16 ದೇವತೆಗಳಿಗೆ ಶಾಸಕರಿಂದ ಮಡಲಕ್ಕಿ ಸಮರ್ಪಣೆ

KannadaprabhaNewsNetwork |  
Published : Aug 03, 2026, 01:15 AM IST
 | Kannada Prabha

ಸಾರಾಂಶ

ರಾಮನಗರ: ಕ್ಷೇತ್ರದ ಜನರು ಸುಭಿಕ್ಷವಾಗಿರಲಿ, ಮಳೆ ಬೆಳೆಯಾಗಲಿ ಎಂದು ಸಂಕಲ್ಪ ಮಾಡಿ ನಗರದ 16 ದೇವತೆಗಳಿಗೆ ಮಡಿಲಕ್ಕಿ ಸೇವೆ ಅರ್ಪಿಸಿದ್ದೇನೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ಕ್ಷೇತ್ರದ ಜನರು ಸುಭಿಕ್ಷವಾಗಿರಲಿ, ಮಳೆ ಬೆಳೆಯಾಗಲಿ ಎಂದು ಸಂಕಲ್ಪ ಮಾಡಿ ನಗರದ 16 ದೇವತೆಗಳಿಗೆ ಮಡಿಲಕ್ಕಿ ಸೇವೆ ಅರ್ಪಿಸಿದ್ದೇನೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ 16 ದೇವಾಲಯಗಳಿಗೆ ಭಾನುವಾರ ಸಂಜೆ ಮಡಿಲಕ್ಕಿ ಸಮರ್ಪಿಸಿ ಅವರು ಮಾತನಾಡಿದರು.

ಹಿಂದೂ ಸಂಪ್ರದಾಯದಲ್ಲಿ ಆಷಾಢ, ಶ್ರಾವಣ ಹಾಗೂ ನವರಾತ್ರಿಯ ಸಮಯದಲ್ಲಿ ದೇವತೆಗಳಿಗೆ ಮಡಿಲಕ್ಕಿ ಕೊಡುವುದು ವಾಡಿಕೆ. ಹಾಗಾಗಿ ಕಳೆದ ಏಳು ವರ್ಷಗಳಿಂದ ನಾನು ಸತತವಾಗಿ ನಗರದ ಶ್ರೀ ಚಾಮುಂಡೇಶ್ವರಿ ಕರಗ ನಡೆಯುವ ಸಮ ಯದಲ್ಲಿ ನಗರದ ಎಲ್ಲ ದೇವತೆಗಳಿಗೆ ಮಡಿಲಕ್ಕಿ ಸೇವೆ ಮಾಡುತ್ತಾ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿ ಈ ಕ್ಷೇತ್ರದ ಜನರ ಕಷ್ಟ ಸುಖಗಳನ್ನು ಕೇಳಲು ನನಗೆ ಜವಾಬ್ದಾರಿ ನೀಡಿ ಆಶೀರ್ವಾದ ಸಹ ಮಾಡಿದ್ದು, ಆ ತಾಯಿಯ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಣೆ ಮಾಡುತ್ತಿದ್ದೇನೆ ಎಂದರು.

ಶ್ರೀ ಚಾಮುಂಡೇಶ್ವರಿ ತಾಯಿ ಈ ನಾಡಿನ ಶಕ್ತಿದೇವತೆ ಆಗಿದ್ದು, ಹಿಂದಿನಿಂದಲೂ ಈ ತಾಯಿಯನ್ನು ನಂಬಿ ಪೂಜಿಸಿದವರನ್ನು ರಕ್ಷಣೆ ಮಾಡುತ್ತಾ ಪಟ್ಟಣದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ನೋಡಿ ಕೊಂಡಿದ್ದಾಳೆ. ಆದ್ದರಿಂದಲೇ ರಾಮನಗರ ಮಣ್ಣಿಗೆ ವಿಶೇಷ ಸ್ಥಾನ, ಗೌರವ ಲಭಿಸಿದೆ ಎಂದು ಇಕ್ಬಾಲ್ ಹುಸೇನ್ ದೇವಿಯ ಮಹಿಮೆಯನ್ನು ಬಣ್ಣಿಸಿದರು.

