ಜ.೭- ೧೩: ಕೆಮ್ತೂರು ತುಳು ನಾಟಕ ಪರ್ಬ-೨೦೨೪

KannadaprabhaNewsNetwork |  
Published : Jan 06, 2024, 02:00 AM IST
ನಾಟಕ | Kannada Prabha

ಸಾರಾಂಶ

ತುಳುಕೂಟ ಉಡುಪಿ ವತಿಯಿಂದ 22ನೇ ವರ್ಷದ ಕೆಮ್ತೂರು ನಾಟಕ ಸ್ಫರ್ಧೆಯು ಜ. ೭ ರಿಂದ ೧೩ರ ತನಕ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕರಾವಳಿಯ ತುಳುರಂಗಭೂಮಿಗೆ ಅಪ್ರತಿಮ ಸೇವೆ ಸಲ್ಲಿಸಿದ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ಸ್ಮರಣಾರ್ಥ ತುಳುಕೂಟ ಉಡುಪಿ ವತಿಯಿಂದ 22ನೇ ವರ್ಷದ ಕೆಮ್ತೂರು ನಾಟಕ ಸ್ಫರ್ಧೆಯು ಜ. ೭ ರಿಂದ ೧೩ರ ತನಕ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

ಈ ವರ್ಷದ ಕೆಮ್ತೂರು ತುಳುಕೂಟ ನಾಟಕಪರ್ಬವನ್ನು ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ, ಸಮಾಜರತ್ನ ಕರಂದಾಡಿ ಲೀಲಾಧರ್ ಶೆಟ್ಟಿ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಈ ಸ್ಪರ್ಧೆಗೆ ಒಟ್ಟು ಏಳು ವಿವಿಧ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಜ.೭ರಂದು ಸಂಜೆ ೫.೩೦ಕ್ಕೆ ಶಾಸಕ ಯಶ್‌ಪಾಲ್ ಎ. ಸುವರ್ಣ ನಾಟಕ ಪರ್ಬವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಪುಣೆ ತುಳುಕೂಟದ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯಅತಿಥಿಗಳಾಗಿ ಭಾಗವಹಿಸಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ನಾಟಕ ಪರ್ಬದ ಸಂಚಾಲಕ ಬಿ. ಪ್ರಭಾಕರ ಭಂಡಾರಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಸದಸ್ಯರಾದ ಪ್ರಕಾಶ್ ಸುವರ್ಣ, ಭಾರತಿ ಟಿ.ಕೆ. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು