ವಿಷ್ಣುತೀರ್ಥದಲ್ಲಿ ಈಜು ಸ್ಪರ್ಧೆಯಲ್ಲಿ ೮೦ಕ್ಕೂ ಹೆಚ್ಚು ಸ್ಪರ್ಧಾಳು ಭಾಗಿ

KannadaprabhaNewsNetwork |  
Published : Jul 21, 2025, 12:00 AM IST
ಫೋಟೋ : ೧೩ಕೆಎಂಟಿ೨_ಜೆಯುಎಲ್_ಕೆಪಿ೨ : ವಿಷ್ಣುತೀರ್ಥದಲ್ಲಿ ಲಯನ್ಸ್ ಕ್ಲಬ್ ನಿಂದ ಏರ್ಪಡಿಸಿದ್ದ ಈಜು ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಡಾ.ನಾಗರಾಜ ಭಟ್, ಎಂ.ಎಂ.ಹೆಗಡೆ, ಡಾ. ಪ್ರಕಾಶ ಪಂಡಿತ, ಪ್ರೊ.ಎಸ್.ಎಸ್.ಹೆಗಡೆ, ಎಂ.ಎನ್.ಹೆಗಡೆ ಇತರರು ಇದ್ದರು.  | Kannada Prabha

ಸಾರಾಂಶ

ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಚಿತ್ರಗಿಯ ವಿಷ್ಣುತೀರ್ಥದಲ್ಲಿ ತಾಲೂಕು ಮಟ್ಟದ ಮುಕ್ತ ಈಜು ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಕುಮಟಾ: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಚಿತ್ರಗಿಯ ವಿಷ್ಣುತೀರ್ಥದಲ್ಲಿ ತಾಲೂಕು ಮಟ್ಟದ ಮುಕ್ತ ಈಜು ಸ್ಪರ್ಧೆ ಹಮ್ಮಿಕೊಳ್ಳಲಾಯಿತು.ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಒಟ್ಟು ೧೩ ವಿಭಾಗದಲ್ಲಿ ಈಜು ಸ್ಪರ್ಧೆಗಳು ನಡೆದವು. ೮೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದರು. ದೈಹಿಕ ಶಿಕ್ಷಣ ತರಬೇತುದಾರ ಜಿ.ಡಿ. ಭಟ್ ಸ್ಪರ್ಧೆ ನಡೆಸಿಕೊಟ್ಟರು. ಲಯನ್ಸ್‌ ಕ್ಲಬ್ ನಿಯೋಜಿತ ಅಧ್ಯಕ್ಷ ಡಾ. ನಾಗರಾಜ ಭಟ್, ಈಜುವುದರಿಂದ ಉಂಟಾಗುವ ಆರೋಗ್ಯಕರ ಪರಿಣಾಮಗಳನ್ನು ವಿವರಿಸಿದರು. ನಿಯೋಜಿತ ಕಾರ್ಯದರ್ಶಿ ಗಣೇಶ ನಾಯಕ, ಖಜಾಂಚಿ ಎಂ.ಎಂ. ಹೆಗಡೆ ಉಪಸ್ಥಿತರಿದ್ದರು. ಎಂ.ಎನ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ರಘುನಾಥ ದಿವಾಕರ, ಎಂ.ಕೆ. ಶಾನಭಾಗ, ಜಿ.ಎಸ್. ಭಟ್, ಉಪಾಧ್ಯಾಯ, ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು. ದಾಮೋದರ ಭಟ್, ಜಯಲಕ್ಷ್ಮಿ ಭಟ್, ಡಾ. ಪ್ರಕಾಶ ಪಂಡಿತ, ಡಾ. ಸತೀಶ್ ಪ್ರಭು, ಡಾ.ಜಿ.ಜಿ. ಹೆಗಡೆ ಪ್ರಾಯೋಜಕತ್ವ ವಹಿಸಿದ್ದರು.

