ದೇಶಕ್ಕೆ ಭದ್ರ ಬುನಾದಿ ಮೋದಿ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

KannadaprabhaNewsNetwork | Updated : Apr 12 2024, 01:03 AM IST

ಸಾರಾಂಶ

ಮುಂದಿನ ೨೬ ರಂದು ನಡೆಯುವ ಚುನಾವಣೆಯಲ್ಲಿ ತಾಯಂದಿರು, ಹಿರಿಯರು, ಯುವಕರು, ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿನಂತಿಸಿದರು. ಹೊಳೆನರಸೀಪುರದಲ್ಲಿ ಗುರುವಾರ ಆಯೋಜನೆ ಮಾಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಪ್ರಚಾರ ಸಭೆಯಲ್ಲಿ ಮತಯಾಚನೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ದೇಶವನ್ನು ಭದ್ರ ಬುನಾದಿಯೊಂದಿಗೆ ನಿಲ್ಲಿಸುವ ಶಕ್ತಿ ಇರುವಂತಹ ವ್ಯಕ್ತಿ ಮೋದಿ. ೮೫ ಕೋಟಿ ಜನತೆಗೆ ಅಕ್ಕಿ ಕೊಡುವ ಜತೆಗೆ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಪ್ರಚಾರಕ್ಕೆ ಬೆಲೆ ಕೊಡದೆ, ಮುಂದಿನ ೨೬ ರಂದು ನಡೆಯುವ ಚುನಾವಣೆಯಲ್ಲಿ ತಾಯಂದಿರು, ಹಿರಿಯರು, ಯುವಕರು, ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿನಂತಿಸಿದರು.

ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ಗುರುವಾರ ಆಯೋಜನೆ ಮಾಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ, ಐದು ರಾಜ್ಯಗಳಿಗೆ, ಬೆಂಗಳೂರಿನಲ್ಲಿ ಹಣ ವಸೂಲಿ ಮಾಡುತ್ತಾರೆ. ಇಡೀ ಬೆಂಗಳೂರು ಅವರ ಕೈಯಲ್ಲಿದೆ. ಬಿಡಿಎ, ಕಾರ್ಪೊರೇಷನ್ ಹಾಗೂ ಇತರೆ ಇದೆ, ಬೇರೆ ವಿಷಯ ಚರ್ಚೆ ಬೇಡ ಎಂದರು.

