ಮೊಗಳ್ಳಿ ಗಣೇಶ್‌ಗೆ ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ

KannadaprabhaNewsNetwork |  
Published : Oct 12, 2025, 01:00 AM IST
11ಎಚ್ಎಸ್ಎನ್16 : ಡಾ.ಮೊಗಳ್ಳಿಗಣೇಶ್  ಮತ್ತು ದೇವೇಂದ್ರ ಹೆಗ್ಗಡೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ  ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಡಾ.ಮೊಗಳ್ಳಿ ಗಣೇಶ್ ಅವರು ಅಕ್ಷರವನ್ನೇ ತಮ್ಮ ಅಸ್ತ್ರವಾಗಿಸಿಕೊಂಡು ಕಥೆ, ಕಾದಂಬರಿ, ಪ್ರಬಂಧ, ಸಂಶೋಧನ ಕೃತಿ, ಬೀದಿನಾಟಕ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ ಪ್ರಖ್ಯಾತಿಯನ್ನು ಗಳಿಸಿದ್ದು ಇವರ ಸಾಹಿತ್ಯ ರಾಜ್ಯ , ರಾಷ್ಟ್ರ, ಅಂತಾರಾಷ್ಟ್ರಮಟ್ಟದಲ್ಲಿ ಮನ್ನಣೆಯನ್ನು ಪಡೆದಿದೆ.ಇವರ ಸಾಹಿತ್ಯ ಸೇವೆ ನಾಡಿಗೆ ಆಗಾಧವಾಗಿದೆ ಸದಾ ಸಮಾಜ ಜಾತಿ ಧರ್ಮ ವರ್ಣ ವ್ಯವಸ್ಥೆಯ ವಿರುದ್ಧ ಬೇಸರಗೊಂಡಿದ್ದರು. ಕುವೆಂಪು, ಪೂರ್ಣಚಂದ್ರತೇಜಸ್ವಿ, ಪಿ.ಲಂಕೇಶ್, ದೇವನೂರು ಮಹಾದೇವ, ಸಿದ್ದಲಿಂಗಯ್ಯ ಅವರ ಬರಹಗಳ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಇವರು ಸ್ವಾಭಿಮಾನಿ, ಮಾತು ಮೆದುವಾದರೂ ಬಹಳ ಅರ್ಥಗರ್ಭಿತವಾಗಿರುತ್ತಿತ್ತು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಾಹಿತಿ ಡಾ. ಮೊಗಳ್ಳಿ ಗಣೇಶ್ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದು ಸಾಹಿತಿ ಸಿ. ಸುವರ್ಣ ಕೆ.ಟಿ. ಶಿವಪ್ರಸಾದ್ ಮನವಿ ಮಾಡಿದ್ದಾರೆ.

ನಗರದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಡಾ.ಮೊಗಳ್ಳಿ ಗಣೇಶ್ ಸಾಹಿತ್ಯಾಭಿಮಾನಿಗಳ ವತಿಯಿಂದ ಆಯೋಜಿಸಿದ್ದ ಡಾ. ಮೊಗಳ್ಳಿ ಗಣೇಶ್ ಮತ್ತು ದೇವೇಂದ್ರ ಹೆಗ್ಗಡೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಮೊಗಳ್ಳಿ ಗಣೇಶ್ ಅವರು ಅಕ್ಷರವನ್ನೇ ತಮ್ಮ ಅಸ್ತ್ರವಾಗಿಸಿಕೊಂಡು ಕಥೆ, ಕಾದಂಬರಿ, ಪ್ರಬಂಧ, ಸಂಶೋಧನ ಕೃತಿ, ಬೀದಿನಾಟಕ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ ಪ್ರಖ್ಯಾತಿಯನ್ನು ಗಳಿಸಿದ್ದು ಇವರ ಸಾಹಿತ್ಯ ರಾಜ್ಯ , ರಾಷ್ಟ್ರ, ಅಂತಾರಾಷ್ಟ್ರಮಟ್ಟದಲ್ಲಿ ಮನ್ನಣೆಯನ್ನು ಪಡೆದಿದೆ.ಇವರ ಸಾಹಿತ್ಯ ಸೇವೆ ನಾಡಿಗೆ ಆಗಾಧವಾಗಿದೆ ಸದಾ ಸಮಾಜ ಜಾತಿ ಧರ್ಮ ವರ್ಣ ವ್ಯವಸ್ಥೆಯ ವಿರುದ್ಧ ಬೇಸರಗೊಂಡಿದ್ದರು. ಕುವೆಂಪು, ಪೂರ್ಣಚಂದ್ರತೇಜಸ್ವಿ, ಪಿ.ಲಂಕೇಶ್, ದೇವನೂರು ಮಹಾದೇವ, ಸಿದ್ದಲಿಂಗಯ್ಯ ಅವರ ಬರಹಗಳ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಇವರು ಸ್ವಾಭಿಮಾನಿ, ಮಾತು ಮೆದುವಾದರೂ ಬಹಳ ಅರ್ಥಗರ್ಭಿತವಾಗಿರುತ್ತಿತ್ತು ಎಂದರು.