ತರಳಬಾಳು ಹುಣ್ಣಿಮೆ ಮಹೋತ್ಸವ ಒಂದು ಇತಿಹಾಸವಾಗಿದೆ. ಶ್ರೀಗಳು ಸರ್ವಧರ್ಮ ಸಮನ್ವಯ ಕುರಿತ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ದೇವ ಒಂದೇ ನಾಮ ಹಲವು ಎಂಬ ಸಂದೇಶ ಸಾರಲಾಗುತ್ತಿದೆ. ಹುಣ್ಣಿಮೆ ಮಹೋತ್ಸವದ ಮೂಲಕ ನಾಡಿನ ಜನರಿಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವ ಒಂದು ಇತಿಹಾಸವಾಗಿದೆ. ಶ್ರೀಗಳು ಸರ್ವಧರ್ಮ ಸಮನ್ವಯ ಕುರಿತ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ದೇವ ಒಂದೇ ನಾಮ ಹಲವು ಎಂಬ ಸಂದೇಶ ಸಾರಲಾಗುತ್ತಿದೆ. ಹುಣ್ಣಿಮೆ ಮಹೋತ್ಸವದ ಮೂಲಕ ನಾಡಿನ ಜನರಿಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಗುರುವಾರ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ಸರ್ವಧರ್ಮ ಸಮನ್ವಯ ವಿಷಯ ಕುರಿತ ೬ನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನಷ್ಯನಿಗೆ ನಂಬಿಕೆ ಬಹಳ ಮುಖ್ಯವಾಗಿದ್ದು, ನಂಬಿಕೆ ಎಂಬುದು ಒಂದು ಮರದ ಬೇರು ಇದ್ದದಂತೆ. ನಾವೆಲ್ಲರೂ ಇಂತಹ ಶ್ರೀಗಳ ವಿಚಾರ-ಚಿಂತನೆಗಳ ಮೇಲೆ ನಂಬಿಕೆ ಹೊಂದಿ ಮುಂದೆ ಸಾಗಬೇಕು. ದೇವರು ನಮಗೆ ವರವನ್ನು ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ನಮಗೆ ಕೊಡುವುದು ಅವಕಾಶ ಮಾತ್ರ. ಈ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಮಾತನಾಡಿ, ತರಳಬಾಳು ಶ್ರೀಗಳು ಕಾಯಕ ಯೋಗಿಯಾಗಿ ಹಲವು ಕ್ಷೇತ್ರಗಳಲ್ಲಿ ಅವರು ಸಾಧನೆ ಅನನ್ಯವಾಗಿದೆ. ಇಂತಹ ಶ್ರೀಗಳಿಂದಾಗಿ ನಮ್ಮ ದೇಶ ಸಮೃದ್ಧಿಯಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಸಂದೇಶ ಶ್ರೀಗಳು ತರಳಬಾಳು ಹುಣ್ಣಿಮೆ ಮಹೋತ್ಸವದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆಂದರು. ಇದನ್ನು ಅರ್ಥ ಮಾಡಿಕೊಂಡು ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಬದುಕಬೇಕಾಗಿದೆ. ಅವರ ಚಿಂತನೆಗಳಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು. ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿರೇಶಾನಂದ ಸರಸ್ವತಿ ಸ್ವಾಮೀಜಿ, ತರಳಬಾಳು ಶಾಖಾ ಮಠ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಂಗಳೂರು ಮಸ್ದರ್ ಎಜು ಮತ್ತು ಚಾರಿಟಿ ಕಾರ್ಯಾಧ್ಯಕ್ಷರಾದ ಮೌಲಾನ ಅಬೂಸುಫ್ಯಾನ್ ಮದನಿ, ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಕ್ಯಾಥಡ್ರಲ್ ಚರ್ಚ್ ಗುರುಶ್ರೇಷ್ಠ ಫಾದರ್ ಸ್ಟ್ಯಾನಿ ಡಿಸೋಜಾ, ಶಾಸಕ ಬಿ.ಕೆ.ಸಂಗಮೇಶ್ವರ್, ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಮತ್ತಿತರರಿದ್ದರು.
ಪೂರ್ವಿಕರ ಸಂಸ್ಕೃತಿ, ಮುಂದುವರಿಕೆಯಿಂದ
ಭಾತರ ಬಲಿಷ್ಠ: ಬಿ.ಎಲ್.ಸಂತೋಷ್
ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಗಲಭೆ, ಯುದ್ಧಗಳನ್ನು ಗಮನಿಸಿದಾಗ ನಮ್ಮ ದೇಶ ಅತ್ಯಂತ ಬಲಿಷ್ಠವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ಈ ದೇಶದಲ್ಲಿ ಎಂದಿಗೂ ಅರಾಜಕತೆ ನಡೆಯುವುದಿಲ್ಲ. ಇದಕ್ಕೆ ಕಾರಣ ಸರ್ವಧರ್ಮಗಳ ಅನೇಕ ಮಹಾನ್ ಸಾಧುಸಂತರು ರೂಪಿಸಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯುತ್ತಿದ್ದೇವೆ. ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಆಧುನಿಕತೆ ಭರಾಟೆಯಲ್ಲಿ ಎಲ್ಲವೂ ಬದಲಾಗುತ್ತಿವೆ. ಆದರೆ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದಿನ ಪೂರ್ವಿಕರ ಬದುಕು, ಸಂಸ್ಕೃತಿ, ಆಚಾರ-ವಿಚಾರ ಎಲ್ಲವೂ ಇಂದಿಗೂ ಮುಂದುವರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇಂದಿಗೂ ಬದುಕಲು ಸಾಧ್ಯವಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.