ಹಲವು ಮನೆಗಳಿಗೆ ಹಾನಿ । ವಿದ್ಯುತ್ ಕಂಬ ಬಿದ್ದು ಹಸು ಸಾವು
ಕೊಡಗು ಜಿಲ್ಲಾದ್ಯಂತ ಶುಕ್ರವಾರ ಸಾಧಾರಣ ಮಳೆ ಸುರಿಯಿತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆ ಬಿಡುವು ನೀಡಿ ಮಳೆಯಾಯಿತು. ಮಳೆ ಕಡಿಮೆಯಾದರೂ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.
ಮಳೆ ಗಾಳಿಗೆ ಅತ್ತೂರ್ ನಲ್ಲೂರು ಗ್ರಾಮದ ಕೆಂಪಮ್ಮ ಅವರ ಮನೆಯ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ. ಕುಶಾಲನಗರ ಹೋಬಳಿ 6ನೇ ಹೊಸಕೋಟೆ ಗ್ರಾಮದ ಎಚ್.ಜೆ. ಶಾಂತರಾಜು ಅವರ ವಾಸದ ಮನೆಯ ಗೋಡೆ ಬಿದ್ದು ಭಾಗಶಃ ಹಾನಿಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ 54.48 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 51 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 54.13 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 50.75 ಮಿ.ಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ 41.90 ಮಿ.ಮೀ. ಮಳೆಯಾಗಿದೆ.ಹೋಬಳಿ ವಿವರ ; ಮಡಿಕೇರಿ ಕಸಬಾ 59, ನಾಪೋಕ್ಲು 58.80, ಸಂಪಾಜೆ 17.50, ಭಾಗಮಂಡಲ 82.60, ವಿರಾಜಪೇಟೆ 53, ಅಮ್ಮತ್ತಿ 49, ಹುದಿಕೇರಿ 54.60, ಶ್ರೀಮಂಗಲ 56, ಪೊನ್ನಂಪೇಟೆ 65, ಬಾಳೆಲೆ 40.90, ಸೋಮವಾರಪೇಟೆ 65, ಶನಿವಾರಸಂತೆ 27, ಶಾಂತಳ್ಳಿ 100, ಕೊಡ್ಲಿಪೇಟೆ 11, ಕುಶಾಲನಗರ 37.60, ಸುಂಟಿಕೊಪ್ಪ 46.20 ಮಿ.ಮೀ.ಮಳೆಯಾಗಿದೆ.