್ತಿ, ಪ್ರಧಾನ ಕಾರ್ಯದರ್ಶಿ ಎಸ್.ನಾಗೇಶ್, ನಿರ್ದೇಶಕರಾದ ಲಕ್ಷ್ಮೀ ಶ್ರೀಧರ, ಜ್ಯೋತಿ ರವಿಕುಮಾರ್, ಸರಸ್ವತಿ, ಮಂಗಳಾ ರಾಮಮೂರ್ತಿ, ವಿನಯ್, ರಾಜ್ಯ ಘಟಕದ ನಿರ್ದೇಶಕ ಎಂ.ಬಿ. ಪ್ರಕಾಶ್, ಮಹಿಳಾ ಘಟಕದ ಸದಸ್ಯರಾದ ಶಾಂತಿ, ಸಂಧ್ಯಾ, ವಿಜಯಶ್ರೀ, ಶಾಂತಾ, ಸುಜಾತಾ, ಆಶಾ ಈ ಸಂದರ್ಭದಲ್ಲಿದ್ದರು.

------------------------

ಬಾಕ್ಸ್‌...

ನಾಗೇಂದ್ರಗೆ ಸಚಿವ ಸ್ಥಾನ: ಚನ್ನಬಸಪ್ಪ ಕಿಡಿ

ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಒಬ್ಬ ನೌಕರರನ್ನು ಬಲಿ ತೆಗೆದುಕೊಂಡವರು ಈಗ ಮತ್ತೆ ಮಂತ್ರಿಯಾಗಿದ್ದಾರೆ. ಇದು ಕಾಂಗ್ರೆಸ್‌ನ ದುಷ್ಟ ಆಡಳಿತಕ್ಕೆ ಸಾಕ್ಷಿ ಎಂದು ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಕಿಡಿಕಾರಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಅಧಿಕಾರಿಯಾಗಿದ್ದ ಶಿವಮೊಗ್ಗದ ಚಂದ್ರಶೇಖರರನ್ನು ಬಲಿ ತೆಗೆದುಕೊಂಡ ನಾಗೇಂದ್ರ ಮತ್ತೆ ಮಂತ್ರಿಯಾಗಿದ್ದಾರೆ. ನಾಗೇಂದ್ರನ ಪರಿಣಾಮ ಶಿವಮೊಗ್ಗದಲ್ಲಿ ಚಂದ್ರಶೇಖರ್ ಕುಟುಂಬ ಬೀದಿಗೆ ಬಂದಿದೆ. ಚಂದ್ರಶೇಖರ್ ಹೆಣದ ಮೇಲೆ ಅಧಿಕಾರ ಮಾಡಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ. ಇದೊಂದು ಕಳಂಕಿತ ಸರ್ಕಾರ. ಸರಿಯಾದ ಕ್ರಮ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದರು. ಮತ್ತೇ ಅಧಿಕಾರ ಸಿಕ್ಕಿದೆ. ಇದು ಅಕ್ಷಮ್ಯ ಅಪರಾಧ. ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ವಾಲ್ಮೀಕಿ ಹಗರಣ ಕಣ್ಣ ಮುಂದೆ ರಾಚುತ್ತಿದೆ. ಚಂದ್ರಶೇಖರ್ ಕುಟುಂಬದ ಮುಂದೆ ನೇಣಿಗೆ ಶರಣಾದ ಚಿತ್ರಣ ಕಣ್ಣ ಮುಂದಿದೆ.

