ಮಕ್ಕಳ ಸಾಮರ್ಥ್ಯ ಪರೀಕ್ಷಿಸಲು ಶಾಲೆಗಳು ವೇದಿಕೆ: ಪ್ರೊ.ಬಸವರಾಜ ಲಕ್ಕನ್ನವರ

KannadaprabhaNewsNetwork |  
Published : Feb 12, 2026, 03:30 AM IST
ಲೋಕಾಪುರ ಸಿರಿಗನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ‍್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ವಿವೇಕೋತ್ಸವ ೨೦೨೬ ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಶಾಲೆಗಳು ಕೇವಲ ಪಾಠ ಹೇಳುವ ಸ್ಥಳವಲ್ಲ, ಮಕ್ಕಳ ಸಾಮರ್ಥ್ಯ ಅರಿಯಲು ಮತ್ತು ಬೆಳೆಸಿಕೊಳ್ಳಲು ಒಂದು ವೇದಿಕೆಯಾಗಿದೆ ಎಂದು ಕರ್ನಾಟಕ ಮಹಿಳಾ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಸವರಾಜ ಲಕ್ಕನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಶಾಲೆಗಳು ಕೇವಲ ಪಾಠ ಹೇಳುವ ಸ್ಥಳವಲ್ಲ, ಮಕ್ಕಳ ಸಾಮರ್ಥ್ಯ ಅರಿಯಲು ಮತ್ತು ಬೆಳೆಸಿಕೊಳ್ಳಲು ಒಂದು ವೇದಿಕೆಯಾಗಿದೆ ಎಂದು ಕರ್ನಾಟಕ ಮಹಿಳಾ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಸವರಾಜ ಲಕ್ಕನ್ನವರ ಹೇಳಿದರು.

ಪಟ್ಟಣದ ಸಿರಿಗನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ವಿವೇಕೋತ್ಸವ ೨೦೨೬ ರ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾ–ಸಾಹಿತ್ಯ ಪ್ರತಿಭೆಗೆ ಹೆಚ್ಚಿನ ವೇದಿಕೆ ಗಳಿಸುವ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ಶಾಲೆ ಪಡೆದ ಯಶಸ್ಸು ಯಾವುದೇ ವ್ಯಕ್ತಿಯದೂ ಅಲ್ಲ, ಇದು ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಸಂಯುಕ್ತ ಪರಿಶ್ರಮದ ಫಲ ಎಂದರು.

ಸಾನಿಧ್ಯ ವಹಿಸಿದ್ದ ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ನೃತ್ಯ, ಭಾವಗೀತೆ, ನಾಟಕ, ವಾದಪ್ರತಿವಾದ, ವಚನ ವಾಚನ, ದೇಶಭಕ್ತಿ ಗೀತೆ ಮುಂತಾದ ಕಲಾ ಪ್ರದರ್ಶನಗಳು ಮನ ಸೆಳೆದವು. ಮಕ್ಕಳಲ್ಲಿ ಕಂಡು ಬಂದ ಉತ್ಸಾಹ, ಶಿಸ್ತು ಮತ್ತು ಆತ್ಮವಿಶ್ವಾಸಕ್ಕೆ ಎಲ್ಲಾ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕಲ್ಲಪ್ಪ ಓಬನಗೋಳ, ಆನಂದ ಶಿರಬೂರ, ಸಂಸ್ಥೆಯ ಉಪಾಧ್ಯಕ್ಷ ಹೊಳಬಸಪ್ಪ ಹೂಗಾರ, ಸಂಸ್ಥೆಯ ಅಧ್ಯಕ್ಷ ಸಿದ್ದು ಹೂಗಾರ, ನರ‍್ದೇಶಕ ಕೃಷ್ಣ ಹೂಗಾರ, ಶಾಲೆಯ ಮುಖ್ಯ ಗುರುಮಾತೆ ಮಂಜುಳಾ ದಂಡಗಿ, ಕನ್ನಡ ಮಾಧ್ಯಮ ಕೋರ‍್ಡಿನೇಟರ್ ರವಿಕುಮಾರ್ ಸನದಿ, ಆಂಗ್ಲ ಮಾಧ್ಯಮ ಕೋ ರ‍್ಡಿನೇಟರ್ ಕೃಷ್ಣ ದಳವಾಯಿ, ಗೀತಾ ದಳವಾಯಿ, ರುಕ್ಮಿಣಿ ಹೂಗಾರ, ರುಕ್ಮಿಣಿ ಕರಡಿಗುಡ್ದ, ರಾಜೇಶ್ವರಿ ಹೆಗಡೆ, ಗೂಳಪ್ಪ ಹುಣಸಿಕಟ್ಟಿ, ಸಚಿನ ಜಂಬಗಿ, ಆರತಿ ನಾವಿ, ಸವಿತಾ ಕಂಬಳಿ, ಶ್ವೇತಾ ಮುರಗೋಡ, ಕೃತಿಕಾ ಪಾಟೀಲ, ಜಿಲ್ಲಾ ಕಾನಿಪ ಕಾರ್ಯದರ್ಶಿ ಜಗದೀಶ ಗಾಣಿಗೇರ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ್ ಬೈರಕದಾರ, ಸಿದ್ದಣ್ಣ ಸತ್ತಿಗೇರಿ, ಸಂತೋಷ ದೇಶಪಾಂಡೆ, ರಮೇಶ ನಿಡೋಣಿ, ಪ್ರವೀಣ, ಗಂಗನ್ನವರ, ಕೃಷ್ಣಾ ಹೂಗಾರ, ಪಾಲಕರು, ಶಿಕ್ಷಕರು, ಮಕ್ಕಳು ಇದ್ದರು

ಸಾಧಕರು, ಸ್ಪರ್ಧೆ ವಿಜೇತರಿಗೆ ಸನ್ಮಾನ: ಇದೇ ವೇಳೆ ಸಮಾಜ ಸೇವೆ, ಶಿಕ್ಷಣ ಕ್ಷೇತ್ರ ಸಾಧನೆ ಗೈದ ಶಿಕ್ಷಕ ಪ್ರಕಾಶ ಬೆಳಗಲಿ ಅವರಿಗೆ ವಿವೇಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನಿಸಲಾಯಿತು.

ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಗಣಿತ ಪ್ರತಿಭಾನ್ವೇಷಣಾ ಪರೀಕ್ಷೆ, ಹಾಗೂ ಶಾಲೆಯಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಮೆಡಲ್ ಹಾಕಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?
ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