ಹೊಸಕೋಟೆ: ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ತಮ್ಮ ಸ್ವಗ್ರಾಮ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು.
ಶಾಸಕ ಶರತ್ ಬಚ್ಚೇಗೌಡ ಹಾರ, ಶಾಲು, ಪೇಟ ಬದಲಾಗಿ ಅದಕ್ಕೆ ವ್ಯಯಿಸುವ ಹಣದಲ್ಲೇ ನೋಟ್ ಬುಕ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ತಂದುಕೊಡುವಂತೆ ತಿಳಿಸಿದ್ದರು. ಅದರಂತೆ ನೂರಾರು ಕಾರ್ಯಕರ್ತರು ನೋಟ್‌ಬುಕ್, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ತಂದು ಶುಭ ಕೋರಿದರು. ಈ ಮೂಲಕ ಶಾಸಕ ಶರತ್ ಬಚ್ಚೇಗೌಡ ಹೊಸ ಆಚರಣೆಗೆ ನಾಂದಿ ಹಾಡಿದರು.ಬಳಿಕ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನನ್ನ ಹಾಗೂ ನನ್ನ ಕುಟುಂಬವನ್ನು ಪ್ರೀತಿಸುವ ಸಹಸ್ರಾರು ಅಭಿಮಾನಿಗಳು ಸರಳವಾಗಿ ಅಚರಣೆ ಮಾಡಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಿದ ಹಿನ್ನೆಲೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಯಿತು ಎಂದು ಹೇಳಿದರು.
ಶರತ್ ಬಚ್ಚೇಗೌಡ ಹುಟ್ಟುಹಬ್ಬದ ಪ್ರಯುಕ್ತ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 80 ಸಾವಿರ ಲಡ್ಡು ವಿತರಣೆ ಮಾಡಿದರು.ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಪತ್ನಿ ಪ್ರತಿಭಾ ಶರತ್, ತಾಯಿ ಉಮಾ ಬಚ್ಚೇಗೌಡ, ಕುಟುಂಬದ ಸದಸ್ಯರಾದ ಬಿ.ಎನ್.ಗೋಪಾಲಗೌಡ, ಬಿ.ವಿ, ಬೈರೇಗೌಡ, ಬಿ.ವಿ.ಸತೀಶ್‌ಗೌಡ, ಬಿ.ವಿ.ರಾಜಶೇಖರ್‌ಗೌಡ, ಬಿ.ಜಿ.ನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್, ಯುವ ಮುಖಂಡರಾದ ಹಸಿಗಾಳ ಜಗದೀಶ್ ಸೇರಿದಂತೆ ಟೀಮ್ ಎಸ್‌ಬಿಜಿ ತಂಡದ ಸದಸ್ಯರು ಹಾಜರಿದ್ದರು.
ಫೋಟೋ: 2 ಹೆಚ್‌ಎಸ್‌ಕೆ 1, 2, ಮತ್ತು 31: ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬ ಪ್ರಯುಕ್ತ ಪತ್ನಿ ಪ್ರತಿಭಾ, ತಾಯಿ ಉಮಾ ಬಚ್ಚೇಗೌಡ ಜೊತೆ ತಮ್ಮ ಮನೆ ದೇವರಾದ ವಿಜಯಪುರದ ಸೌಮ್ಯ ಚನ್ನಕೇಶವ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
2 ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಶಾಸಕ ಶರತ್ ಬಚ್ಚೇಗೌಡರ ಹುಟ್ಟುಹಬ್ಬಕ್ಕೆ ತಂದೆ ಮಾಜಿ ಸಂಸದ ಬಚ್ಚೇಗೌಡ ಹಾಗೂ ಕುಟುಂಬದ ಸದಸ್ಯರು ಕೇಕ್ ತಿನ್ನಿಸಿ ಶುಭಾಶಯ ಕೋರಿದರು.3: ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬಕ್ಕೆ ನೋಟ್ ಬುಕ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ಕಾರ್ಯಕರ್ತರಿಂದ ಸ್ವೀಕರಿಸಿದರು.