ಮೂಡುಬಿದಿರೆ: ಲಯನ್ಸ್ ಕ್ಲಬ್ ಸೇವೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್‍ಯ ನಡೆಸುವುದಾಗಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಗದೀಶ್ ಚಂದ್ರ ಡಿ.ಕೆ. ಹೇಳಿದರು.
ಮುಖ್ಯ ಅತಿಥಿ ಮಂಗಳೂರು ಐಎಂಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಮಾತನಾಡಿ, ಜೀವನದ ಯಶಸ್ಸಿಗೆ ಯೋಗದೊಂದಿಗೆ ಯೋಗ್ಯತೆ ಅಗತ್ಯ. ನುಡಿದಂತೆ ನಡೆದಾಗ ನಮ್ಮ ವ್ಯಕ್ತಿತ್ವಕ್ಕೆ ಮಾನ್ಯತೆ ಸಿಗುತ್ತದೆ ಎಂದರು.ಲಯನ್ಸ್ ವಲಯ ಅಧ್ಯಕ್ಷ ಕುಡ್ಲಿ ಅರವಿಂದ ಶೆಣೈ ಶುಭ ಹಾರೈಸಿದರು.ಲಯನ್ಸ್ ವಲಯ ಅಧ್ಯಕ್ಷ ಮೆಲ್ವಿನ್ ಸಲ್ದಾನ, ಜೊಸ್ಸಿ ಮಿನೇಜಸ್, ಪ್ರಾಂತೀಯ ಸಮ್ಮೇಳನ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ಕಾರ್‍ಯದರ್ಶಿ ಹೆರಾಲ್ಡ್ ತಾವೋ, ಉಪಾಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಖಜಾಂಚಿ ಹರೀಶ್ ಪೂಜಾರಿ, ಸಂಚಾಲಕ ಓಸ್ವಾಲ್ಟ್, ಲಯನ್ಸ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪ್ರತಿಭಾ ಹೆಬ್ಬಾರ್, ಸುಧೀರ್ ಭಂಡಾರಿ, ಮುರಳಿ ಬಲಿಪ, ಜಾನೆಟ್ ಡಿ., ಅರುಣ್ ಕಾರ್ಡೋಜ ಹಾಗೂ ಲಿಯೋ ಕ್ಲಬ್ ಅಧ್ಯಕ್ಷರು, ವೇಣೂರು ಲಯನ್ಸ್ ಕಾರ್‍ಯದರ್ಶಿ ಜಯರಾಮ್ ಹೆಗ್ಡೆ, ಕೋಶಾಧಿಕಾರಿ ಸತೀಶ್ ಚಿಗುರು ಉಪಸ್ಥಿತರಿದ್ದರು.ಕೃಷಿಕ ವಿ.ಎಸ್. ಜಯರಾಜ್ ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಲಯನ್ಸ್ ಸೇವಾ ಕಾರ್‍ಯಗಳನ್ನು ನಡೆಸಿಕೊಡಲಾಯಿತು. ಮಂಗಳೂರಿನ ಸೌಜನ್ಯ ಹೆಗ್ಡೆ ಕಾರ್‍ಯಕ್ರಮ ನಿರೂಪಿಸಿದರು.