- ರಾಜ್ಯಾದ್ಯಂತ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲು ಪ್ರಾರ್ಥನೆ: ಎಸ್‌ಎಸ್‌ಎಂ
ನಗರದ ಹಳೇ ಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ನಗರದಲ್ಲಿ ಕೆಂಡ ತುಳಿದು ಭಕ್ತಿ ಸಮರ್ಪಿಸುವ ಕಾರ್ಯ ಸೋಮವಾರ ನಡೆಯಿತು. ಪ್ರತಿ ಸಲದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೆಂಡ ತುಳಿದರೆ, ಈ ಸಲ ಮಕ್ಕಳಾದ ಸಮರ್ಥ, ಶ್ರೇಷ್ಠ ಸಹ ಸಾಥ್ ನೀಡಿದರು.
ಅನಂತರ ಪತ್ನಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಮಕ್ಕಳು, ಕುಟುಂಬ ಸದಸ್ಯರ ಜೊತೆಗೆ ಶ್ರೀ ಸ್ವಾಮಿಯ ದರ್ಶನ ಮಾಡಿದರು.ಶ್ರೀ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ರುದ್ರಾಭಿಷೇಕ ಮತ್ತು ರುದ್ರ ಸಮರ್ಪಣೆ ನಡೆಯಿತು. ಅನಂತರ ನಡೆದ ಕೆಂಡೋತ್ಸವದಲ್ಲಿ ಸಾವಿರಾರು ಭಕ್ತರು ಕೆಂಡ ಹಾಯ್ದರು.
ಚಿಕ್ಕಂದಿನಿಂದಲೂ ವೀರಣ್ಣ ಗುಡಿ ಮುಂದೆ ಕೆಂಡ ಹಾಯುತ್ತಾ ಬಂದಿದ್ದೇನೆ. ರಾಜ್ಯಾದ್ಯಂತ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಬೇಡಿಕೊಂಡಿದ್ದೇನೆ. ದೇವರ ಕೃಪೆ ಎಲ್ಲರ ಮೇಲೂ ಇರಲಿ ಎಂದರು. ಈ ಸಂದರ್ಭ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಇದ್ದರು.
ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪರ ಜನರ ಒಲವು ಇದ್ದು, ನಾಡಿನ ಜನತೆ ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್ ಪಕ್ಷದ ಕೈ ಹಿಡಿದು, ಆಶೀರ್ವದಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ನಾವು ಯಾರನ್ನೂ ಆಪರೇಷನ್ ಮಾಡಿ, ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಬಿಜೆಪಿಯವರು ದರ್ಪ, ದೌಲತ್ತು ಬಿಡಬೇಕು. ಹಣದಿಂದಲೇ ಎಲ್ಲವನ್ನೂ ಖರೀದಿ ಮಾಡಲು ಹೋದರೆ ಇದೇ ತರಹ ಆಗುತ್ತದೆ. ಬಿಜೆಪಿಯಲ್ಲೇ ಅನೇಕ ಹಿರಿಯ ಮುಖಂಡರಿಗೆ ಅಸಮಾಧಾನವಿದೆ. ಯಡಿಯೂರಪ್ಪ ಬಂದು ರಾಜಿ ಸಂಧಾನ ಮಾಡಿದರು. ಜಾತಿಗೊಬ್ಬ ಮುಖಂಡರನ್ನು ಕರೆಸುತ್ತಿದ್ದಾರೆ. ವೈಯಕ್ತಿಕವಾಗಿ ಬೇಜರಾಗಿ ನಮ್ಮ ಪಕ್ಷಕ್ಕೆ ಬಿಜೆಪಿಯಿಂದ ಅನೇಕರು ಬರುತ್ತಿದ್ದಾರೆ ಎಂದರು.
- - - (* ಒಂದೇ ಪೋಟೋ ಮಾತ್ರ ಬಳಸಿ)-22ಕೆಡಿವಿಜಿ7:
ದಾವಣಗೆರೆ ಹಳೇ ಪೇಟೆ ಶ್ರೀ ವೀರಭದ್ರೇಶ್ವರ ರಥೋತ್ಸವ ಅಂಗವಾಗಿ ಕೆಂಡ ಹಾಯುತ್ತಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪುತ್ರಿ ಶ್ರೇಷ್ಠ ಎಂ.ಶಾಮನೂರು, ಶಾಮನೂರು ಮೊಮ್ಮಗಳು. -22ಕೆಡಿವಿಜಿ9: