ಹುಬ್ಬಳ್ಳಿ:
ಇಲ್ಲಿನ ದೇಶಪಾಂಡೆನಗರದ ಬಿಜೆಪಿ ಹಳೇ ಕಚೇರಿ ಬಳಿಯ ಭವಾನಿ ಬಿಲ್ಡಿಂಗ್ನಲ್ಲಿ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಕಾರದೊಂದಿಗೆ ಆರಂಭಿಸಲಾದ ಸೃಷ್ಟಿ ಪ್ರಯೋಗಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ವಿದ್ಯೆ, ಅನ್ನ ಹಾಗೂ ಚಿಕಿತ್ಸೆ ಸೇವೆಯ ಕ್ಷೇತ್ರಗಳಾಗಿದ್ದವು. ಆದರೆ, ಇಂದಿನ ದಿನಗಳಲ್ಲಿ ಈ ಮೂರೂ ಸೌಲಭ್ಯಗಳು ಹೆಚ್ಚು ಹಣ ಗಳಿಸುವ ಕೇಂದ್ರಗಳಾಗಿ ನಿರ್ಮಾಣವಾಗಿವೆ. ಈ ಸೃಷ್ಟಿ ಪ್ರಯೋಗಾಲಯದ ಆರಂಭ ಹಣ ಗಳಿಕೆಗಾಗಗಲಿ ಅಥವಾ ಪುಣ್ಯ ಪ್ರಾಪ್ತಿಗಾಗಲಿ ಅಲ್ಲ. ಬದಲಾಗಿ, ಸಮಾಜದವರೆಲ್ಲ ಬಂಧುಗಳು ಎಂಬ ಕಲ್ಪನೆಯೊಂದಿಗೆ ಇದನ್ನು ಆರಂಭಿಸಲಾಗಿದೆ ಎಂದರು.ಸಮಾಜದಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಅವರ ಮನೆ ಬಾಗಿಲಿಗೆ ವೈದ್ಯಕಿಯ ಸೇವೆ ಲಭಿಸಲಿ ಎಂಬ ಉದ್ದೇಶ ಸೃಷ್ಟಿ ಪ್ರಯೋಗಾಲಯದ್ದು. ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರೋತ್ಥಾನ ಹಾಗೂ ಸೇವಾ ಭಾರತಿ ದೇಶಾದ್ಯಂತ ಸಮಾಜ ಸೇವೆಯಲ್ಲಿ ತೊಡಗುವ ಜತೆಗೆ ರಾಷ್ಟ್ರ ಸಂಟನೆಯಲ್ಲಿಯೂ ನಿರತವಾಗಿವೆ ಎಂದು ಹೇಳಿದರು.
ಪ್ರಯೋಗಾಲಯ ಉದ್ಘಾಟಿಸಿದ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀ, ವೈದ್ಯಕೀಯ ಕ್ಷೇತ್ರದಲ್ಲಿ ನಿತ್ಯ ಹೊಸ ಸಂಶೋಧನೆಗಳು ನಡೆಯುತ್ತಿವೆ. ಆ ಮೂಲಕ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ಲಭಿಸುತ್ತಿದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ನರರೋಗ ತಜ್ಞ ಡಾ. ಕ್ರಾಂತಿಕಿರಣ ಹಾಗೂ ಸೃಷ್ಟಿ ಪ್ರಯೋಗಾಲಯದ ಮುಖ್ಯಸ್ಥ ಹರೀಶ ಜೋಶಿ, ರಾಷ್ಟ್ರೊತ್ಥಾನ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಮಾತನಾಡಿದರು. ಈ ವೇಳೆ ಹಿರಿಯ ಪೆಥೋಲಾಜಿಸ್ಟ್ ಡಾ. ಆಶಾ ದೇಶಪಾಂಡೆ, ವೀರೇಂದ್ರ ಛೇಡಾ ಸೇರಿದಂತೆ ಹಲವರಿದ್ದರು.