ಮುಂಡರಗಿಯಲ್ಲಿ ಭಾರೀ ಗಾಳಿಗೆ ಉರುಳಿದ ಮೊಬೈಲ್ ಟವರ್

KannadaprabhaNewsNetwork |  
Published : Apr 28, 2026, 02:00 AM IST
ಪಟ್ಟಣದ ಜಾಗೃತ್ ವೃತ್ತದಲ್ಲಿ ಸೋಮವಾರ ಸಂಜೆ ಬಿರುಗಾಳಿಗಡ ಖಾಸಗಿ ಕಂಪನಿ ಮೊಬೈಲ್ ಟವರ್ ನೆಲಕ್ಕುರುಳಿದೆ. | Kannada Prabha

ಸಾರಾಂಶ

ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಇದರಿಂದಾಗಿ ಟವರ್ ನಿರ್ಮಿಸಿದ್ದ ಕಟ್ಟಡಕ್ಕೂ ಹಾನಿ ಸಂಭವಿಸಿದೆ. ಹಾಗೆ ಮನೆಯ ಕಟ್ಟಡದ ಮೇಲ್ಭಾಗದ ಕಂಬಿ ಬಿದ್ದಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮುಂಡರಗಿ: ಜೋರಾದ ಗಾಳಿ ಬೀಸಿದ್ದರಿಂದಾಗಿ ಮನೆಯೊಂದರ ಮೇಲಿದ್ದ ಖಾಸಗಿ ಕಂಪನಿ ಮೊಬೈಲ್ ಟವರ್ ಕಂಬ ಧರೆಗುರುಳಿದ ಘಟನೆ ಸೋಮವಾರ ಸಂಜೆ ಪಟ್ಟಣದ ಜಾಗೃತ ವೃತ್ತದಲ್ಲಿ ನಡೆದಿದೆ.

ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಇದರಿಂದಾಗಿ ಟವರ್ ನಿರ್ಮಿಸಿದ್ದ ಕಟ್ಟಡಕ್ಕೂ ಹಾನಿ ಸಂಭವಿಸಿದೆ. ಹಾಗೆ ಮನೆಯ ಕಟ್ಟಡದ ಮೇಲ್ಭಾಗದ ಕಂಬಿ ಬಿದ್ದಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯಿಂದ ಮನೆ ಮುಂದಿದ್ದ ವಿದ್ಯುತ್ ಕಂಬ ಮುರಿದಿದೆ. ಇದರಿಂದ ಸಂಜೆ 5 ಗಂಟೆಯಿಂದಲೇ ವಿದ್ಯುತ್ ವ್ಯತ್ಯೆಯವಾಗಿ ಸಂಜೆ 8 ಗಂಟೆಯಾದರೂ ವಿದ್ಯುತ್ ಸಂಪರ್ಕ ಆಗಿರಲಿಲ್ಲ.

ಇದು ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಜನ ಹೆಚ್ಚು ಓಡಾಡುವ ಪ್ರದೇಶ ಆಗಿರುವುದರಿಂದ ರಸ್ತೆಗೆ ಅಡ್ಡಲಾಗಿ ಟವರ್ ಬಿದ್ದಿದ್ದರ ಪರಿಣಾಮ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಸಾಕಷ್ಟು ತೊಂದರೆ ಅನುಭವಿಸಿದರು.

ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿದ್ರಾಯ್ ಕಟ್ಟಿಮನಿ ಭೇಟಿ ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ನಿಯಮಾನುಸಾರ ಇದೇಯೋ ಇಲ್ಲವೋ ಎನ್ನುವ ಕುರಿತು ಚರ್ಚಿಸಿ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗಾಳಿ ಮಳೆಗೆ ಪಟ್ಟಣದ ಹಲವೆಡೆ ಮರಗಳು ನೆಲಕ್ಕುರುಳಿವೆ.ಬಿರುಗಾಳಿ ಮಳೆಗೆ ಹಾರಿದ ತಗಡು

ನರೇಗಲ್ಲ: ಸಮೀಪದ ಬೂದಿಹಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಡೆದಿದೆ.ಸಂಜೆಯ ವೇ‍‍ಳೆಗೆ ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆ ತಗಡು ಹಾರಿಬಂದು ನೇರವಾಗಿ ವಿದ್ಯುತ್ ಪರಿವರ್ತಕ(ಟ್ರಾನ್ಸ್‌ಫಾರ್ಮರ್)ಕ್ಕೆ ಅಪ್ಪಳಿಸಿದೆ. ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಸಂದರ್ಭದಲ್ಲಿ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದು, ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಸಂಬಂಧಿಸಿದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.ಗ್ರಾಮದಲ್ಲಿ ವಿದ್ಯುತ್ ಸರಬರಾಜು ಕೆಲಕಾಲ ವ್ಯತ್ಯಯಗೊಂಡಿತ್ತು. ಬಿರುಗಾಳಿ ಸಮಯದಲ್ಲಿ ಸಡಿಲವಾದ ತಗಡು, ಶೀಟ್‌ಗಳು ಮುಂತಾದ ವಸ್ತುಗಳನ್ನು ಸುರಕ್ಷಿತವಾಗಿ ಕಟ್ಟಿಹಾಕುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಅಂಬೇಡ್ಕರ್‌ ಸಮಾನತೆ ನೀಡಿದ ಮಹಾ ನಾಯಕ: ರಾಘವೇಂದ್ರ ಹಿಟ್ನಾಳ
ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಶಿವರಾಜ ತಂಗಡಗಿ