ಮಾಡಬಾರದ್ದನ್ನ ಮಾಡಿದ ಅನೇಕರು ಮಂತ್ರಿಮಂಡಲದಲ್ಲಿ ಇದ್ದಾರೆ. ಕಾಂಗ್ರೆಸ್ ದೇಶಕ್ಕೆ ಏನು ಹೇಳಲು ಹೊರಟಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದು ಹರಿಹಾಯ್ದರು. ಸಚಿವ ಸಂಪುಟ ವಿಸ್ತರಣೆಯಾದಾಗ ಸಚಿವ ಸ್ಥಾನ ಕೈ ತಪ್ಪಿದಾಗ ಈ ರೀತಿ ಹೇಳಿಕೆ ಸಹಜ. ಅನೇಕರು ತಮ್ಮ ನೋವನ್ನು ಹೊರಹಾಕುತ್ತಾರೆ. ಕೆಲವರು ರಾಜೀನಾಮೆ ಕೊಟ್ಟಿದ್ದಾರೆ. ಕೆಲವರು ಟೈಮ್ ಹೇಳಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ಆಲೋಚನೆ ಮಾಡುತ್ತೇ‌. ಇವೆಲ್ಲ ಸಾಂದರ್ಭಿಕವಾದ ಮಾತುಕತೆಗಳಷ್ಟೇ.

ರಾಜೀನಾಮೆ ಕೊಟ್ಟು ಮತ್ತೇ ಚುನಾವಣೆಯಲ್ಲಿ ಗೆಲ್ಲುವ ತಾಕತ್ತು ಕಾಂಗ್ರೆಸ್ ನವರಿಗಿಲ್ಲ. ಹಾಗಾಗೀ ಆ ಕೆಲಸ ಮಾಡ್ತಾರೆ ಅನ್ನೊ ನಂಬಿಕೆ ನನಗಿಲ್ಲ ಎಂದು ಲೇವಡಿ ಮಾಡಿದರು.

ಪ್ರಿಯಾಂಕ್ ಖರ್ಗೆ ಮಾನಸೀಕತೆ ಬದಲಾದಾಗ ರಾಜ್ಯದಲ್ಲಿ ಶಾಂತಿ ನೆಲೆಸುತ್ತೇ. ವ್ಯವಸ್ಥೆಗಳು ಕೂಡ ಸರಿಯಾಗುತ್ತೆ. ವಿಚಿತ್ರವಾದ ಮಾನಸಿಕತೆ ಪ್ರಿಯಾಂಕ್ ಖರ್ಗೆದು. ಪೊಲೀಸ್ ಇಲಾಖೆಯಲ್ಲಿ ಪರೀಕ್ಷೆ ನಡೆದ ವೇಳೆ ಕೆಲ ಅನಾಹುತಗಳಾಗಿವೆ. ಇದನ್ನು ಸರಿಪಡಿಸಬೇಕಾಗಿರೋದು ಪ್ರಿಯಾಂಕ್ ಖರ್ಗೆ ಜವಾಬ್ದಾರಿ ಎಂದರು.

-------------------------

ಪೋಟೋ: 04ಎಸ್‌ಎಂಜಿಕೆಪಿ03

ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಕೋಟೆ ರಸ್ತೆಯ ಐತಿಹಾಸಿಕ ಕೋರ್ಪಳಯ್ಯನ ಛತ್ರದ ಆವರಣದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಎಸ್.ಎನ್‌.ಚನ್ನಬಸಪ್ಪ ಬಾಗಿನ ಅರ್ಪಿಸಿದರು.

--------------------

ಪೋಟೋ: 04ಎಸ್‌ಎಂಜಿಕೆಪಿ01

(ಪ್ಯಾನೆಲ್‌ಗೆ)

ಶಿವಮೊಗ್ಗದಲ್ಲಿ ಉಕ್ಕಿ ಹರಿಯುತ್ತಿರುವ ತುಂಗಾ ನದಿಗೆ ಜಿಲ್ಲಾ ಬಬ್ಬೂರು ಕಮ್ಮೆ ಸೇವಾ ಸಮಿತಿ ಹಾಗೂ ಮಹಿಳಾ ಘಟಕದಿಂದ ಸಂಘದಿಂದ ಬಾಗಿನ ಸಮರ್ಪಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೀಡ್‌...ನಿಯಮಬಾಹಿರ ನೇಮಕಾತಿ ರದ್ದುಪಡಿಸಲು ಆಗ್ರಹ
ಅಟಲ್ ಪಿಂಚಣಿಗೆ ಜಿಲ್ಲೇಲಿ 1.58 ಲಕ್ಷಕ್ಕೂ ಅಧಿಕ ನೋಂದಣಿ