ಹಿರಿಯ ದಲಿತ ಹೋರಾಟಗಾರ ಕೃಷ್ಣದಾಸ್ ಮಾತನಾಡಿ, ಡಾ. ಮೊಗಳ್ಳಿ ಗಣೇಶ್ ಅವರು ತಾವು ಮೈಸೂರು ಮಾನಸಗಂಗ್ರೋತ್ರಿಯಲ್ಲಿ ಎಂ.ಎ. ಓದುತ್ತಿದ್ದಾಗ ಅವರ ಒಡನಾಟದ ಬಗ್ಗೆ ಸವಿಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಮೊಗಳ್ಳಿ ಗಣೇಶ್ ನೇರ ನುಡಿಯುಳ್ಳವರು ಅವರ ವಿಮರ್ಶಾಕೃತಿ "ತಕರಾರು " ಇಡೀ ಸಾಹಿತ್ಯ ಲೋಕವನ್ನೇ ಅವರತ್ತ ನೋಡುವಂತೆ ಮಾಡಿದವರು ಮೊಗಳ್ಳಿಯವರು. ತಾವು ಅನುಭವಿಸಿದ ನೋವು ಸಂಕಟವನ್ನೇಕಥೆಯಲ್ಲಿ ಅಭಿವ್ಯಕ್ತಿಸಿ ದಲಿತ ಲೋಕವನ್ನುಇಡೀ ನಾಡಿಗೆ ಪರಿಚಯಿಸಿ ಶ್ರೇಷ್ಠ ಕಥೆಗಾರರಾಗಿದ್ದಾರೆ. ಅವರ ಸಾಹಿತ್ಯಕ್ಕೆ ಸಿಕ್ಕ ಬೇಕಾದ ಮನ್ನಣೆ ಸಿಕ್ಕದೆ ಇರುವುದು ನೋವಿನ ಸಂಗತಿ. ಸರಕಾರ ಈಗಲಾದರೂ ಅವರಿಗೆ ಮರಣೋತ್ತರ ಕನ್ನಡರಾಜ್ಯೋತ್ಸವ ಪ್ರಶಸ್ತಿ ನೀಡಲಿ ಎಂದು ಆಗ್ರಹಿಸಿದರು. ಇನ್ನು ೮೪ರ ದಶಕದಲ್ಲಿಯೇ ದಲಿತ ಚಳವಳಿಯ ಮುಂಚೂಣಿಯ ನಾಯಕರಾದ ಬುದ್ಧಘೋಷ ದೇವೇಂದ್ರ ಅವರು ನಮ್ಮನ್ನು ಅಗಲಿರುವುದು ನೋವಿನ ಸಂಗತಿ. ಇವರು ಕೂಡ ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ ಮಾಡುತ್ತಾ ಬಂದವರು. ಕಳೆದ ೧೦ ವರ್ಷಗಳಿಂದ ಬೌದ್ಧ ಧರ್ಮ ಪ್ರಚಾರಕ್ಕರಾಗಿ ಕೆಲಸ ಮಾಡುತ್ತಿದ್ದರು. ಇವರ ಹೋರಾಟಗಳು ನಮಗೆ ನಿಜಕ್ಕೂ ಸ್ಫೂರ್ತಿಯಾಗಿವೆ ಎಂದರು.ದೇವೆಂದ್ರ ಅವರು ಅಪ್ಪಟ್ಟ ಅಂಬೇಡ್ಕರ್‌ ವಾದಿಯಾಗಿ ತಳ ಸಮುದಾಯವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದರು. ಇವರ ನಿಧನ ನಮಗೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಇವರ ಹೋರಾಟಗಳ ಬಗ್ಗೆ ನೆನಪಿಸಿಕೊಂಡರು. ಎಸ್ಸಿ, ಎಸ್ಟಿ ನಿವೃತ್ತ ಅಧಿಕಾರಿಗಳ ಸಂಘದ ಅಧ್ಯಕ್ಷ ಕಾಳಯ್ಯ, ಚಿಂತಕರು ಪ್ರಾಧ್ಯಾಪಕರಾದ ಪ್ರೊ. ಕೃಷ್ಣ ಅತ್ನಿ, ಅಂತಾರಾಷ್ಟ್ರೀಚಿತ್ರ ಕಲಾವಿದರಾದ ಕೆ.ಟಿ. ಶಿವಪ್ರಸಾದ್, ಉಪನ್ಯಾಸಕರಾದ ವೆಂಕಟೇಶ್ ದೇವಿಪುರ, ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್, ಹಿರಿಯ ದಲಿತ ಹೋರಾಟಗಾರದ ಹಿರೇಶ್ ಈರೇಹಳ್ಳಿ, ಅಂಬುಗ ಮಲ್ಲೇಶ್, ಬೌದ್ಧಮಹಾಸಭಾದ ಅಧ್ಯಕ್ಷ ಬಸವರಾಜ್ ಇವರುಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜಶೇಖರ್, ಲಕ್ಕಪ್ಪ ಮಾಸ್ಟರ್, ಮಲ್ಲಯ್ಯ, ಗುರುಮೂರ್ತಿ, ಗೋವಿಂದರಾಜು, ದ್ಯಾವಪ್ಪ ಕಟ್ಟಾಯ, ಪತ್ರಕರ್ತ ವೆಂಕಟೇಶ್ ಬ್ಯಾಕರವಳ್ಳಿ, ಕುಮಾರ್‌ಗೌರವ, ಶಿವಮ್ಮ, ಆಚುಗೋಡನಹಳ್ಳಿ ಉಮೇಶ್ ,ಕೆಪಿಎಸ್‌ಎಸ್ ಜಗದೀಶ್, ಬಿ.ಎನ್. ಜಯರಾಂ, ನಲ್ಲಪ್ಪಣ್ಣ ಇನ್ನಿತರೆ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು