ವಿದ್ಯಾರ್ಥಿಗಳು ದಿನಪತ್ರಿಕೆ, ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು: ಕಣಿವೆ ವಿನಯ್ ಸಲಹೆ

KannadaprabhaNewsNetwork |  
Published : Aug 05, 2026, 03:30 AM IST
ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿಯನ್ನು ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರವಿದ್ಯಾರ್ಥಿಗಳು ದಿನ ಪತ್ರಿಕೆ, ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ದಾನಿ ಹಾಗೂ ಕಣಿವೆಯ ನಾಗ ಚಂದ್ರ ಪ್ರತಿಷ್ಠಾನ ಅಧ್ಯಕ್ಷ ಕಣಿವೆ ವಿನಯ್ ಸಲಹೆ ನೀಡಿದರು.

ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಸಮಾರಂಭ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ವಿದ್ಯಾರ್ಥಿಗಳು ದಿನ ಪತ್ರಿಕೆ, ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ದಾನಿ ಹಾಗೂ ಕಣಿವೆಯ ನಾಗ ಚಂದ್ರ ಪ್ರತಿಷ್ಠಾನ ಅಧ್ಯಕ್ಷ ಕಣಿವೆ ವಿನಯ್ ಸಲಹೆ ನೀಡಿದರು.

ಮಂಗಳವಾರ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಣಿವೆ ನಾಗಚಂದ್ರ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ನಡೆದ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡಪ್ರಭದ ಯುವ ಆವೃತ್ತಿಯನ್ನು ಎಸ್.ಎಸ್.ಎಲ್.ಸಿ. ಪ್ರತಿ ವಿದ್ಯಾರ್ಥಿಗಳು ಓದಬೇಕು. ಕನ್ನಡಪ್ರಭ ದಿನ ಪತ್ರಿಕೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಖಾದ್ರಿ ಶಾಮಣ್ಣ ಸಂಪಾದಕರಾಗಿದ್ದಾಗ ಬರೆದ ಸಂಪಾದಕೀಯವನ್ನು ಮುಖ್ಯಮಂತ್ರಿಗಳು ಪ್ರತಿ ದಿನ ಓದಿ ಆ ವಿಚಾರ ಅನುಷ್ಠಾನಕ್ಕೆ ತರುತ್ತಿದ್ದರು ಎಂಬುದು ಕನ್ನಡಪ್ರಭ ದಿನ ಪತ್ರಿಕೆ ಹೆಗ್ಗಳಿಕೆ.

ಇಂದಿನ ಶಿಕ್ಷಣದಲ್ಲಿ ಸಂಸ್ಕಾರದ ಕೊರತೆ ಇದೆ. ಹಿಂದೆ ಶಿಕ್ಷಣದಲ್ಲಿ ಶೇ.80 ರಷ್ಟು ಸಂಸ್ಕಾರವೇ ಇರುತ್ತಿತ್ತು. ಈಗಿನ ಶಿಕ್ಷಣ ಕೇವಲ ಅಂಕಗಳಿಕೆಗೆ ಮಾತ್ರ ಇದೆ.ಸಂಸ್ಕಾರದ ಕೊರತೆ ಇದೆ. ಸಂಸ್ಕಾರಯುತ ಶಿಕ್ಷಣ ಅಗತ್ಯ. ಮಕ್ಕಳಿಗೆ ಸರ್ಕಾರಿ ಶಾಲೆ ಯಲ್ಲಿ ಓದುತ್ತಿದ್ದೇವೆ ಎಂಬ ಕೀಳಿರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಕಲಿತವರು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ. ದೊಡ್ಡ, ದೊಡ್ಡ ಇಂಗ್ಲೀಷ್ ಶಾಲೆಯಲ್ಲಿ ಕಲಿತವರು ಇಂದು ವಿದೇಶದಲ್ಲಿದ್ದಾರೆ. ಆದರೆ, ಅವರ ವೃದ್ಧ ತಂದೆ, ತಾಯಿಗಳು ಅನಾಥಾಶ್ರಮ ದಲ್ಲಿದ್ದಾರೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾಗಿದ್ದ ಮುಖ್ಯೋಪಾಧ್ಯಾಯ ಗಂಗಾಧರಪ್ಪ ಮಾತನಾಡಿ ಒಂದು ದಿನ ಪತ್ರಿಕೆ ತರಬೇಕಾದರೆ ಹಲವಾರು ಜನರ ಪರಿಶ್ರಮವಿರುತ್ತದೆ. ಕನ್ನಡಪ್ರಭ ದಿನ ಪತ್ರಿಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ನಮ್ಮ ಶಾಲೆಯ 55 ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಯುವ ಆವೃತ್ತಿ ನೀಡುತ್ತಿದೆ. ಅದನ್ನು ಪ್ರತಿ ದಿನ ಓದಿದರೆ ನಿಮ್ಮ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಲಿದೆ. ದಾನ ನೀಡಿದವರಿಗೂ ಸಾರ್ಥಕವಾಗಲಿದೆ. ದಿನ ಪತ್ರಿಕೆಗಳು ಜ್ಞಾನದ ದಾಹ ತೀರಿಸಲಿದೆ ಎಂದರು.

ಅತಿಥಿಯಾಗಿದ್ದ ಕನ್ನಡಪ್ರಭ ದಿನ ಪತ್ರಿಕೆ ತಾಲೂಕು ವರದಿಗಾರ ಯಡಗೆರೆ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಟಿ.ವಿ, ಮೊಬೈಲ್ ಬಂದಿದ್ದರೂ ಈಗಲೂ ದಿನ ಪತ್ರಿಗೆಗಳ ಸುದ್ದಿಗಳಲ್ಲಿ ಹೆಚ್ಚು ನಿಖರತೆ ಹಾಗೂ ಸತ್ಯ ವಿರುತ್ತದೆ. ಕನ್ನಡಪ್ರಭ ನೀಡುವ 8 ಪುಟಗಳ ಯುವ ಆವೃತ್ತಿ ಪ್ರತಿ ದಿನ ತಪ್ಪದೆ ಓದಿದರೆ ನಿಮ್ಮ ಭಾಷಾ ಜ್ಞಾನ ಹೆಚ್ಚಾಗಲಿದೆ. ಮುಂದಿನ ಪರೀಕ್ಷೆ ಎದುರಿಸಲು ಸಹಾಯವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ದಾನಿ ಕಣಿವೆ ವಿನಯ ಅವರನ್ನು ಅಭಿನಂದಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿಎಂಸಿ ಸದಸ್ಯ ದಿನೇಶ್ ವಹಿಸಿದ್ದರು. ವೇದಿಕೆಯಲ್ಲಿ ಸಹ ಶಿಕ್ಷಕರಾದ ಚಂದ್ರಪ್ಪ, ಮಥಾಯ್, ಪ್ರಶಾಂತಿ, ತಾಜ್, ನೀಲಮ್ಮ, ವಾಸು ಇದ್ದರು.ವಿದ್ಯಾರ್ಥಿಗಳಾದ ತೇಜಸ್, ಶಾಹಿಸ್, ಸೌಜನ್ಯ, ವೈಭವ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೀಡ್‌...ನಿಯಮಬಾಹಿರ ನೇಮಕಾತಿ ರದ್ದುಪಡಿಸಲು ಆಗ್ರಹ
ಅಟಲ್ ಪಿಂಚಣಿಗೆ ಜಿಲ್ಲೇಲಿ 1.58 ಲಕ್ಷಕ್ಕೂ ಅಧಿಕ ನೋಂದಣಿ