ರೆಕಾರ್ಡ್ ರೂಮ್ ಡಿಜಿಟಲೀಕರಣಕ್ಕೆ ಶಾಸಕ ಪಿ.ರವಿಕುಮಾರ್ ಚಾಲನೆ

KannadaprabhaNewsNetwork | Published : Jan 10, 2025 12:49 AM

ಸಾರಾಂಶ

ರೈತರು ತಮ್ಮ ಭೂಮಿ ದಾಖಲೆ ಕಳೆದುಕೊಂಡು ಮತ್ತೆ ಪಡೆಯಲು ತಹಸೀಲ್ದಾರ್ ಕಚೇರಿ ತಿಂಗಳುಗಟ್ಟಲೆ ತಿರುಗುತ್ತಿದ್ದರೂ ದಾಖಲಾತಿ ದೊರೆಯುತ್ತಿರಲಿಲ್ಲ, 40-50 ವರ್ಷದ ಹಳೆಯ ಭೂ ದಾಖಲೆಗಳ ಪತ್ರದ ಕಾಗದ ಹಳೆಯ, ಹರಿದುಹೋಗಿ ತನ್ನ ಅಸ್ತಿತ್ವವ ಕಳೆದುಕೊಳ್ಳುತ್ತಿತ್ತು. ಇದನ್ನು ಚಿಂತಿಸಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕು ಕಚೇರಿಯಲ್ಲಿ ರೆಕಾರ್ಡ್ ರೂಂ, ಸರ್ವೇ ದಾಖಲೆಗಳ ಡಿಜಿಟಲೀಕರಣ ಭೂ-ಸುರಕ್ಷಾ ಯೋಜನೆಗೆ ಶಾಸಕ ಪಿ. ರವಿಕುಮಾರ್ ಅಧಿಕೃತವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ರೈತರು ತಮ್ಮ ಭೂಮಿ ದಾಖಲೆ ಕಳೆದುಕೊಂಡು ಮತ್ತೆ ಪಡೆಯಲು ತಹಸೀಲ್ದಾರ್ ಕಚೇರಿ ತಿಂಗಳುಗಟ್ಟಲೆ ತಿರುಗುತ್ತಿದ್ದರೂ ದಾಖಲಾತಿ ದೊರೆಯುತ್ತಿರಲಿಲ್ಲ, 40-50 ವರ್ಷದ ಹಳೆಯ ಭೂ ದಾಖಲೆಗಳ ಪತ್ರದ ಕಾಗದ ಹಳೆಯ, ಹರಿದುಹೋಗಿ ತನ್ನ ಅಸ್ತಿತ್ವವ ಕಳೆದುಕೊಳ್ಳುತ್ತಿತ್ತು. ಇದನ್ನು ಚಿಂತಿಸಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.

ರೈತರ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಯ ತನಕ ಕಂದಾಯ ಇಲಾಖೆಯಲ್ಲಿ ನೋಂದಣಿ ಆಗಿರುವ ಎಲ್ಲಾ ಭೂಮಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಕ್ಲೌಡ್ ನಲ್ಲಿ ಸಂಸ್ಕರಿಸಲಾಗುವ ಯೋಜನೆ ಇದಾಗಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಬೇಕಾದ ಸಮಯದಲ್ಲಿ ದಾಖಲೆಗಳ ಪ್ರಿಂಟ್ ಗಳನ್ನು ನೀಡಬಹುದು ಎಂದರು.

ಭೂಸುರಕ್ಷಾ ಎಂಬ ಅಪ್ಲಿಕೇಶನ್‌ನಲ್ಲಿ ನಿಮ್ಮ ಭೂ-ದಾಖಲೆ ಸಂಖ್ಯೆ ನೀಡಿದರೆ ಒಂದೇ ನಿಮಿಷದಲ್ಲಿ ನಿಮ್ಮ ಭೂ ದಾಖಲಾತಿ ಪತ್ರಗಳನ್ನು ನೀಡುವ ಯೋಜನೆಯನ್ನು ಸರ್ಕಾರ ಮಾಡಿದೆ ಎಂದರು.

ಡೀಸಿ ಡಾ.ಕುಮಾರ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಶೀತಲೀಕರಣಗೊಂಡ ಭೂಮಿ ದಾಖಲಾತಿಗಳು, ಕಳೆದು ಹೋದ ಭೂಮಿ ದಾಖಲೆಗಳು ರೈತರಿಗೆ ಅನುಕೂಲವಾಗುವಂತೆ ಯಾವುದೇ ದಾಖಲಾತಿಗಳನ್ನು ಯಾರು ತಿದ್ದಲು ಕದಿಯಲು ಅವಕಾಶ ನೀಡಿದೆ ಸ್ಕ್ಯಾನ್ ಮಾಡುವ ಮೂಲಕ ಶೇಖರಿಸಿ ಇಡುವ ಯೋಜನೆ ಇದಾಗಿದೆ ಎಂದರು.

ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ದಾಖಲೆಗಳ ಡಿಜಟಲೀಕರಣ ಕೆಲಸ ಪ್ರಾರಂಭಿಸಿ ಈಗಾಗಲೇ 56 ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇಲ್ಲಿಯೂ ಚಾಲನೆ ನೀಡಿ 90 ಸಾವಿರ ಕಡತ, 45 ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳನ್ನು ಮುಂದಿನ ಒಂದು ವರ್ಷದೊಳಗೆ ಎಲ್ಲವನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕಾರಿಸುತ್ತೇವೆ ಎಂದರು.

ಈ ವೇಳೆ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ ಶಿವಕುಮಾರ ಬಿರಾದರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this article