ಶಾಸಕ ಕೆ.ಎಂ.ಉದಯ್ ಜನ್ಮದಿನ: ರೋಗಿಗಳಿಗೆ ಹಣ್ಣು ವಿತರಣೆ

KannadaprabhaNewsNetwork |  
Published : Jun 02, 2025, 12:32 AM IST
1ಕೆಎಂಎನ್ ಡಿ20 | Kannada Prabha

ಸಾರಾಂಶ

ಕೆ.ಎಂ.ಉದಯ್ ಅವರು ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡ ನಂತರ ಸರ್ಕಾರದಿಂದ 1250 ಕೋಟಿ ರು. ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ. ಹೀಗಾಗಿ ಅಭಿವೃದ್ಧಿ ಪಥದಲ್ಲಿ ಹಿಂದೆ ಬಿದ್ದಿದ್ದ ಮದ್ದೂರು ಕ್ಷೇತ್ರ ಶಾಸಕರ ವಿಶೇಷ ಆಸಕ್ತಿ ಫಲವಾಗಿ ನೀರಾವರಿ, ರಸ್ತೆ, ಸೇರಿದಂತೆ ಮೂಲ ಸೌಲಭ್ಯ ಗಳಿಂದ ಅಭಿವೃದ್ಧಿ ಕಾಣುವಂತಾಗಿದೆ.

ಕನ್ನಡಪ್ರಭವಾರ್ತೆ ಮದ್ದೂರು

ಶಾಸಕ ಕೆ.ಎಂ.ಉದಯ್ ಅವರ 51ನೇ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ ನೇತೃತ್ವದಲ್ಲಿ ಪಕ್ಷದ ಜನ ಪ್ರತಿನಿಧಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಅಭಿಮಾನಿಗಳು ಸೇರಿದೆ ನೂರಾರು ಕಾರ್ಯಕರ್ತರು ರೋಗಿಗಳಿಗೆ ಹಣ್ಣುಹಂಪಲು ಹಾಗೂ ಹಾಲು ವಿತರಣೆ ಮಾಡಿ ಸಾಮಾಜಿಕ ಸೇವೆಗಳ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ನಂತರ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ತಂಡ ಬೋರಾಪುರ ಅನಾಥಾಶ್ರಮಕ್ಕೆ ತೆರಳಿ ವೃದ್ಧರು ಮತ್ತು ಅನಾಥ ಮಕ್ಕಳಿಗೆ ಹಾಲು, ಬ್ರೆಡ್ ಮತ್ತು ಹಣ್ಣುಗಳನ್ನು ಹಂಚಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು ಮಾತನಾಡಿ, ಕೆ.ಎಂ.ಉದಯ್ ಅವರು, ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡ ನಂತರ ಸರ್ಕಾರದಿಂದ 1250 ಕೋಟಿ ರು. ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ. ಹೀಗಾಗಿ ಅಭಿವೃದ್ಧಿ ಪಥದಲ್ಲಿ ಹಿಂದೆ ಬಿದ್ದಿದ್ದ ಮದ್ದೂರು ಕ್ಷೇತ್ರ ಶಾಸಕರ ವಿಶೇಷ ಆಸಕ್ತಿ ಫಲವಾಗಿ ನೀರಾವರಿ, ರಸ್ತೆ, ಸೇರಿದಂತೆ ಮೂಲ ಸೌಲಭ್ಯ ಗಳಿಂದ ಅಭಿವೃದ್ಧಿ ಕಾಣುವಂತಾಗಿದೆ ಎಂದರು.

ದೇವರು ಶಾಸಕ ಉದಯ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯಸ್ಸು, ನೀಡಿ ಸಚಿವರಾಗಿ ಮದ್ದೂರು ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಂತಾಗಲಿ ಎಂದು ಹಾರೈಸಿದರು.

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಕುಮಾರ್, ಕೆ.ಎಂ.ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಕೆ.ಎಂ.ರವಿ, ಪುರಸಭಾಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ವನಿತಾ, ಪುರಸಭೆ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

ವಿಶ್ವ ಹಾಲು ದಿನ ರೋಗಿಗಳಿಗೆ ಹಾಲು, ಬ್ರೆಡ್ , ತಿನಿಸು ವಿತರಣೆ

ಪಾಂಡವಪುರ: ವಿಶ್ವಹಾಲು ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು, ಬ್ರೆಡ್ ಹಾಗೂ ತಿನಿಸ್ಸುಗಳನ್ನು ನಿರ್ದೇಶಕ ಸಿ.ಶಿವಕುಮಾರ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ವಿಶ್ವಹಾಲು ದಿನ ಅಂಗವಾಗಿ ಒಕ್ಕೂಟದಿಂದ ಆಸ್ಪತ್ರೆ ಒಳ-ಹೊರ ರೋಗಿಗಳಿಗೆ ಹಾಲು, ಬ್ರೆಡ್ ಹಾಗೂ ಸಿಹಿತಿನಿಸ್ಸುಗಳನ್ನು ವಿತರಣೆ ಮಾಡಲಾಗಿದೆ. ರೋಗಿಗಳ ಆರೋಗ್ಯಕಾಪಾಡಿಕೊಳ್ಳಲು ಹೆಚ್ಚು ಹಾಲು ಸೇವನೆ ಮಾಡಬೇಕು ಎಂದರು.

ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಡಾ.ಪ್ರಕಾಶ್, ಡಾ.ಸಂತೋಷ್, ಡಾ.ಮಣಿಕಂಠ, ಮಾರ್ಗ ವಿಸ್ತರ್ಣಾಧಿಕಾರಿಗಳಾದ ಜಗದೀಶ್, ಮಧುಶಂಕರ್, ಪ್ರಜ್ವಲ್, ನಾಗೇಂದ್ರಕುಮಾರ್, ಸುಮ, ಸತೀಶ್, ನಾಗೇಶ್, ಕಾರ್ತಿಕ್, ಪುರಸಭೆ ಸದಸ್ಯರಾದ ಆರ್.ಸೋಮಶೇಖರ್, ಎಂ.ಗಿರೀಶ್, ಯಶ್ವಂತ್, ಚಿಕ್ಕಾಡೆ ಚೇತನ್, ಗಿರೀಶ್, ಎಚ್.ಎನ್.ಮಂಜುನಾಥ್, ವಿ.ಸುರೇಶ್, ಕಡಬ ಬಲರಾಮೇಗೌಡ, ವಡ್ಡರಹಳ್ಳಿ ಗೋವಿಂದರಾಜು ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!