ಚೌಕಿ ಮಠದ ಶ್ರೀ ಅಭಿಮತ । ಶಿವರಾತ್ರಿ, ವಿಶೇಷ ಪೂಜೆ । ಧರ್ಮ ಜಾಗೃತಿ ಕಾರ್ಯಕ್ರಮ
ಜೀವನದಲ್ಲಿ ಕೋಟಿ ಕೋಟಿ ಇದ್ದರೂ ನೆಮ್ಮದಿ ಸಿಗುತ್ತಿಲ್ಲ ಅದೇ ಮಠ, ಮಂದಿರ, ದೇವಸ್ಥಾನಗಳಿಗೆ ಹೋದರೆ ಬದುಕಿನ ನೆಮ್ಮದಿ ಸಿಗುತ್ತದೆ ಎಂದು ಶಿವಮೊಗ್ಗ ತಾಲೂಕು ಹಾರನಹಳ್ಳಿ ಚೌಕಿ ಮಠದ ನಿಲಂಕಠ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಶ್ರೀ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನದಲ್ಲಿ 19ನೇ ವರ್ಷದ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಜಾಗರಣಿ ಮತ್ತು ಧರ್ಮಜಾಗೃತಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಶ್ರೀ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನದ ಗುರುಗಳಾದ ಶ್ರೀ ನಿರಂಜನಸ್ವಾಮಿ ಇವರು ಭಕ್ತರ ಸಮೂಹವನ್ನು ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ ಏನ್ನನ್ನು ಬಯಸದೇ ನಿಮ್ಮ ಬದುಕನ್ನು ಹಸನು ಮಾಡಿದ್ದಾರೆ, ನಿಮ್ಮ ಬದುಕು ಸ್ವಲ್ಪ ವ್ಯತ್ಯಾಸವಾದರೂ ಜೀವನ ವ್ಯತ್ಯಾಸವಾಗಬಹುದು. ನಿಮ್ಮ ಬದುಕು ಶಾಂತಿ ನೆಮ್ಮದಿಯಿಂದ ನಡೆಯಬೇಕು. ನೀವು ಮನೆಯಲ್ಲಿ ಟಿವಿಗಳಲ್ಲಿ ದಾರವಾಹಿ ಮತ್ತು ಎಲ್ಲಾ ದೃಶ್ಯ ಮಾಧ್ಯಮಗಳನ್ನು ಬಿಟ್ಟು ಶ್ರೀ ಗುರುರುದ್ರಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದೀರಿ ನೀವೇ ಭಾಗ್ಯಶಾಲಿಗಳು ಎಂದರು.
ದೇವರ ಮೇಲೆ ಶ್ರದ್ಧಾ ಭಕ್ತಿಯಲ್ಲಿ ನಂಬಿಕೆ ಇರಬೇಕು. ನಾವು ಏನು ಮಾಡುತ್ತೇವೆ ಮಕ್ಕಳು ಸಹ ಅದನ್ನೇ ಕಲಿಯುತ್ತವೆ, ಆದ್ದರಿಂದ ಮಕ್ಕಳಿಗೆ ಒಳ್ಳೆ ಸಂಸ್ಕಾರವನ್ನು ಕಲಿಸಬೇಕು. ನೀವು ಮನೆಯಲ್ಲಿ ಚೆನ್ನಾಗಿದ್ದರೆ ಮನೆಯು ನಂದಗೋಕುಲವಾಗುತ್ತದೆ. ನೀವು ಮನೆಯಲ್ಲಿ ದೀಪ ಬೆಳಗಿಸಬೇಕು ಇನ್ನೊಬ್ಬರ ಮನೆಯಲ್ಲಿ ಕಿಚ್ಚು ಹಚ್ಚಿಸಬಾರದು ನೀವು ಮಾಡಿದ ದುಡಿಮೆಯಲ್ಲಿ ಸ್ವಲ್ಪವಾದರೂ ದಾನ ಮಾಡಬೇಕು ನೀವೆಲ್ಲಾ ಮಠಕ್ಕೆ ದೊಡ್ಡಶಕ್ತಿಯಾಗಬೇಕು. ಯಾವುದೇ ಆರ್ಥಿಕ ನೆರವು ಇಲ್ಲದೇ ಭಕ್ತರ ಸಹಕಾರದಿಂದ ಶ್ರೀಮಠದ ಗುರುಗಳು ಮಠವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆಂದು ಹೇಳಿದರು.ಶಿಕಾರಿಪುರ ತಾಲೂಕು ಸಾಲೂರು ಹಿರೇಮಠದ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನೀವೆಲ್ಲ ನಿಮ್ಮ ನಿಮ್ಮ ಮನೆಯಲ್ಲಿ ಧರ್ಮಗಳನ್ನು ಆಚರಿಸಿ ಆದರೆ ಹೊರ ಬಂದ ಮೇಲೆ ನಾವೆಲ್ಲ ಒಂದೆ. ಜಗತ್ತಿನಲ್ಲಿ ಜಾತಿ ಇರುವುದು ಎರಡೇ ಗಂಡಸು, ಹೆಂಗಸು, ಜಗತ್ತಿಗೆ ಮೊದಲ ತಾಯಿ 9ನವರಾತ್ರಿ, 10ಶಿವರಾತ್ರಿ ಎಂದು ಹೇಳಿದರು.
ಶಿವಮೊಗ್ಗದ ನರೇಂದ್ರ ಗೂರೂಜಿ, ಶ್ರೀ ಗುರುರುದ್ರಸ್ವಾಮಿ ಕಲ್ಮಠ ಗುರುಗಳಾದ ನಿರಂಜನಸ್ವಾಮಿ, ಶಿಕ್ಷಕಿ ಗೌರಮ್ಮ, ಶಿಕ್ಷಕ ರವಿ ಮಾತನಾಡಿದರು. ಶ್ರೀ ಮಠದ ಸೇವಾ ಕಾರ್ಯಕರ್ತರಿಗೆ ಗುರುರಕ್ಷೆ ನೀಡಲಾಯಿತು. ಶಿಕಾರಿಪುರದ ಪುಟ್ಟ ಬಾಲಕಿ ಜ್ಞಾನೇಶ್ವರಿ ನೃತ್ಯ ಪ್ರದರ್ಶನ ಮಾಡಿದಳು, ಶ್ರೀಮತಿ ಮಧುರವಿ ನಿರೂಪಿಸಿದರು, ಎನ್.ಚಂದ್ರು ಸ್ವಾಗತಿಸಿ ವಂದಿಸಿದರು.ಚಿತ್ರ: ನ್ಯಾಮತಿ ಚಿನ್ನಿಕಟ್ಟೆಯ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನದಲ್ಲಿ 19ನೇ ವರ್ಷದ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಜಾಗರಣಿ, ಧರ್ಮಜಾಗೃತಿ ಸಮಾರಂಭವನ್ನು ಚೌಕಿ ಮಠದ ಶ್ರೀ ಉದ್ಘಾಟಿಸಿದರು.