ದಬ್ಬಗುಂಟಹಳ್ಳಿ ಡೇರಿ ತಾಲೂಕಿಗೆ ಮಾದರಿ

KannadaprabhaNewsNetwork | Published : Nov 21, 2024 1:00 AM

ಸಾರಾಂಶ

ಹೊಸಕೋಟೆ: ಹಾಲು ಉತ್ಪಾದನೆಯಲ್ಲಿ ದಬ್ಬಗುಂಟಹಳ್ಳಿ ಡೇರಿ ತಾಲೂಕಿನಲ್ಲೇ ಮುಂಚೂಣಿಯಲ್ಲಿದೆ ಎಂದು ಬಮೂಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ತಿಳಿಸಿದರು.

ಹೊಸಕೋಟೆ: ಹಾಲು ಉತ್ಪಾದನೆಯಲ್ಲಿ ದಬ್ಬಗುಂಟಹಳ್ಳಿ ಡೇರಿ ತಾಲೂಕಿನಲ್ಲೇ ಮುಂಚೂಣಿಯಲ್ಲಿದೆ ಎಂದು ಬಮೂಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ತಿಳಿಸಿದರು.

ತಾಲೂಕಿನ ದಬ್ಬಗುಂಟಹಳ್ಳಿ ಡೇರಿ ಕಟ್ಟಡ ಉದ್ಘಾಟನೆ, ಕನಕದಾಸರ ಜಯಂತಿ, ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನಾಡಿದ ಅವರು,

60 ಕುಟುಂಬಗಳಿರುವ ಈ ಗ್ರಾಮದಲ್ಲಿ ೪೫ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಕೊಂಡಿವೆ. 25 ವರ್ಷಗಳ ಹಿಂದೆ 25 ಲೀಟರ್ ಹಾಲಿನಿಂದ ಶುರುವಾದ ಡೇರಿ ಇಂದು 750 ಲೀಟರ್ ಹಾಲು ಉತ್ಪಾದಿಸುತ್ತಿದೆ. 9 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. 9 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.

ಸಂಘದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ಡೇರಿ ಗ್ರಾಮಸ್ಥರ ಆರ್ಥಿಕ ಸ್ವಾವಲಂಬನೆಗೆ ನೆರವಾಗಿದೆ. ನಿರ್ದೆಶಕರು ಮತ್ತು ಉತ್ಪಾದಕರ ಸಹಕಾರವೇ ಸಂಘ ಲಾಭದಾಯಕದತ್ತ ದಾಪುಗಾಲಿಡಲು ಸಾಧ್ಯವಾಗಿದೆ ಎಂದರು.

ಬಿಜೆಪಿ ಯುವಮೋರ್ಚಾ ತಾಲುಕು ಅಧ್ಯಕ್ಷ ರಾಮು ಮಾತನಾಡಿ, ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಹೂ ಬೆಲೆ ಅಗ್ಗವಾಗಬಹುದು. ಆದರೆ ಹೈನುಗಾರಿಕೆ ಹಾಗಲ್ಲ. ರೈತರ ಕೈ ಹಿಡಿದಿದೆ ಎಂದರು.

ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶಿವಾಜಿ ನಾಯಕ್, ಡೇರಿ ಸಿಇಒ ಕೆಂಚಪ್ಪ, ಹಾಲುಪರೀಕ್ಷಕ ಮಂಜುನಾಥ್, ಉಪಾಧ್ಯಕ್ಷ ನಾರಾಯಣಪ್ಪ, ನಿರ್ದೇಶಕರಾದ ಮುನಿಯಪ್ಪ, ವೆಂಕಟೇಶಪ್ಪ ರಾಮಕೃಷ್ಣಪ್ಪ, ಶ್ರೀನಿವಾಸ್, ರವಿಕುಮಾರ್, ಗೋವಿಂದಪ್ಪ, ಉಪ ವ್ಯವಸ್ಥಾಪಕ ಶಿವಾಜಿ ನಾಯಕ್, ಸಹಾಯಕ ವ್ಯವಸ್ಥಾಪಕ ಶ್ರೀರಾಮ್, ವಿಸ್ತರಣಾಧಿಕಾರಿ ವಿನಯ್, ಸುಬ್ರಹ್ಮಣ್ಯಾಚಾರಿ, ಮುನೇಗೌಡ ಇತರರಿದ್ದರು.

ಫೋಟೋ: 20 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ದಬ್ಬಗುಂಟಹಳ್ಳಿ ಡೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ದೇಶಕರು, ಅಧ್ಯಕ್ಷರು, ಮಾಜಿ ಅಧ್ಯಕ್ಷರನ್ನು ಬಮೂಲ್ ನಿರ್ದೇಶಕ ಹುಲ್ಲೂರು ಮಂಜುನಾಥ್ ಇತರರು ಅಭಿನಂದಿಸಿದರು.

Share this article