ದೇಶದ ರಾಷ್ಟ್ರೀಯ ಕ್ರೀಡೆಯಾದ ಹಾಕಿ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ಮೋಹಿತ್ ಆಗಿದ್ದು, ಅದರಲ್ಲೂ ತಾಲೂಕಿನ ಸುಪುತ್ರ ಎಂಬುದು ಎಷ್ಟೋ ಜನರಿಗೆ ಗೊತ್ತೆ ಇಲ್ಲ. ಬಾಲ್ಯದ ಜೀವನ ಪಟ್ಟಣದಲ್ಲೇ ನಡೆದರೂ ಹುಟ್ಟಿನಿಂದ ತಂದೆ ಶಶಿಕುಮಾರ್ ತಾಯಿ ಆಶಾರಾಣಿ ದಂಪತಿಯ ಪುತ್ರ ಮೋಹಿತ್ ಒಬ್ಬನನ್ನು ಕ್ರಿಕೇಟ್ ಆಟಗಾರನನ್ನಾಗಿ ಮಾಡಲು ಮುಂದಾದರು. ಆದರೆ ಅಂದಿನ ಸಮಯದಲ್ಲಿ ಕ್ರೀಡಾ ತರಭೇತಿಗೆ ಹೆಚ್ಚಿನ ಸಮಯ ಹಾಗೂ ವ್ಯಯವಾಗುವುದರಿಂದ ಮಾಹಿತಿ ಕೊರತೆಯಿಂದಾಗಿ ಅದನ್ನು ಕೈಬಿಟ್ಟು ಹಾಕಿ ಆಟಕ್ಕೆ ಹೆಚ್ಚಿನ ಆಸಕ್ತಿ ತೋರಿದ ಹಿನ್ನಲೆಯಲ್ಲಿ ಮೋಹಿತ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಆಗಸ್ಟ್ ೧೫ರಿಂದ ೩೦ರವರೆಗೆ ನೆದರ್‌ಲ್ಯಾಂಡ್ ಹಾಗೂ ಬೆಲ್ಜಿಯಂನಲ್ಲಿ ನಡೆಯಲಿರುವ ೧೬ನೇ ಆವೃತ್ತಿಯ ಎಫ್.ಐ. ಎಚ್ (ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ) ಹಾಕಿ ವಿಶ್ವಕಪ್‌ನ ಭಾರತೀಯ ಪುರುಷರ ತಂಡಕ್ಕೆ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಒಬ್ಬ ಗ್ರಾಮೀಣ ಪ್ರತಿಭಾವಂತ ಕ್ರೀಡಾಪಟು ಮೋಹಿತ್ ಎಚ್. ಎಸ್ ಆಯ್ಕೆಯಾಗಿದ್ದಾರೆ.
ದೇಶದ ರಾಷ್ಟ್ರೀಯ ಕ್ರೀಡೆಯಾದ ಹಾಕಿ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ಮೋಹಿತ್ ಆಗಿದ್ದು, ಅದರಲ್ಲೂ ತಾಲೂಕಿನ ಸುಪುತ್ರ ಎಂಬುದು ಎಷ್ಟೋ ಜನರಿಗೆ ಗೊತ್ತೆ ಇಲ್ಲ. ಬಾಲ್ಯದ ಜೀವನ ಪಟ್ಟಣದಲ್ಲೇ ನಡೆದರೂ ಹುಟ್ಟಿನಿಂದ ತಂದೆ ಶಶಿಕುಮಾರ್ ತಾಯಿ ಆಶಾರಾಣಿ ದಂಪತಿಯ ಪುತ್ರ ಮೋಹಿತ್ ಒಬ್ಬನನ್ನು ಕ್ರಿಕೇಟ್ ಆಟಗಾರನನ್ನಾಗಿ ಮಾಡಲು ಮುಂದಾದರು. ಆದರೆ ಅಂದಿನ ಸಮಯದಲ್ಲಿ ಕ್ರೀಡಾ ತರಭೇತಿಗೆ ಹೆಚ್ಚಿನ ಸಮಯ ಹಾಗೂ ವ್ಯಯವಾಗುವುದರಿಂದ ಮಾಹಿತಿ ಕೊರತೆಯಿಂದಾಗಿ ಅದನ್ನು ಕೈಬಿಟ್ಟು ಹಾಕಿ ಆಟಕ್ಕೆ ಹೆಚ್ಚಿನ ಆಸಕ್ತಿ ತೋರಿದ ಹಿನ್ನಲೆಯಲ್ಲಿ ಮೋಹಿತ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ.
