ಒಳ ಉಡುಪಿನಲ್ಲಿ ಮೊಬೈಲ್‌ಬಚ್ಚಿಟ್ಟ ಜೈಲು ವಾಚರ್‌ ಸೆರೆ

KannadaprabhaNewsNetwork |  
Published : Oct 27, 2025, 03:00 AM IST

ಸಾರಾಂಶ

ಒಳ ಉಡುಪಿನಲ್ಲಿ ಮೊಬೈಲ್‌ ಬಚ್ಚಿಟ್ಟುಕೊಂಡು ಅಕ್ರಮವಾಗಿ ಜೈಲಿನೊಳಗೆ ಸಾಗಿಸುತ್ತಿದ್ದ ಆರೋಪದಡಿ ಜೈಲು ವಾಚರ್‌ನನ್ನು (ವೀಕ್ಷಕ) ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಳ ಉಡುಪಿನಲ್ಲಿ ಮೊಬೈಲ್‌ ಬಚ್ಚಿಟ್ಟುಕೊಂಡು ಅಕ್ರಮವಾಗಿ ಜೈಲಿನೊಳಗೆ ಸಾಗಿಸುತ್ತಿದ್ದ ಆರೋಪದಡಿ ಜೈಲು ವಾಚರ್‌ನನ್ನು (ವೀಕ್ಷಕ) ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಮರ್‌ ಪ್ರಾಂಜೆ (29) ಬಂಧಿತ ಜೈಲು ವಾಚರ್‌. ಇವರಿಂದ ಸ್ಮಾರ್ಟ್‌ ಮೊಬೈಲ್‌ ಹಾಗೂ ಎರಡು ಇಯರ್‌ ಫೋನ್‌ ಜಪ್ತಿ ಮಾಡಲಾಗಿದೆ. ಅ.23ರಂದು ಮಧ್ಯಾಹ್ನ 12.56ಕ್ಕೆ ಬಿ-ಪಾಳಿಯ ಪಹರೆ ಕರ್ತವ್ಯಕ್ಕೆ ಹಾಜರಾಗಲು ಅಮರ್‌ ಪ್ರಾಂಜೆ ಬಂದಿದ್ದರು. ಈ ವೇಳೆ ಕೇಂದ್ರ ಕಾರಾಗೃಹದ ತಪಾಸಣಾ ವಿಭಾಗ-2ರ ಬಳಿ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಸಿಬ್ಬಂದಿ ಅಮರ್‌ ಪ್ರಾಂಜೆ ಅವರನ್ನು ತಪಾಸಣೆಗೆ ಒಳಪಡಿಸಲು ಮುಂದಾಗಿದ್ದಾರೆ.

ಈ ವೇಳೆ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಬೆಲ್ಟ್‌ ತೆಗೆಯಲು ಮುಂದಾದಾಗ ಅಮರ್‌ ಪ್ರಾಂಜೆ ವಾಪಾಸ್‌ ತೆರಳಲು ಪ್ರಯತ್ನಿಸಿದ್ದಾರೆ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಅಮರ್‌ ಪ್ರಾಂಜೆಯನ್ನು ವಶಕ್ಕೆ ಪಡೆದು ದೈಹಿಕ ತಪಾಸಣೆ ಮಾಡಿದಾಗ ಒಳಉಡುಪಿನೊಳಗೆ ಸ್ಮಾರ್ಟ್‌ ಮೊಬೈಲ್‌ ಹಾಗೂ ಎರಡು ಇಯರ್‌ ಫೋನ್‌ಗಳು ಪತ್ತೆಯಾಗಿವೆ. ಬಳಿಕ ಭದ್ರತಾ ಸಿಬ್ಬಂದಿ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ಜೈಲಿನೊಳಗೆ ಅಕ್ರಮವಾಗಿ ಮೊಬೈಲ್‌ ಸಾಗಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕರು ಅಮರ್‌ ಪ್ರಾಂಜೆ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಸಿದ ಪೊಲೀಸರು, ಆರೋಪಿ ಅಮರ್‌ ಪ್ರಾಂಜೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಆರೋಪಿಗೆ ಮೊಬೈಲ್‌ !ಜೈಲು ವಾಚರ್‌ ಅಮರ್‌ ಪ್ರಾಂಜೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿಯೊಬ್ಬನಿಗೆ ಮೊಬೈಲ್ ತಲುಪಿಸಲು ತೆಗೆದುಕೊಂಡು ಹೋಗುತ್ತಿದ್ದರು. ಆತನಿಗೆ ಈ ಮೊಬೈಲ್‌ ತಲುಪಿಸಲು ಅಮರ್‌ ಪ್ರಾಂಜೆ 10 ಸಾವಿರ ರು. ಪಡೆದುಕೊಂಡಿದ್ದರು ಎನ್ನಲಾಗಿದೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