ಸಕಲೇಶಪುರ: ತಾಲೂಕಿನ ಕೊಲ್ಲಹಳ್ಳಿಯ ಎಚ್.ಎಸ್ ಶಿವಾನಂದ್( ಗೌತಮ್ ) ಅವರಿಗೆ ಸೇರಿದ ಮಠಸಾಗರ ಗ್ರಾಮದ ಕಾಫಿ ತೋಟದಲ್ಲಿ ಬೆಳದಿದ್ದ ಇಪ್ಪತ್ತಕ್ಕೂ ಹೆಚ್ಚು ಹೆಚ್ಚು ಗಂಧದ ಮರಗಳನ್ನು ಕಳ್ಳರು ಬೇರು ಸಮೇತ ಕದ್ದೊಯ್ದಿದ್ದಾರೆ. ಭಾನುವಾರ ಬೆಳಿಗ್ಗೆ ಕೆಲಸಗಾರರು ತೋಟಕ್ಕೆ ಆಗಮಿಸಿದ ವೇಳೆ ಗಂಧಸ ಮರ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತೋಟದ ಮಾಲೀಕರು ಅರಣ್ಯ ಇಲಾಖೆಗೆ ದೂರವಾಣಿಯ ಮೂಲಕ ತಿಳಿಸಿದರೂ ಈವರೆಗೂ ಪ್ರಕರಣದ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ತೋಟದ ಮಾಲೀಕರು ಆರೋಪಿಸಿದ್ದಾರೆ.