ಹುಬ್ಬಳ್ಳಿ:
ಯೋಗ ಶಿಬಿರ ನಡೆಸಿಕೊಟ್ಟ ಯೋಗಗುರು ಕೈಲಾಸ ಹಿರೇಮಠ ಮಾತನಾಡಿ, ಇಂದು ಜನರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗ ಪದ್ಧತಿಯು ಹುಟ್ಟಿಕೊಂಡಿದ್ದು ಭಾರತದಲ್ಲಿ. 5 ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಯೋಗ ಪದ್ಧತಿ ರೂಢಿಯಲ್ಲಿತ್ತು. ಇಂದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ಅಭ್ಯಾಸ ಮಾಡುತ್ತಿದ್ದಾರೆ. ಯೋಗದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದವರು ಪ್ರಧಾನಿ ನರೇಂದ್ರ ಮೋದಿ ಎಂದರು.
ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಮಾತನಾಡಿ, ಸರಳ ಜೀವನ, ಉದಾತ್ತ ಚಿಂತನೆ ಇದು ಯೋಗದ ಒಂದು ವಿಧಾನ. ಯೋಗ ಜೀವನ ನಮ್ಮದಾದಲ್ಲಿ ಅದು ಸತ್ಯ ಮಾರ್ಗವಾಗಿರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಇಂದು ಹೆಚ್ಚು ಅವಶ್ಯವಾಗಿದ್ದು, ಜಗತ್ತಿನ 197ಕ್ಕೂ ಹೆಚ್ಚು ದೇಶಗಳ ಜನರು ಇಂದು ಯೋಗಕ್ಕೆ ಮೊರೆಹೋಗಿರುವುದು ವಿಶೇಷವಾಗಿದೆ ಎಂದರು.ವೀಣಾ ಮಳಿಯೇ ಪರಿಚಯಿಸಿದರು. ಮಾತಾಜಿ ರತ್ನಾ ಪವಾಡಶೆಟ್ಟಿ ನಿರೂಪಿಸಿದರು. ಕರ್ಣಾ ಭಂಡಾರಿ ವಂದಿಸಿದರು.