ಹುಬ್ಬೆ ಹುಣಸೆ ಕೆರೆ ಹೂಳೆತ್ತುವ ಕಾರ್ಯ, ರಸ್ತೆ ಕೆಲಸ ಪರಿಶೀಲನೆ

KannadaprabhaNewsNetwork |  
Published : Mar 23, 2026, 01:45 AM IST
22ಸಿಎಚ್‌ಎನ್‌52ಹನೂರು ಹುಬ್ಬೆ ಹುಣಸೆ ಕೆರೆ ಹೂಳು ತೆಗೆಯುತ್ತಿರುವುದನ್ನು ಶಾಸಕ ಎಂಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಕೆರೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎ.ಆರ್‌. ಮಂಜುನಾಥ್ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು ಕೆರೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎ.ಆರ್‌. ಮಂಜುನಾಥ್ ಪರಿಶೀಲನೆ ನಡೆಸಿದರು.

ಪಟ್ಟಣದ ಬಂಡಳ್ಳಿ ಮುಖ್ಯರಸ್ತೆಯ ಕ್ರಿಸ್ತರಾಜ ಶಾಲೆ ಮುಂಭಾಗದ ಪ್ರಮುಖ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಪರಿಶೀಲನೆ ನಡೆಸಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಅಧಿಕಾರಿಗಳಿಗೆ ತಾಕಿತ್ತು ಮಾಡಿದರು.

ಬಂಡಳ್ಳಿ ಪ್ರಮುಖ ಮುಖ್ಯರಸ್ತೆಯಾಗಿರುವುದರಿಂದ ಕಾಮಗಾರಿಯನ್ನು ಗುಣಮಟ್ಟದಿಂದ ಅಚ್ಚುಕಟ್ಟಾಗಿ ಯಾವುದೇ ಲೋಪದೋಷಗಳು ಬಾರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವಂತೆ ಸೂಚಿಸಿದರು.

ಹುಬ್ಬೆ ಹುಣಸೆ ಕೆರೆ ಡ್ಯಾಮ್‌ಗೆ ಭೇಟಿ:

ಶಾಸಕ ಎ.ಆರ್‌. ಮಂಜುನಾಥ್ ಉದ್ದನೂರು ಬಳಿಯ ಹುಬ್ಬೆ ಹುಣಸೆ ಕೆರೆ ಡ್ಯಾಮ್‌ನಲ್ಲಿ ಹೂಳು ತೆಗೆಯುತ್ತಿರುವುದನ್ನು ಪರಿಶೀಲಿಸಿದರು. ನೀರಾವರಿ ಅಧಿಕಾರಿಗಳು ನಿಗದಿಪಡಿಸಿರುವ ಮಟ್ಟದಲ್ಲಿ ಕೆರೆಯಲ್ಲಿರುವ ಹೂಳು ತೆಗೆದು ಜನತೆಯ ದಶಕಗಳ ಬೇಡಿಕೆಯಂತೆ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹುಳು ತೆಗೆಯಲು ಯಾರಾದರು ಅಡ್ಡಿಪಡಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮುಖಂಡರಾದ ಉದ್ದನೂರು ಗಿರೀಶ್ ಹಾಗೂ ವಿಜಯ ಕುಮಾರ್‌, ಡಿಕೆ ರಾಜು ಮತ್ತು ಚಿನ್ನವೆಂಕಟ ಇನ್ನಿತರರು ಉಪಸ್ಥಿತರಿದ್ದರು.

---

22ಸಿಎಚ್‌ಎನ್‌52

ಹೂಳು ತೆಗೆವ ಕಾರ್ಯ ಪರಿಶೀಲಿಸಿದ ಶಾಸಕ ಎ.ಆರ್‌. ಮಂಜುನಾಥ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಲ್ಲಿ ಸಕ್ರಿಯ ಪಾಲ್ಗೊಳ್ಳುವೆ ಎಂದ ಅರ್ಪಿತಾ ಪಟೇಲ್‌
ಪಡಗೂರು ಅಡವಿ ಮಠದಲ್ಲಿ ವಚನ ಕಲ್ಯಾಣ