ಕನ್ನಡಪ್ರಭ ವಾರ್ತೆ ಹರಿಹರ
ಸಮಿತಿಯ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಈ ಬಾರಿ ಗಣೇಶೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಮತ್ತು ಶ್ರದ್ಧಾಭಕ್ತಿಯ ಜೊತೆಗೆ, ಕೇದಾರನಾಥ ದೇವಾಲಯದ ಪ್ರದರ್ಶನ ಮಾಡಲಾಗುವುದು. ಶಿಸ್ತು ಬದ್ಧವಾಗಿ ಆಚರಣೆಗೆ ಸಾರ್ವಜನಿಕರು ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರ, ನೀಡುವುದರ ಮೂಲಕ ಆಚರಣೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, 63 ವರ್ಷಗಳ ಕಾಲ ಗಣೇಶನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲಾ ವರ್ಗದ ಜನರು ಪ್ರೋತ್ಸಾಹ ಸಹಕಾರ ನೀಡಬೇಕು ಎಂದರು.ಮರಾಠ ಸಮುದಾಯ ನಿಗಮದ ಅಧ್ಯಕ್ಷ ಮರಿಯೋಜಿ ರಾವ್, ಕೆಪಿಸಿಸಿ ವಕ್ತಾರ ರೇವಣಸಿದ್ದಪ್ಪ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಪೂಜಾರ್, ನಿಕಟಪೂರ್ವ ಅಧ್ಯಕ್ಷ ಎಂ ಬಿ. ಅಣ್ಣಪ್ಪ, ನಗರ ಸಭೆಯ ಮಾಜಿ ಸದಸ್ಯರಾದ ಶಂಕರ್ ಖಟಾವ್ಕರ್, ರಜನಿಕಾಂತ್, ವಸಂತ್ ಕುಮಾರ್, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಕೊಂಡಜ್ಜಿ, ಆಮ್ ಆದ್ಮಿ ಪಕ್ಷದ ಗಣೇಶ್ ದುರ್ಗದ್, ಬಸವರಾಜ್ ಹಲಸಬಾಳು, ಮುಖಂಡರಾದ ಭಾನುವಳ್ಳಿ ದಾದಾಪೀರ್, ಉಮರ್, ಅಲ್ತಾಫ್, ನಜೀರ್ ಖುರೇಶಿ, ಸಯ್ಯದ್ ಯೂಸುಫ್, ರೋಹಿತ್ ಉಪಸ್ಥಿತರಿದ್ದರು.
ಫೋಟೋ ೨೩ ಹೆಚ್.ಆರ್.ಆರ್ ೧