ಹಾನಗಲ್ಲ: ತಾಲೂಕಿನ ಗೆಜ್ಜಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಒಟ್ಟು 81 ಲಕ್ಷ ರು. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ಗಿರಿಸಿನಕೊಪ್ಪ ಗ್ರಾಮದಲ್ಲಿ ₹ 31 ಲಕ್ಷ ರು., ಹಳೆ ಗೆಜ್ಜಿಹಳ್ಳಿ ಗ್ರಾಮದಲ್ಲಿ ₹ 25 ಲಕ್ಷ, ಗೆಜ್ಜಿಹಳ್ಳಿ ಗ್ರಾಮದಲ್ಲಿ ₹ 15 ಲಕ್ಷ ಹಾಗೂ ಗುರುರಾಯಪಟ್ಟಣ ಗ್ರಾಮದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ, ಚರಂಡಿ, ಸಿಡಿ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಜನಕಲ್ಯಾಣದ ಕಾರ್ಯಕ್ರಮಗಳ ಜೊತೆಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೂ ಸಹ ರಾಜ್ಯ ಸರಕಾರ ಒತ್ತು ನೀಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ತಾಲೂಕಿನ 65 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ವಾರ್ಷಿಕ ₹250 ಕೋಟಿ ಆರ್ಥಿಕ ನೆರವು ಸಿಗುತ್ತಿದೆ. ನೀರಾವರಿ ಯೋಜನೆ, ಕಾಲುವೆ ದುರಸ್ತಿ, ರಸ್ತೆಗಳ ಅಭಿವೃದ್ಧಿ ಹೀಗೆ ಮೂಲಭೂತ ಸೌಲಭ್ಯ ಒದಗಿಸಲು ಸಹ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ ಶಾಸಕ ಶ್ರೀನಿವಾಸ ಮಾನೆ, ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಿಸಿ ಗ್ರಾಮೀಣರ ಉದ್ಯೋಗ ಮತ್ತು ನ್ಯಾಯಯುತ ವೇತನದ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆ ಎಂದು ಕಿಡಿಕಾರಿದರು. ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಈರಣ್ಣ ಬೈಲವಾಳ, ರಾಮಣ್ಣ ಪೂಜಾರ, ಮಂಜುನಾಥ ದೊಡ್ಡಮನಿ, ಹನುಮೇಶ ಕುಳೇನೂರ, ಹನುಮಂತ ಹುರುಳಿಕುಪ್ಪಿ, ಆನಂದ ಮಾಸನಕಟ್ಟಿ, ಮಾಲತೇಶ ಸಂಗೂರ, ಏಳುಕೋಟೆಪ್ಪ ಹಾವಳೇರ, ಜಗದೀಶ ಹಿರೇಕಣಗಿ, ಮಂಜುಳಾ ಹುರುಳಿಕುಪ್ಪಿ, ರಾಜೂ ಪುರದ, ಸದಾಶಿವ ತಹಶೀಲ್ದಾರ್, ಶಿವಶಂಕರ ಲಕ್ಕಪ್ಪನವರ, ಗಂಗಪ್ಪ ಗುಡಿಹಾಳ, ಶ್ರೀಕಾಂತ ತಹಸೀಲ್ದಾರ್, ಕೋಟೆಪ್ಪ ಕುರುಬರ, ದೇವರಾಜ, ಸುನೀಲ್ ಲಮಾಣಿ, ಅಜಿತ್ ಚವ್ಹಾಣ ಸೇರಿದಂತೆ ಇನ್ನೂ ಹಲವರು ಇದ್ದರು.