ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ನಗರದಲ್ಲಿ ಭಾನುವಾರ ಜೋಗಿಮಕ್ಕಿಯ ಶ್ರೀ ಕೊಡಗತ್ಯಮ್ಮ ದೇವಸ್ಥಾನದ ಆವರಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಮತ್ತು ಯುವ ಹೆಬ್ಬಾರ ಬಳಗದ ತಾಲೂಕು ಘಟಕದ ಆಶ್ರಯದಲ್ಲಿ ನಡೆದ 2024-25 ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಘಟನೆ 2024ರ ಅ.1ರಂದು ವಿಶ್ವಸ್ಥ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿದೆ. ನಮ್ಮ ಸಮಾಜದ ಕೇಂದ್ರದಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಘಟಕಗಳ ಬ್ಯಾಂಕ್ ಖಾತೆ ತೆರೆಯಬೇಕಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರು ಟ್ರಸ್ಟ್‌ನ ಸದಸ್ಯರಾಗಬೇಕಾಗಿದೆ. ಈಗಾಗಲೇ 1 ಸಾವಿರಕ್ಕೂ ಹೆಚ್ಚು ಸದಸ್ಯರು ನೋಂದಾಯಿಸಿದ್ದಾರೆ. ಸಮಾಜದ ಎಲ್ಲರೂ ಸಂಘಟಿತರಾಗಿ ಶೃಂಗೇರಿಯಲ್ಲಿ ನಡೆಯುವ ಗುರುದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸೋಣ ಎಂದರು.ಮುಖ್ಯ ಅತಿಥಿಗಳಾಗಿದ್ದ ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಸ್. ಶಿವಶಂಕರ್ ಮಾತನಾಡಿ, ಮುಂದೆ ಶಾರದ ಸಹಕಾರ ಸಂಘದ ಚುನಾವಣೆ ನಡೆಯಲಿದೆ. ನರಸಿಂಹರಾಜಪುರ ಘಟಕಕ್ಕೆ ಮಹಿಳಾ ಸ್ಥಾನ ಹಾಗೂ ಸಾಮಾನ್ಯ ಸ್ಥಾನ ಇದೆ. ನಮ್ಮ ಸಂಘದ 500 ರು. ಷೇರುದಾರರು ಪೂರ್ಣ ಪ್ರಮಾಣದ ಷೇರು ಹಾಕಬೇಕು.ಹೆಬ್ಬಾರ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರೂ ನಮ್ಮ ಶಾರದಾ ಸಹಕಾರ ಸಂಘದಲ್ಲಿ ವ್ಯವಹಾರ ಮಾಡಬೇಕು. ಸಂಘದ ಮಹಾ ಸಭೆಗೆ ಎಲ್ಲಾ ಸದಸ್ಯರು ಆಗಮಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ತಾಲೂಕು ಅಧ್ಯಕ್ಷ ಯಡಗೆರೆ ಪ್ರಶಾಂತ್ ವಹಿಸಿದ್ದರು. ಸಭೆಯಲ್ಲಿ ಮ್ಯಾಮ್ಕೋಸ್ ಅಧ್ಯಕ್ಷ ಹುಲ್ಕುಳಿ ಮಹೇಶ್, ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ್, ಕೊಪ್ಪ ಯಸ್ಕಾನ್ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ, ತಾಲೂಕು ಘಟಕದ ಕಾರ್ಯದರ್ಶಿ ಕೆ.ವಿ.ಪ್ರಭಾಕರ,ಯುವ ಹೆಬ್ಬಾರ ಬಳಗದ ಅಧ್ಯಕ್ಷ ವೈ.ಎಂ.ಮಧು ಇದ್ದರು.
ಫೋಟೋ: ನರಸಿಂಹರಾಜಪುರ ತಾಲೂಕಿನ ಜೋಗಿಮಕ್ಕಿಯಲ್ಲಿ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಸರ್ವ ಸದಸ್ಯರ ಸಭೆಯಲ್ಲಿ ಸಾಧಕರಾದ ಸೇತುವೆ ಮನೆ ಸುಬ್ರಮಣ್ಯರನ್ನು ಸನ್ಮಾನಿಸಲಾಯಿತು.