ಈಗಿನ ಕಾಲದಲ್ಲಿ ಮನುಷ್ಯನ ಮನಸ್ಥಿತಿ ಹಾಳಾಗಿ ಹೋಗಿದೆ. ಸಂಪತ್ತಿನ ಮೂಲಕ ಸಂತೋಷ ಹುಡುಕಲು ಹೊರಟಿದ್ದಾನೆ. ಆದರೆ, ಎಲ್ಲ ಕಾಲದಲ್ಲಿಯೂ ಸಂಪತ್ತು ಸಂತೋಷ ಕೊಡುವುದಿಲ್ಲ. ಹಾಗಾಗಿ ಮನುಷ್ಯ ಜೀವನವನ್ನು ಸಂತೋಷದಿಂದ ಕಟ್ಟುವತ್ತ ಸಾಗಬೇಕಾಗಿದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಈಗಿನ ಕಾಲದಲ್ಲಿ ಮನುಷ್ಯನ ಮನಸ್ಥಿತಿ ಹಾಳಾಗಿ ಹೋಗಿದೆ. ಸಂಪತ್ತಿನ ಮೂಲಕ ಸಂತೋಷ ಹುಡುಕಲು ಹೊರಟಿದ್ದಾನೆ. ಆದರೆ, ಎಲ್ಲ ಕಾಲದಲ್ಲಿಯೂ ಸಂಪತ್ತು ಸಂತೋಷ ಕೊಡುವುದಿಲ್ಲ. ಹಾಗಾಗಿ ಮನುಷ್ಯ ಜೀವನವನ್ನು ಸಂತೋಷದಿಂದ ಕಟ್ಟುವತ್ತ ಸಾಗಬೇಕಾಗಿದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಭಾನುವಾರ ನಗರದ ದಡ್ಡೇನವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸೂಪರ್ ಸ್ಪೇಶಾಲಿಟಿ ವಿಭಾಗ ಹಾಗೂ ಬಾಗಲಕೋಟೆ ಹೃದಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ದುಃಖ ಕಳೆದುಕೊಂಡು ಸಂತೋಷ ಪಡೆದುಕೊಳ್ಳಬೇಕು. ಮನುಷ್ಯ ಸಹಜವಾಗಿ ಸಂಪತ್ತಿನಿಂದ ಸಂತೋಷ ಸಿಗುತ್ತದೆ ಎಂದುಕೊಂಡಿದ್ದಾನೆ. ಸಂತೋಷ ಯಾವುದರಲ್ಲಿ ಸಿಗುತ್ತದೆ ಎಂಬುವುದು ತಿಳಿಯಬೇಕಾಗಿದೆ. ಈ ದೇಶದ ದಾರ್ಶನಿಕರು ಋಷಿಗಳು ಇಡೀ ದೇಶದ ತತ್ವಜ್ಞಾನ ಏನಿದೇ ತತ್ವಜ್ಞಾನ ಸಾರ ಕೇವಲ ಎರಡೇ ವಿಷಯ. ಅದು ಎಷ್ಟೇ ದರ್ಶನಗಳಿರಬಹುದು ಎಷ್ಟೇ ಶಾಸ್ತ್ರಗಳಿರಬಹುದು ಅದು ಆದಿಕಾಲದಿಂದ ಆಧುನಿಕಾಲದವರೆಗೆ ಎಷ್ಟೋ ಜನರು ಮಹಾನುಭಾವರಾಗಿದ್ದಾರೆ. ಅವರೆಲ್ಲರ ಅನುಭವ, ದರ್ಶನಗಳ ಸಾರ ಎರಡೇ ಎರಡು ಮಾತು. ಅವರ ಚಿಂತನೆ ಅವರ ಅನ್ವೇಶಣೆ ಇವೆರಡನ್ನೆ ಸಾರಿದ್ದಾರೆ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಈ ಭಾಗದ ಜನರು ಬಹಳಷ್ಟು ನೋವಿನಿಂದ ಬಳವಂತಹ ಸ್ಥಿತಿ ಇದೆ. ಕ್ಲಿಷ್ಟಕರ ವಾತಾವರಣದಲ್ಲಿ ಜನರ ಆರೋಗ್ಯದಲ್ಲಿ ಏರುಪೇರು ಹೆಚ್ಚಾಗಿದೆ. ಜನರ ಸಂಕಷ್ಟ ನೋಡಿ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ದಡ್ಡೆನವರ ಅವರು ಜನರ ಕಲ್ಯಾಣ ಬಯಸಿ ಆಸ್ಪತ್ರೆ ಸಂಶೋಧನಾ ಕೇಂದ್ರ ಆರಂಭಿಸಿದ್ದಾರೆ. ದಡ್ಡೆನವರ ಅವರು ಹಳ್ಳಿಹಳ್ಳಿಯಿಂದ ಈ ಆಸ್ಪತ್ರೆಗೆ ಬರುವ ಜನರಿಗೆ ಒಳ್ಳೆಯ ಚಿಕಿತ್ಸೆ ನೀಡುತ್ತಾರೆ ಎಂಬ ಆತ್ಮ ವಿಶ್ವಾಸಿ ಇದೆ ಎಂದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಎಂ.ಎಸ್. ದಡ್ಡೆನವರ ಅವರು ಬಹುದಿನದ ಕನಸಾಗಿರುವ ಸೂಪರ ಸ್ಪೇಶಾಲಿಟಿ ವಿಭಾಗ ಹಾಗೂ ಬಾಗಲಕೋಟೆ ಹೃದಯ ಕೇಂದ್ರ ಇಂದು ಉದ್ಘಾಟನೆಯಾಗಿದ್ದು, ಆಸ್ಪತ್ರೆಯಲ್ಲಿ 40 ಡಾಕ್ಟರ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು 80 ಬೆಡ್ ಹೊಂದಿತ್ತು. ಈಗ ಮತ್ತೆ 40 ಬೆಡ್‌ಗಳು ಸೇರಿದಂತೆ ಒಟ್ಟು 120 ಬೆಡ್‌ಗಳ ಈ ಆಸ್ಪತ್ರೆ ಹೊಂದಿದೆ. ಸುತ್ತಮುತ್ತಲಿನ ಜನರು ಸಂದರ್ಭ ಬಂದಾಗ ಸದುಪಯೋಗಪಡಿಸಿಖೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಗಲಕೋಟೆಯಲ್ಲಿ ಹಿಂದೆ ಕೈಬೆರಳೆಣಿಕೆಯಲ್ಲಿ ಆಸ್ಪತ್ರೆಗಳಿದ್ದವು. ಇಲ್ಲಿಯ ಜನರು ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪುರ, ಮೀರಜ, ಬೆಳಗಾವಿ ಹಾಗೂ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈಗ ಅದನ್ನು ಮೀರಿಸುವಷ್ಟು ದೊಡ್ಡದಾಗಿ ಬಾಗಲಕೋಟೆ ಬೆಳೆದು ನಿಂತಿದೆ. ನಿಮ್ಮನ್ನು ಆಶ್ರಯಿಸಿ ಬಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂದರು.
ರಾಜ್ಯಸಭಾ ಸದಸ್ಯ ನಾರಯಾಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕ ರಾಜಶೇಖರ ಶಿಲವಂತ, ಎಂ.ಕೆ. ಪಟ್ಟಣಸೇಟ್ಟಿ, ಡಾ.ಎಂ.ಎಸ್. ದಡ್ಡೆನವರ, ಡಾ.ಸುಮಂಗಲಾ ದಡ್ಡೆನವರ, ಡಾ.ವಿಜಯ ದಡ್ಡೆನವರ, ನೇಹಾ ದಡ್ಡೆನ್ನವರ, ಸಂತೋಷ ಚಿಕ್ಕೋಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ರವೀಂದ್ರ ಸೊರಗಾವಿ ಪ್ರಾರ್ಥಿಸಿದರು.ಆಹಾರ-ವಿಹಾರ-ವಿಚಾರ ಸರಿಯಿರಲಿ: ಮನುಷ್ಯ ಯೋಗಿಯಂತೆ, ಸಂತರಂತೆ ಬದುಕಬೇಕಾದರೆ ಸೇವಿಸುವ ಅಹಾರ ಚೆನ್ನಾಗಿರಬೇಕು, ಮಾಡುವ ವ್ಯವಹಾರ ಸರಿ ಇರಬೇಕು ಹಾಗೂ ವಿಚಾರ ಸರಿಯಾಗಿರಬೇಕು. ಸಂತರೆಂದರೆ ಯಾರು ಎದೆಯೊಳಗೆ ಸಂತೋಷದಿಂದಿದ್ದಾರೆ ಅವರೇ ನಿಜವಾದ ಸಂತರು. ಹಿಂದಿನ ಕಾಲದಲ್ಲಿ ವ್ಯವಹಾರಗಳು ಮನುಷ್ಯನ ವಿಸ್ವಾಸದ ಮೇಲೆ ನಡೆಯುತ್ತಿದ್ದವು. ಆದರೆ, ಈಗಿನ ಕಾಲದಲ್ಲಿ ಬಾಂಡ್ ಪೇಪರ್ ಗಳ ಮೂಲಕ ನಡೆಯುತ್ತಿದೆ. ವ್ಯವಹಾರಿಕವಾಗಿ ಮನುಷ್ಯ ಎಷ್ಟು ಕೆಟ್ಟಿದ್ದಾನೆ. ಆರೋಗ್ಯ ಸರಿ ಇದ್ದರೆ ಮನುಷ್ಯನ ವ್ಯವಹಾರ ಸರಿಯಾಗಿರುತ್ತದೆ. ಹಾಗಾಗಿ ಋಷಿ ಹೇಳುವ ಮಾತಿನಂತೆ ಅಹಾರ, ವಿಹಾರ, ವಿಚಾರ ಸರಿ ಇರಬೇಕು ಎಂದು ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.