ಮಡಿಲಕ್ಕಿ ಸಮರ್ಪಣೆ:

ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಶಾಸಕರು ಸಾಂಕೇತಿಕವಾಗಿ ಮಡಿಲಕ್ಕಿ ಸಮರ್ಪಣೆ ಮಾಡಿದರು. ಆನಂತರ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕೊಂಕಾಣಿದೊಡ್ಡಿ ಆದಿಶಕ್ತಿ, ದ್ಯಾವರಸೇಗೌಡನದೊಡ್ಡಿ ಶ್ರೀ ಚಾಮುಂಡೇಶ್ವರಿ ದೇವತೆ, ಗಾಂಧಿನಗರ ಆದಿಶಕ್ತಿ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ಶ್ರೀ ಬನ್ನಿಮಹಂಕಾಳಿ ಅಮ್ಮ, ತೋಪ್ ಖಾನ್ ಮೊಹಲ್ಲಾದ ಮುತ್ತು ಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಟೂಪ್ಲೇನ್ ಬಂಡಿ ಮಹಂಕಾಳಮ್ಮ, ಐಜೂರು ಆದಿಶಕ್ತಿಪುರದ ಆದಿಶಕ್ತಿ, ಮಂಜುನಾಥನಗರ ಶ್ರೀ ಹುಲಿಯೂರಮ್ಮ ದೇವಿ, ಕೆಂಪೇಗೌಡನದೊಡ್ಡಿ ಶ್ರೀ ಚಾಮುಂಡೇಶ್ವರಿ ದೇವಿ, ಶ್ರೀ ಕೊಲ್ಲಾಪುರದಮ್ಮ ದೇವಿ, ಕಾಯಿಸೊಪ್ಪಿನ ಬೀದಿ ಶ್ರೀ ಮಾಸ್ತಮ್ಮ ಅಮ್ಮನವರ ದೇವಾಲಯಗಳಿಗೆ ಹರಿಸಿನ ಕುಂಕುಮ, ಸೀರೆ, ಬಳೆ, ವೀಳ್ಯದೆಲೆ, ಅಡಿಕೆ ಹೊಂಬಾಳೆ, ಮಡಿಲಕ್ಕಿ ಪದಾರ್ಥ, ಬಿಚ್ಚಾಲೆ, ಪಂಚ ಫಲಗಳನ್ನು ಒಳಗೊಂಡ ಪೂಜಾ ಸಾಮಗ್ರಿಗಳನ್ನು ಮರದ ಬುಟ್ಟಿಯಲ್ಲಿರಿಸಿ ದೇವತೆಗಳಿಗೆ ಅರ್ಪಿಸಿ ಕಾಣಿಕೆ ಯನ್ನು ನೀಡುವ ಮೂಲಕ ಶಾಸಕರು ಮಡಿಲಕ್ಕಿ ಸಮರ್ಪಣೆ ಮಾಡಿದರು.

ಈ ವೇಳೆ ಮಾಜಿ ಶಾಸಕ ಕೆ. ರಾಜು, ಜಿಪಂ ಮಾಜಿ ಅಧ್ಯಕ್ಷ ಕೆ. ರಾಜು, ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷ ರೖಡ್ ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸದಸ್ಯೆ ಆಯಿಷಾ ಬಾನು, ಮುಖಂಡರಾದಷಮಂಚೇಗೌಡ,

ಕೋಟ್...............