೨೪ ವರ್ಷದ ಮೋಹಿತ್ ಅವರು ೨೦೧೫ ರಲ್ಲಿ ಪ್ರೌಢಶಾಲೆಗೆ ಕೊಡಗು ಜಿಲ್ಲೆಯ ಕೂಡಿಗೆಯ ಕ್ರೀಡಾ ಶಾಲೆಗೆ ಆಯ್ಕೆಯಾದರು. ೨೦೧೮ರವರೆಗೆ ಅಲ್ಲಿನ ಹಾಕಿ ತರಬೇತುದಾರ ಸಂಜಯ್ ಬಾಣದ ಅವರಲ್ಲಿ ತರಬೇತಿ ಪಡೆದರು. ಆ ಸಂದರ್ಭದಲ್ಲಿಯೇ ಗೋಲ್‌ಕೀಪರ್ ಪಾತ್ರಕ್ಕೆ ಹೆಚ್ಚು ಒತ್ತು ನೀಡಿದ್ದ ಮೋಹಿತ್ ಎಚ್. ಎಸ್ ಇದೀಗ ರಾಷ್ಟ್ರೀಯ ತಂಡದ ಗೋಲ್‌ಕೀಪರ್ ಆಗಿ ವಿಶ್ವಕಪ್ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. ವಿಶ್ವಕಪ್ ಗೆ ಆಯ್ಕೆಯಾಗಿರುವ ಆಟಗಾರರ ಪೈಕಿ ಇವರು ಕರ್ನಾಟಕದ ಏಕೈಕ ಆಟಗಾರರಾಗಿದ್ದಾರೆ.
೫ ದಶಕಗಳ ಬಳಿಕ ಕಪ್ ಗೆಲ್ಲುವ ನಿರೀಕ್ಷೆ:
೧೯೭೧ರಲ್ಲಿ ಪ್ರಾರಂಭಗೊಂಡ ಹಾಕಿ ವಿಶ್ವಕಪ್ ಟೂರ್ನಿಯ ೩ನೇ ಆವೃತ್ತಿ ೧೯೭೫ರಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಐದನೇ ಪುಟಕ್ಕೆ ಇದಾದ ಬಳಿಕ ೫ ದಶಕಗಳಾದರೂ ಮತ್ತೇ ವಿಶ್ವಕಪ್ ಗೆಲ್ಲಲು ಯಶಸ್ವಿಯಾಗಿಲ್ಲ. ೨೦೨೩ರಲ್ಲಿ ಕಳೆದ ಆವೃತ್ತಿ ಭಾರತದಲ್ಲಿಯೇ ನಡೆದರೂ ಭಾರತವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ೨೦೨೦ ಹಾಗೂ ೨೦೨೪ರಲ್ಲಿ ಒಲಂಪಿಕ್ ಕಂಚು ಪದಕ ಹಾಗೂ ೨೦೨೫ರಲ್ಲಿ ಏ? ಕಪ್ ಚಾಂಪಿಯನ್ ಆಗಿರುವ ಭಾರತ ಈ ಬಾರಿಯ ವಿಶ್ವಕಪ್‌ನಲ್ಲಿ ಗಣನೀಯ ಸಾಧನೆಗೈಯ್ಯುವ ನಿರೀಕ್ಷೆಯಿದೆ. ಒಟ್ಟು ೧೬ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ೪ ಗುಂಪುಗಳು ಗ್ರೂಪ್ ಹಂತದಲ್ಲಿದ್ದು, ಭಾರತದ ಗುಂಪಿನಲ್ಲಿ ಇಂಗ್ಲೆಂಡ್, ವೇಲ್ಸ್ ಹಾಗೂ ಪಾಕಿಸ್ತಾನ ಸ್ಥಾನ ಪಡೆದಿವೆ. ನಾಯಕ ಹರ್ಮನ್ ಪ್ರೀತ್ ಸಿಂಗ್‌ನೊಂದಿಗೆ ಇತರ ಆಟಗಾರರಾದ ಜರ್ಮನ್ ಪ್ರೀತ್‌ಸಿಂಗ್, ಅಮಿತ್ ರೋಹಿದಾಸ್, ಜುಗ್‌ರಾಗ್ ಸಿಂಗ್, ಸಂಯತ್ ಸುಮಿತ್, ಯಶ್‌ದೀಪ್ ಸಿವಾಚ್, ರಜೀಂದರ್ ಸಿಂಗ್, ಆದಿತ್ಯ ಅರ್ಜುನ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ಶಿಲಾನಂದ್ ಲಕ್ಷರಾ, ಸುಖ್‌ಜೀತ್ ಸಿಂಗ್, ಅಭಿಷೇಕ್ ಹಾಗೂ ಗೋಲ್ ಕೀಪರ್‌ಗಳಾಗಿ ಸೂರಜ್ ಕರ್ಕೇರ ಮತ್ತು ಕೂಡಿಗೆ ಶಾಲೆಯ ಮೋಹಿತ್ ಎಚ್. ಎಸ್ ಪಾಕ್ ಪಡೆದುಕೊಂಡಿದ್ದಾರೆ.
ಒಟ್ಟಾರೆ ಒಬ್ಬ ಗ್ರಾಮೀಣ ಪ್ರತಿಭೆ ದೇಶದ ಪ್ರತಿಷ್ಠಿತ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಜಿಲ್ಲೆಗೆ ಒಂದು ಹೆಮ್ಮೆಯ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮೋಹಿತ್ ಅವರನ್ನು ಅಭಿನಂದಿಸಿ ಗುರುತಿಸುವ ಕೆಲಸ ಮಾಡುವಂತಾಗಲಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.