ಕಾರ್ಯಕ್ರಮದ ನಂತರ ಗ್ರಾಮದ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಯುಗಾದಿ ಹಬ್ಬದ ದಿನ ಕರಗ ಹೊತ್ತ ವೇದಮೂರ್ತಿ ಕರಿಬಸವಯ್ಯನವರ ಮನೆಗೆ ತೆರಳಿ, ಮಾತನಾಡಿಸಿದರು. ನಂತರ ಜೆಡಿಎಸ್ ಮುಖಂಡ ಹಾಗೂ ಆತ್ಮೀಯರಾಗಿದ್ದ ದಿ. ನಂಜುಂಡಪ್ಪನವರ ಮನೆಗೆ ತೆರಳಿ, ಅವರ ಪುತ್ರ ಬಸವರಾಜು ಜತೆ ಚರ್ಚಿಸಿ, ಮಧ್ಯಾಹ್ನದ ಬೋಜನ ಸ್ವೀಕರಿಸಿ, ಹರದನಹಳ್ಳಿಗೆ ತೆರಳಿದರು.ಬಿಜೆಪಿ-ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯ, ಭಿನ್ನಮತವಿಲ್ಲ: ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ಸಕಲೇಶಪುರ: ನೈತಿಕತೆಯ ಆಧಾರದಲ್ಲಿ ಲೋಕಸಭಾ ಚುನಾವಣೆ ಎದುರಿಸುವ ಶಕ್ತಿ ಎನ್‌ಡಿಎ ಕಾರ್ಯಕರ್ತರಿಗಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಹೇಳಿದರು.ಶನಿವಾರ ಲೋಕಸಭಾ ಚುನಾವಣೆ ಹಿನ್ನೆಲೆ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿ, ‘ಎರಡು ಪಕ್ಷದ ಜಿಲ್ಲಾ ಮುಖಂಡರಲ್ಲಿ ಭಿನ್ನಾಭಿಪ್ರಾಯವಿದೆ. ಆದರೆ ಭಿನ್ನಮತವಿಲ್ಲ. ಭಿನ್ನಾಭಿಪ್ರಾಯ ಹೋಗಲಾಡಿಸುವ ನಿಟ್ಟಿನಲ್ಲಿ ಸಮನ್ವಯ ಸಭೆಯನ್ನು ಆಯೋಜಿಸಲಾಗಿದೆ. ದೇಶ ಇದ್ದರೆ ಮಾತ್ರ ನಾವು ಈ ದೃಷ್ಟಿಯಲ್ಲಿ ಯೋಚನೆ ಮಾಡಬೇಕಿದೆ. ಈ ಬಾರಿ ನಾಲ್ಕು ನೂರಕ್ಕೂ ಅಧಿಕ ಸಂಸದರನ್ನು ಕಳುಹಿಸಿದ್ದೇ ಆದಲ್ಲಿ ದೇಶದ ಭದ್ರತೆಯ ದೃಷ್ಟಿಯಿಂದ ಮತ್ತಷ್ಟು ಬಾಕಿ ಉಳಿದಿರುವ ಕೆಲಸಗಳು ನೆರವೇರಲಿವೆ. ಆದ್ದರಿಂದ, ನಾಲ್ಕು ನೂರು ಸಂಸದರಲ್ಲಿ ಹಾಸನದ ಎನ್‌ಡಿಎ ಅಭ್ಯರ್ಥಿಯು ಒಬ್ಬರಾಗಲಿ’ ಎಂದು ಹೇಳಿದರು.ಜೆಡಿಎಸ್ ನಾಯಕ ಎಚ್.ಡಿ ರೇವಣ್ಣ ಮಾತನಾಡಿ, ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದ ವೇಳೆ ದೇವದೂತರೊಬ್ಬರ ಉದಯವಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಿಲುಕಿ ನಲುಗಿದ್ದ ಭಾರತ ದೇಶದ ರಕ್ಷಣೆಗಾಗಿ ಉದಯಿಸಿದ ದೇವದೂತ ನರೇಂದ್ರ ಮೋದಿ. ಆದ್ದರಿಂದ, ರೇವಣ್ಣ,ಪ್ರಜ್ವಲ್ ರೇವಣ್ಣ ಮುಖ ನೋಡದೆ ದೇಶದ ಹಿತದ ಗಮನದಲ್ಲಿಟ್ಟುಕೊಂಡು ಮತ ಹಾಕಿ ಎಂದರು.ಹಾಸನ ಲೋಕಸಭಾ ಚುನಾವಣೆ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಕಳೆದ ಐದು ವರ್ಷದಲ್ಲಿ ಜಿಲ್ಲೆಯ ಪ್ರತಿ ಗ್ರಾ.ಪಂ ಮಟ್ಟದಲ್ಲಿ ಸಭೆ ನಡೆಸಿದ ತೃಪ್ತಿ ನನಗಿದೆ. ತನ್ನ ಅಧಿಕಾರದ ಅವಧಿಯಲ್ಲಿ ಪಕ್ಷ ಭೇದಭಾವ ಮಾಡದೆ ಅಭಿವೃದ್ದಿಯ ಕೆಲಸಕ್ಕೆ ಸಹಕರಿಸಿದ್ದೇನೆ. ಕಾಂಗ್ರೆಸ್ ಪಕ್ಷ ಮಲೆನಾಡಿಗೆ ನೀಡಿರುವ ಕೊಡುಗೆ ನಗಣ್ಯವಾಗಿದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅನಿವಾರ್ಯವಾಗಿದೆ. ಸಂಸದನಾಗಿ ಆಡಳಿತ ನಡೆಸಿದ ನನ್ನ ಐದು ವರ್ಷದಲ್ಲಿ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಇನ್ನೊಂದು ಅವಕಾಶ ನೀಡಿ’ ಎಂದರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮೈತ್ರಿಧರ್ಮ ಪಾಲನೆ ಅನಿವಾರ್ಯವಾಗಲಿದೆ. ಆದ್ದರಿಂದ, ಎರಡು ಪಕ್ಷದ ಕಾರ್ಯಕರ್ತರು ಹೊಂದಾಣಿಕೆ ಮೂಲಕ ಕೆಲಸ ಮಾಡಬೇಕಿದೆ. ಪ್ರಪಂಚದಲ್ಲೆ ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ ಅವಶ್ಯಕತೆ ಇದೆ. ಎರಡು ಪಕ್ಷದ ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಭಿಪ್ರಾಯವನ್ನು ಮರೆತು ಕೆಲಸ ಮಾಡಬೇಕು ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಲೀಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಬಿ.ಆರ್ ಗುರುದೇವ್, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ತಾಲೂಕು ಭಾರತೀಯ ಜನತಾಪಕ್ಷದ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಬೇಲೂರು ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಸಕಲೇಶಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಸೋಮಶೇಖರ್, ಪ್ರತಾಪ್, ಪ್ರಸನ್ನಕುಮಾರ್, ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್ ಇದ್ದರು.

Share this article