ನಾನು ಅನ್ನೊದಿಲ್ಲ. ನಾವೆಲ್ಲರು ಸೇರಿ ಊರಹಬ್ಬ ಆಚರಿಸುತ್ತಿದ್ದೇವೆ. ವರ್ತಕರು, ಜನರಿಗೆ ತೊಂದರೆ ಕೊಡಬಾರದೆಂದು ಹೇಳಿದ್ದೆ. ಅದರಂತೆ ಯಾರ ಬಳಿಯೂ ಸಹಾಯಧನ ಕೇಳದೆ ಕರಗ ಮಹೋತ್ಸವ ಮಾಡುತ್ತಿದ್ದೇವೆ.

- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

ಬಾಕ್ಸ್..............

ರಾಮನಗರ ಕರಗೋತ್ಸವ: ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

- ಸೋಮವಾರ ಸಂಜೆ ಕೊತ್ತಿಪುರ ಮತ್ತು ಕೊಂಕಾಣಿದೊಡ್ಡಿ ಹಾಗೂ ಸೌಧೆ ವರ್ತಕರಿಂದ ಅಗ್ನಿಕೊಂಡಕ್ಕೆ ಎಳವಾರ.

- ಮಂಗಳವಾರ ರಾತ್ರಿ ಚಾಮುಂಡೇಶ್ವರಿ ದೇವಿಯ ಮೂಲಸ್ಥಾನ ದ್ಯಾವರಸೇಗೌಡನದೊಡ್ಡಿ ಕರಗದ ಮನೆಯಿಂದ ದೇವಿಪ್ರಸಾದ್ ಕರಗ ಹೊತ್ತು, ನಗರದೆಲ್ಲೆಡೆ ರಾತ್ರಿಯಿಡಿ ಸಂಚರಿಸಿ ಪೂಜೆ ಸ್ವೀಕಾರ.

- ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಂದ ದೇವಾಲಯದಲ್ಲಿ ವಿಶೇಷ ಪೂಜೆ .

- ಜಿಲ್ಲಾ ಕ್ರೀಡಾಂಗಣ, ಅರಳೀಮರ ವೃತ್ತದಲ್ಲಿ ಅದ್ದೂರಿ ಸಂಗೀತ ರಸಸಂಜೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್, ಚಿತ್ರನಟ ಸುದೀಪ್, ನೀನಾಸಂ ಸತೀಶ್, ರಚಿತಾರಾಮ್‌ ಇತರರು ಭಾಗಿ

- ಕಾಮಣ್ಣನಗುಡಿ ವೃತ್ತದಿಂದ ದೇವಾಲಯದವರೆಗೆ ಹೂವಿನ ಅಲಂಕೃತ ಚಿತ್ತಾರದ ಮೇಲೆ ಸಾಗುವ ಕರಗ ಬುಧವಾರ ಮುಂಜಾನೆ ದೇವಾಲಯದ ಮುಂಭಾಗ ಅಗ್ನಿಕೊಂಡ ಪ್ರವೇಶ

2ಕೆಆರ್ ಎಂಎನ್ .ಜೆಪಿಜಿ

1.ರಾಮನಗರದಲ್ಲಿ ನಡೆಯುತ್ತಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ದೇವಾಲಯಗಳಿಗೆ ಶಾಸಕ ಇಕ್ಬಾಲ್ ಹುಸೇನ್ ರವರು ಮಡಿಲಕ್ಕಿ ಸಮರ್ಪಿಸಿದರು.

2.ರಾಮನಗರದಲ್ಲಿ ನಡೆಯುತ್ತಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಭಿತ್ತಿಪತ್ರವನ್ನು ಶಾಸಕ ಇಕ್ಬಾಲ್ ಹುಸೇನ್ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಗ್ಗಿದ ಪುಷ್ಯ ಮಳೆ ಅಬ್ಬರ: ನಿಲ್ಲದ ಭದ್ರೆಯ ರೌದ್ರಾವತಾರ
ರಾಜಕೀಯ ಕ್ಷೇತ್ರದಲ್ಲೂ 2ಎ‌ ಮೀಸಲಾತಿ ನೀಡಿ