ಅಂಚೆ ಖಾತೆಯಲ್ಲಿದ್ದ ಹಣ ಮಾಯ: ಗ್ರಾಹಕರ ಪ್ರತಿಭಟನೆ

KannadaprabhaNewsNetwork |  
Published : Dec 28, 2025, 02:45 AM IST
ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಅಂಚೆ ಕಛೇರಿಗೆ ಸಿಬ್ಬಂಧಿ ಹಣ ಗುಳುಂ ಮಾಡಿದ್ದಾರೆಂದು ಆರೋಪಿಸಿ ಗ್ರಾಹಕರು ಕಛೇರಿಗೆಮುತ್ತಿಗೆ ಹಾಕಿದರು. | Kannada Prabha

ಸಾರಾಂಶ

ಗೌರಿಬಿದನೂರಿನ ಹಲಗಾನಹಳ್ಳಿ ಅಂಚೆ ಕಚೇರಿಯಲ್ಲಿ 2013ರಿಂದ ಪೋಸ್ಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಮ್ಯ ಗ್ರಾಮದಲ್ಲಿ ಎಲ್ಲರೊಂದಿಗೆ ವಿಶ್ವಾಸದಿಂದ ಇದ್ದರು. ಹಾಗಾಗಿ ಇಷ್ಟು ವರ್ಷಗಳ ಕಾಲ ಈ ಇದೇ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇವರವನ್ನು ನಂಬಿ ಗ್ರಾಮಸ್ಥರು ಹಣ ಪೂಡುಕೆ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಹಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ರಮ್ಯಾಎಂಬುವರು ಖಾತೆದಾರರ ಲಕ್ಷಾಂತರ ರುಪಾಯಿ ಹಣವನ್ನು ಹಣ ಲಪಟಾಯಿಸಿ ಪರಾರಿಯಾಗಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಅಂಚೆಕಚೇರಿಗೆ ಬಿಜ ಜಡಿದು ಪ್ರತಿಭಟಿಸಿದ್ದಾರೆ. ಸುಮಾರು 1200 ಕ್ಕೂ ಅಧಿಕ ಖಾತೆದಾರರನ್ನು ಹೊಂದಿರುವ ಈ ಅಂಚೆ ಕಚೇರಿಯಲ್ಲಿ ಖಾತೆದಾರರು ಎಫ್ ಡಿ, ಆರ್ ಡಿ, ಸೇವಿಂಗ್ಸ್, ಹೀಗೆ ಲಕ್ಷಾಂತರು ರು.ಗಳನ್ನು ಹೂಡಿಕೆ ಮಾಡಿದ್ದಾರೆ. ಹಣದೊಂದಿಗೆ ನಾಪತ್ತೆ:

2013ರಿಂದ ಪೋಸ್ಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಮ್ಯ ಗ್ರಾಮದಲ್ಲಿ ಎಲ್ಲರೊಂದಿಗೆ ವಿಶ್ವಾಸದಿಂದ ಇದ್ದರು. ಹಾಗಾಗಿ ಇಷ್ಟು ವರ್ಷಗಳ ಕಾಲ ಈ ಇದೇ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇವರವನ್ನು ನಂಬಿ ಗ್ರಾಮಸ್ಥರು ಹಣ ಪೂಡುಕೆ ಮಾಡಿದ್ದರು. ಆದರೆ ಈಗ ಆಕೆಯಿಂದಲೇ ಅಂಚೆ ಕಚೇರಿಯಲ್ಲಿದ್ದ ಕೋಟ್ಯತರ ರು.ಗಳೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು..ಎರಡು ಕೋಟಿಗೂ ಅಧಿಕ ಹಣ ನಾಪತ್ತೆ?

