ಪಂಚಲಿಂಗೇಶ್ವರ ದೇಗುಲಕ್ಕೆಅಗತ್ಯ ನೆರವು ನೀಡಲು ಶಾಸಕರ ಮನವಿ

KannadaprabhaNewsNetwork |  
Published : Apr 14, 2026, 01:15 AM IST
ದ್ | Kannada Prabha

ಸಾರಾಂಶ

ಚಿಕ್ಕಮಗಳೂರುದೇವಸ್ಥಾನ ಧಾರ್ಮಿಕವಾಗಿ ಭಕ್ತರಿಗೆ ದಾರಿ ತೋರಿಸುವ ಮಾರ್ಗವಾಗಿದೆ ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

₹1.40 ಕೋಟಿ ವೆಚ್ಚ । ಹಿರೇಮಗಳೂರಿನಲ್ಲಿ ಶ್ರೀ ಪಾತಾಳೇಶ್ವರ ದೇವಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇವಸ್ಥಾನ ಧಾರ್ಮಿಕವಾಗಿ ಭಕ್ತರಿಗೆ ದಾರಿ ತೋರಿಸುವ ಮಾರ್ಗವಾಗಿದೆ ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಹಿರೇಮಗಳೂರಿನಲ್ಲಿ ಸುಮಾರು ₹1.40 ಕೋಟಿ ವೆಚ್ಚದಲ್ಲಿ ಶ್ರೀ ಪಾತಾಳೇಶ್ವರ ದೇವಾಲಯದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿ ದೇವರು ಮನುಷ್ಯನ ಹೃದಯದಲ್ಲಿ ನೆಲೆಸಿದ್ದಾನೆ. ಆದ್ದರಿಂದ ಭಕ್ತರ ಶ್ರದ್ಧಾ ಕೇಂದ್ರ ಗಳು ದೇವಸ್ಥಾನಗಳಾಗಿವೆ. ದೇವಸ್ಥಾನಗಳನ್ನು ನಿರ್ಮಾಣ ಮಾಡಿದರೆ ಸಾಲದು ಅವುಗಳನ್ನು ಮುನ್ನಡೆಸುವಷ್ಟೇ ಸಾರ್ಥಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮದೇಹವನ್ನು ದೇಗುಲ ಮಾಡಿಕೊಳ್ಳಬೇಕೆಂಬುದು ಬಹಳ ಮುಖ್ಯವಾಗಿರುವ ಈ ಹಿನ್ನೆಲೆಯಲ್ಲಿ ಎಲ್ಲರೂ ಮಂದಿರ ಕಟ್ಟುವಕಾರ್ಯಕ್ಕೆ ಕ್ರಿಯಾಶೀಲರಾಗಬೇಕೆಂದರು.

ಶಾಸಕ ಎಚ್.ಡಿ.ತಮ್ಮಯ್ಯ ಜಾತ್ಯಾತೀತ ಹಾಗೂ ಪಕ್ಷಾತೀತ ಪಂಚಲಿಂಗೇಶ್ವರ ದೇವಸ್ಥಾನ ವಿಶಿಷ್ಠ ರೀತಿಯಲ್ಲಿ ನಿರ್ಮಾಣ ಮಾಡಲು ಉದ್ದೇಶ ಹೊಂದಿದ್ದು, ಈ ಕಾರ್ಯಕ್ಕೆ ದಾನಿಗಲು ತಮ್ಮ ಕೈಲಾದ ಅಗತ್ಯ ನೆರವು ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.ಪಂಚಲಿಂಗಗಳಿರುವ ದೇವಸ್ಥಾನ ಹಿರೇಮಗಳೂರು ಹೊರತುಪಡಿಸಿ ಜಿಲ್ಲೆಯಲ್ಲಿ ಎಲ್ಲೂ ಇಲ್ಲ ಪಾತಾಳೇಶ್ವರ, ಮಲ್ಲಿ ಕಾರ್ಜುನ, ಅಮೃತೇಶ್ವರ, ಗೌರೇಶ್ವರ, ವೈದ್ಯನಾಥೇಶ್ವರ ಈ 5 ದೇವಾಲಯಗಳಿದ್ದು, ಪಂಚಲಿಂಗೇಶ್ವರ ದರ್ಶನಕ್ಕೆ ಮೈಸೂರಿನ ತಲಕಾಡಿಗೆ ಹೋಗುತ್ತಾರೆ, ಇಲ್ಲೇ ದೇವಾಲಯ ನಿರ್ಮಾಣವಾಗುತ್ತಿರುವುದಕ್ಕೆ ಅವಕಾಶ ನೀಡಿರುವುದು ಸಂತಸತಂದಿದೆ ಎಂದರು.

ಹಿಂದೆ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕುಟುಂಬದವರು ಸುಮಾರು ₹65 ಲಕ್ಷ ನೀಡುವ ಭರವಸೆ ನೀಡಿದ್ದಾರೆ, ವೀರಶೈವ ಮಠ, ಮಂದಿರಗಳು ಸರ್ಕಾರದ ಅನುದಾನದಲ್ಲಿ ನಡೆಯುತ್ತಿಲ್ಲ. ಬದಲಾಗಿ ದಾನಿಗಳ ನೆರವಿನಿಂದ ನಡೆಯುತ್ತಿವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಸಮಾಜ ಸೇವಕಿ ಪಲ್ಲವಿ.ಸಿ.ಟಿ.ರವಿ, ಮಾತನಾಡಿದರು, ಮುಖಂಡರಾದ ಸಿದ್ದಮ್ಮ, ಎಚ್.ಸಿ.ಕಲ್ಮುರುಡಪ್ಪ, ಷಡಕ್ಷರಿ, ಬಸವರಾಜಯ್ಯ, ಚಿದಾನಂದ್, ಎಚ್.ಎಂಯೋಗೀಶ್, ನಂಜೇಶ್ ಬೆಣ್ಣೂರ್, ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು