ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ನಿಮಿತ್ತ ಸಂಭ್ರಮದ ಹಾಲೋಕಳಿ ಶನಿವಾರ ಸಂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ನಿಮಿತ್ತ ಸಂಭ್ರಮದ ಹಾಲೋಕಳಿ ಶನಿವಾರ ಸಂಜೆ ನಡೆಯಿತು.

ಬರೋಬ್ಬರಿ ೫೦ ಅಡಿ ಎತ್ತರದ ಕಂಬ ಏರುವ ಸ್ಪರ್ಧೆ ನಡೆಯಿತು. ಹಾಲುಮತ(ಕುರುಬರು), ಉಪ್ಪಾರ ಸಮುದಾಯದವರಿಂದ ಹಾಲುಗಂಬವೇರುವುದು ಸಂಪ್ರದಾಯ. ಎಲ್ಲ ಸಮಾಜದವರು ಕಂಬವೇರುವ ಜನರಿಗೆ ನೀರು ಎರಚುವ ಮೂಲಕ ಅವರು ಗುರಿ ತಲುಪದಂತೆ ಅಡ್ಡಿಪಡಿಸುತ್ತಾರೆ. ಸುತ್ತಲಿನ ಗ್ರಾಮಗಳ ಸಾವಿರಾರು ಅಭಿಮಾನಿಗಳು ಆಗಮಿಸಿ ಈ ಗ್ರಾಮೀಣ ಕ್ರೀಡೆ ಸವಿದರು.ಬಬಲಾದಿಯ ಶಿವಚಿಷ್ಯ ಅಜ್ಜನವರು, ಜಗದಾಳದ ಬಸಯ್ಯಶ್ರೀ, ಹಿರೇಮಠದ ಶಿವಲಿಂಗಯ್ಯಶ್ರೀ, ಜಾತ್ರಾ ಕಮಿಟಿಯ ಬಾಳಪ್ಪ ದಡ್ಡಿಮನಿ, ಈರಯ್ಯ ಕಾಡದೇವರ, ಲಕ್ಷ್ಮಣ ನಾಯಿಕ, ಭೀಮಪ್ಪ ಪಾಟೀಲ, ಶಿವಪ್ಪ ಚಿಂಚಲಿ, ಸುಭಾಷ ಉಳ್ಳಾಗಡ್ಡಿ, ಶೇಖರ ನೀಲಕಂಠ, ಪಚಿಡಿತ ಬೋಸಲೆ, ಅಡಿವೆಪ್ಪ ಪಾಟೀಲ, ತಿಪ್ಪಣ್ಣ ಕುಳಲಿ, ಅಶೋಕ ಗೊಬ್ಬಾಣಿ, ಮಲ್ಲಪ್ಪ ಅಸ್ಕಿ ಸ್ಭೆರಿ ಹಿರಿಯರು ಉಪಸ್ಥಿತರಿದ್ದರು.