ವಿಜೇತರ ಯಾದಿ:

ಕಿರಿಯ ಪ್ರಾಥಮಿಕ ಹುಡುಗಿಯರ ವಿಭಾಗದಲ್ಲಿ ಲಹರಿ ವಿನಾಯಕ ಪಟಗಾರ ಪ್ರಥಮ, ಮಾಹಿ ಮಾಧವ ಕಾಮತ್ ದ್ವಿತೀಯ, ಶ್ರಾವಣಿ ಪ್ರವೀಣ ನಾಯಕ ತೃತೀಯ ಸ್ಥಾನ ಪಡೆದರು. ಇದೇ ರೀತಿಯಾಗಿ ಹುಡುಗರ ವಿಭಾಗದಲ್ಲಿ ವ್ಯಾಸ ಅತುಲ ಕಾಮತ್, ಅಂತೋನಿ ಅಲ್ವಾರಿಸ್, ಶೌರ್ಯ ಎಸ್., ಅನುಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

ಹಿರಿಯ ಪ್ರಾಥಮಿಕ ಹುಡುಗಿಯರ ವಿಭಾಗದಲ್ಲಿ ಸ್ವಾತಿ ವಿನಾಯಕ ಶಾನಭಾಗ, ತನ್ವಿ ಸುರೇಶ್ ಪಟಗಾರ, ಸಮೃದ್ಧಿ ಪೂಜಾರಿ, ಹುಡುಗರಲ್ಲಿ ಧೀರಜ ಸತೀಶ ಗೌಡ, ನಮನ ಉದಯ ಹರಿಕಾಂತ, ಚಿನ್ಮಯ ಗೌಡ, ಪ್ರೌಢಶಾಲಾ ಹುಡುಗಿಯರ ವಿಭಾಗದಲ್ಲಿ ಸಮನ್ವಿ ಪೂಜಾರಿ, ದಿಶಾ ಮಹಾಲೆ, ದೃಷ್ಟಿ ಬಾಳಗಿ, ಹುಡುಗರಲ್ಲಿ ವಿಷ್ಣು ಅತುಲ ಕಾಮತ ಮತ್ತು ಅರ್ಜುನ ಶಾನಭಾಗ, ಅನ್ಮೋಲ ಸುಭಾಷ ನಾಯಕ, ವಿನೀತ ಶಾಂತನು ಮಂಕೀಕರ, ಕಾಲೇಜು ಹುಡುಗಿಯರ ವಿಭಾಗದಲ್ಲಿ ಅಕ್ಷತಾ ದೇಶಭಂಡಾರಿ, ಶ್ರಾವ್ಯಾ ನಾಯ್ಕ, ಶ್ರದ್ಧಾ ವೆರ್ಣೇಕರ್, ಹುಡುಗರಲ್ಲಿ ಸ್ಪಯಂ ರಾಜೇಶ ಪೈ, ಪ್ರಭವ ಶಾನಭಾಗ, ಆರ್ಯನ್ ನಾಯ್ಕ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

ಮುಕ್ತವಿಭಾಗದ ೪೦ ವಯೋಮಿತಿಯೊಳಗಿನ ಮಹಿಳೆಯರಲ್ಲಿ ಪಲ್ಲವಿ ಪ್ರಭು, ಪ್ರೀತಿ ದೇಶಭಂಡಾರಿ, ನೌಕ್ಯ ರಾಯ್ಕರ್, ಪುರುಷರಲ್ಲಿ ಕೃಷ್ಣ ಧಾರೇಶ್ವರ, ಪ್ರಥ್ವಿರಾಜ್ ನಾಯ್ಕ, ರಾಹುಲ ರಾಮಚಂದ್ರ ಶಾನಭಾಗ, ೪೦ ವಯಸ್ಸಿನ ಮೇಲ್ಪಟ್ಟ ಮಹಿಳೆಯರಲ್ಲಿ ಸುಜಾತಾ, ಸುಜಾತಾ ನಾಯ್ಕ, ಲತಾ ವೆರ್ಣೇಕರ್, ಪುರುಷರಲ್ಲಿ ವಿಘ್ನೇಶ್ವರ ಭಟ್ಟ, ಗಣೇಶ ಬಾಳಗಿ, ಧರ್ಮೇಂದ್ರ ನಾಯ್ಕ, ಎಲ್‌ಕೆಜಿ-ಯುಕೆಜಿ ವಿಭಾಗದಲ್ಲಿ ಆಧ್ಯಾ ಮಾಧವ ಪೈ, ಅಲೇನಾ ಅಲ್ವಾರಿಸ್ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು. ವಿಜೇತರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