ಮಾದರಿ ಚಾಲಕನಾಗಲು ಸಂಚಾರ ಪಾಲನೆ, ಆರೋಗ್ಯ ಕಾಳಜಿ ಅಗತ್ಯ: ಉಮಾ ಪ್ರಶಾಂತ್

KannadaprabhaNewsNetwork |  
Published : Jan 30, 2026, 01:45 AM IST
ಕ್ಯಾಪ್ಷನ29ಕೆಡಿವಿಜಿ31, 32 ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್, ಎಸ್.ಎಸ್.ಕೇರ್ ಟ್ರಸ್ಟಿನಿಂದ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಎಸ್‌ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಗುರುವಾರ ಡಿಎಆರ್ ಆವರಣದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಪೊಲೀಸ್ ಅಧಿಕಾರಿ ಸಿಬ್ಬಂದಿ, ಆಟೋ, ಬಸ್, ಕಾರ್ ಚಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

- ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಕಾರ್ಯಕ್ರಮ

- - -

ದಾವಣಗೆರೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಗುರುವಾರ ಡಿಎಆರ್ ಆವರಣದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಪೊಲೀಸ್ ಅಧಿಕಾರಿ ಸಿಬ್ಬಂದಿ, ಆಟೋ, ಬಸ್, ಕಾರ್ ಚಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶಿಬಿರ ಉದ್ಘಾಟಿಸಿ, ಉತ್ತಮ ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕ, ಅದರಲ್ಲೂ ವಾಹನ ಚಾಲಕರು ಕಡ್ಡಾಯವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾದರಿ ಚಾಲಕನಾಗಲು ಸಂಚಾರ ನಿಯಮ ಪಾಲನೆ ಮತ್ತು ಉತ್ತಮ ಆರೋಗ್ಯ ಕಾಳಜಿ ಅವಶ್ಯಕ. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲಕರು ಭಾಗವಹಿಸಿ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ಶುಗರ್ ತಪಾಸಣೆ, ಇಸಿಜಿ, ಕಣ್ಣು ಪರೀಕ್ಷೆ, ಬಿಎಂಐ, ಚರ್ಮ ಕಾಯಿಲೆ ಸೇರಿದಂತೆ ಇತರೆ ತಪಾಸಣೆಗಳು ನಡೆದವು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿವೈಎಸ್ಪಿ ರವರಾದ ಪಿ.ಬಿ.ಪ್ರಕಾಶ್, ಬಿ.ಶರಣಬಸವೇಶ್ವರ, ಸಂಚಾರ ವೃತ್ತ ನಿರೀಕ್ಷಕರಾದ ಮಂಜುನಾಥ, ಡಾ.ಧರಣಿಕುಮಾರ, ಡಾ.ಅನುರೂಪ, ಡಾ.ದಿವ್ಯ ಹಾಗೂ ಸಂಚಾರ ಪಿಎಸ್‌ರವರಾದ ಶೈಲಜಾ, ಪ್ರಮೀಳಮ್ಮ, ಮಹಾದೇವ ಭತ್ತೆ, ಶಕುಂತಲಾ, ಜಯಶೀಲ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿ, ಎಸ್‌ಎಸ್ ಕೇರ್ ಟ್ರಸ್ಟ್‌ ಅಧಿಕಾರಿ ಸಿಬ್ಬಂದಿ, ವೈದ್ಯ- ಸಿಬ್ಬಂದಿ ಉಪಸ್ಥಿತರಿದ್ದರು.

- - -

-29ಕೆಡಿವಿಜಿ31, 32:

ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್, ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಎಸ್‌ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಹಸಡೆ ಗ್ರಾಮದಲ್ಲಿ ಕಾಡಾನೆಗಳ ಅಟ್ಟಹಾಸ
ನಾಡಿಗೆ ಬೆಳಕು ಚೆಲ್ಲುತ್ತಿರುವ ತರಳವಾಳು ಶ್ರೀ