ಸುಮಾರು 2 ಕೋಟಿಗೂ ಅಧಿಕ ಹಣ ನಾಪತ್ತೆ ಆಗಿದೆ ಎಂದು ಗ್ರಾಮಸ್ಥರ ಮಾತಾಗಿದೆ, ಇನ್ನು ರೊಚಿಗೆದ್ದ ಗ್ರಾಮಸ್ಥರು ಪೋಸ್ಟ್ ಆಫೀಸ್ ಗೆ ಮುತ್ತಿಗೆ ಹಾಕಿದ್ದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಅಂಚೆ ಕಚೇರಿಯ ಗೌರಿಬಿದನೂರು ಶಾಖೆಯ ಅಧಿಕಾರಿಗಳಾದ ಹನುಮಂತಯ್ಯ ಮತ್ತು, ಮೇಲ್ವಿಚಾರಕರಾದ ಕೃಷ್ಣಪ್ಪ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಅಂಚೆ ಕಚೇರಿಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ ಹೇಳಿಕೆ ನೀಡುತ್ತಿದ್ದಾರೆ ಎಂದು ಗಾಬರಿಗೊಂಡ ಗ್ರಾಮಸ್ಥರು ಅಧಿಕಾರಿಗಳ ಸಮೇತವಾಗಿ ಅಂಚೆ ಕಚೇರಿಯ ಬೀಗ ಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಮ್ಯಾ ಗ್ರಾಮದ ಖಾತೆ ದಾರರಿಗೆ ಹಣ ಕಟ್ಟಿರುವ ಚೀಟಿ, ಮತ್ತು ಪಾಸ್ ಬುಕ್‌ ನೀಡದೆ ವಂಚನೆ ಮಾಡಿದ್ದರೆ, ಮತ್ತೊಂದು ಕಡೆ ಇರುವ ಪಾಸ್ ಬುಕ್ ನಲ್ಲಿ, ಹಣದ ಮೊತ್ತ ನಮೂದಿಸಿಯೇ ಇಲ್ಲ. ಅಕೌಂಟ್‌ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದರೆ 800, 1000,1500, 600, ಹೀಗೆ ಅಕೌಂಟ್ ಬ್ಯಾಲೆನ್ಸ್ ತೋರಿಸುತ್ತಿದೆ ಎಂದು ಗ್ರಾಹಕರು ಆರೋಪಿಸಿದರು.ತನಿಖೆ ನಡೆಸುವ ಭರವಸೆ ಗೌರಿಬಿದನೂರು ಅಂಚೆ ಕಚೇರಿ ವ್ಯವಸ್ಥಾಪಕ ಗುರುಪ್ರಸಾದ್ ಮಾತನಾಡಿ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ನಡೆದಿರು ಘನಟಯ ಬಗ್ಗೆ ಈಗಾಗಲೇ ಮೇಲಧೀಕಾರಿಗಳ ಗಮನಕ್ಕೆ ತರಲಾಗಿದೆ, ಹಣದ ಮೊತ್ತವೆಷ್ಟು ಎಂಬದನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಗ್ರಾಹಕರಿಗಾಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಟ್ರ್ಯಾಕ್ಟರ್‌ನಲ್ಲಿ ಆಗಮಿಸಿದ ಗ್ರಾಮಸ್ಥರುಬಳಿಕ ಹಾಲಗನಹಳ್ಳಿಯಿಂದ ಸುಮಾರು 500 ಮಂದಿ ಗ್ರಾಮಸ್ಥರು ತಮ್ಮ ಟ್ರ್ಯಾಕ್ಟರ್ ಗಳ ಮೂಲಕ ಗೌರಿಬಿದನೂರು ನಗರದಲ್ಲಿ ಇರುವ ಅಂಚೆ ಉಪ ವಿಭಾಗ ಕಚೇರಿಗೆ ಆಗಮಿಸಿ ತಮ್ಮ ಖಾತೆಯಲ್ಲಿರುವ ಹಣ ಪರಿಶೀಲಿಸಿದ್ದಾರೆ. ಆದರೆ ಖಾತೆಯಲ್ಲಿ ಸರಿಯಾದ ಮಾಹಿತಿ ದೊರೆಯದೆ ಅಂಚೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ನಮ್ಮ ಹಣಕ್ಕೆ ಯಾರು ಹೊಣೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಪುಟ್ಟಸ್ವಾಮಿಗೌಡ ಭರವಸೆ

ವಿಷಯ ತಿಳಿದು ಅಂಚೆ ಕಚೇರಿಗೆ ಆಗಮಿಸಿದ ಶಾಸಕ ಪುಟ್ಟಸ್ವಾಮಿಗೌಡ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ತಾವು ಪೊಲೀಸ್ ಮತ್ತು ಅಂಚೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ದಾಖಲೆಗಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ ಎಂದರು.

ಚಿಕ್ಕಬಳ್ಳಾಪುರ ಪ್ರಧಾನ ಅಂಚೆ ಕಚೇರಿಯ ಇನ್ಸ್‌ಪೆಕ್ಟರ್‌ ಶಶಿಕುಮಾರ್ ಸಿರಿಕೆರೆ ಮತ್ತು ತಂಡ ಗೌರಿಬಿದನೂರು ಶಾಖೆಗೆ ಭೇಟಿ ನೀಡಿ ಗ್ರಾಮಸ್ಥರ ಅಳಲನ್ನು ಆಲಿಸಿ ಅವರ ಬಳಿ ಇರುವ ದಾಖಲೆಗಳ ಪರಿಶೀಲಿಸಿತು. ನಾಳೆಯಿಂದ ಗ್ರಾಮದ ಪ್ರತಿ ಮನೆಮನೆಗೂ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