ಭಟ್ಕಳ: ಜುಲೈ ೧೦ರಿಂದ ಆಗಸ್ಟ್ ೨೦ರವರೆಗೆ ಕುಮಟಾದ ಕೋನಳ್ಳಿಯಲ್ಲಿ ನಡೆಯುವ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದ ಪೂರ್ವಭಾವಿ ಸಭೆಯು ನಾಮಧಾರಿ ಗುರುಮಠದ ದೇವಸ್ಥಾನದಲ್ಲಿ ನಡೆಯಿತು.
ಜು.೨೭ರಂದು ಭಟ್ಕಳ ಭಾಗದವರಿಂದ ಗುರುಗಳ ಸೇವೆ ಮಾಡಲು ದಿನಾಂಕ ನಿಶ್ಚಯಿಸಿದ್ದಾರೆ. ಎಲ್ಲ ಕೂಟಗಳಿಂದ ಕನಿಷ್ಠ ಒಂದು ಟೆಂಪೋ ಹಾಗೂ ಪ್ರತಿ ಕೂಟದಿಂದ ಹೊರೆ ಕಾಣಿಕೆ ಸಂಗ್ರಹಿಸುವಂತೆ ನಿರ್ಣಯಿಸಲಾಗಿದೆ ಎಂದರು.
ನಾಮಧಾರಿ ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ, ಗುರುಮಠದ ಕಾರ್ಯದರ್ಶಿ ಡಿ.ಎಲ್.ನಾಯ್ಕ, ಸಮಾಜದ ಹಿರಿಯ ಡಿ.ಬಿ. ನಾಯ್ಕ, ನ್ಯಾಯವಾದಿ ಮಾಸ್ತಿ ನಾಯ್ಕ, ವೆಂಕಟರಮಣ ನಾಯ್ಕ, ಗುರುಮಠ ದೇವಸ್ಥಾನದ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಮಾತನಾಡಿದರು.ದೇವಸ್ಥಾನದ ಕಾರ್ಯದರ್ಶಿ ಡಿ.ಎಲ್.ನಾಯ್ಕ, ಗೋವಿಂದ ನಾಯ್ಕ, ಶಾಂತಾರಾಮ ನಾಯ್ಕ ಜಾಲಿ, ವಿಠ್ಠಲ ನಾಯ್ಕ, ಎಸ್.ಎಂ. ನಾಯ್ಕ, ಸತೀಶಕುಮಾರ ನಾಯ್ಕ, ಮಹಾಬಲೇಶ್ವರ ನಾಯ್ಕ, ಶಿವರಾಮ ನಾಯ್ಕ ಉಪಸ್ಥಿತರಿದ್ದರು.ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿದರು.