ತಂಪೆರೆದ ಮುಂಜಾನೆ ಮಳೆ: ರೈತರ ಮುಖದಲ್ಲಿ ಜೀವ ಕಳೆ

KannadaprabhaNewsNetwork |  
Published : Jun 19, 2026, 01:30 AM IST
ಧಾರಾಕಾರ ಮಳೆ ನದಿಯಂತೆ ಗ್ರಾಮದ ಬಳಿ ಹರಿಯುತ್ತಿರುವುದರಿಂದ ನಾಲ್ಕು ಮನೆಗಳಿಗೆ ಜಲ ದಿಗ್ಬಂಧನ ಜಲ ಭೀತಿಯಲ್ಲಿ ನಿವಾಸಿಗಳು. | Kannada Prabha

ಸಾರಾಂಶ

ಬಿಸಿಲ ಬೇಗೆಯಿಂದ ಬಳಲಿದ್ದ ಹನೂರು ತಾಲೂಕಿನಲ್ಲಿ ಗುರುವಾರ ಬೆಳ್ಳಂಬೆಳ್ಗೆಯೇ ವರ್ಷಧಾರೆಯಾಗಿದ್ದು, ತಂಪೆರೆದಿದೆ. ಇದೇ ವೇಳೆ ಪೊನ್ನಾಚಿ ಗ್ರಾಮದ ಹಲವರ ಮನೆಯ ಸುತ್ತ ಭಾರಿ ಪ್ರಮಾಣದ ನೀರು ಹರಿದಿದ್ದು, ಜಲದಿಗ್ಭಂಧನದಂತಾಗಿದೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುರಿದ ಭಾರಿ ಮಳೆ, ತುಂಬಿದ ಹಳ್ಳಕೊಳ್ಳ

ಪೊನ್ನಾಚಿ ಗ್ರಾಮದಲ್ಲಿ 4-5 ಮನೆಗಳ ಸುತ್ತ ಭಾರಿ ನೀರು, ಜಲದಿಗ್ಬಂಧನ

ಕನ್ನಡಪ್ರಭ ವಾರ್ತೆ ಹನೂರು

ಬಿಸಿಲ ಬೇಗೆಯಿಂದ ಬಳಲಿದ್ದ ಹನೂರು ತಾಲೂಕಿನಲ್ಲಿ ಗುರುವಾರ ಬೆಳ್ಳಂಬೆಳ್ಗೆಯೇ ವರ್ಷಧಾರೆಯಾಗಿದ್ದು, ತಂಪೆರೆದಿದೆ. ಇದೇ ವೇಳೆ ಪೊನ್ನಾಚಿ ಗ್ರಾಮದ ಹಲವರ ಮನೆಯ ಸುತ್ತ ಭಾರಿ ಪ್ರಮಾಣದ ನೀರು ಹರಿದಿದ್ದು, ಜಲದಿಗ್ಭಂಧನದಂತಾಗಿದೆ.

ಪೊನ್ನಾಚಿ ಗ್ರಾಮಮದ ದೊಡ್ಡ ಬೆಟ್ಟ ಹಾಗೂ ತೋಟದ ಮನೆಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನದಿಯಂತೆ ಹರಿದ ಪರಿಣಾಮ ಶಿವನಮ್ಮ, ವಸಂತಮ್ಮ, ಭಾಗ್ಯಮ್ಮ ಹಾಗೂ ಜಯಕ್ಕ ಎಂಬುವರ ನಾಲ್ಕು ಮನೆಗಳು ಜಲದಿಗ್ಭಂದನಕ್ಕೆ ಸಿಲುಕಿದಂತಾಗಿತು. ಪರಿಣಾಮ ನಿವಾಸಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕಾಲ ಕಳೆಯುವಂತಾಗಿತ್ತು.

ಗ್ರಾಪಂ ನಿರ್ಲಕ್ಷ್ಯಕ್ಕೆ ಜನರ ಪರದಾಟ:

ಪೊನ್ನಾಚಿ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ ಮಳೆ ಬಂದರೆ ಹೀನಾಯ ಸ್ಥಿತಿ ಆಗುತ್ತಿದೆ. ಆದರೆ ಈ ಸಮಸ್ಯೆ ಶಮನಕ್ಕೆ ಚರಂಡಿ ರೀತಿ ನಿರ್ಮಿಸಿ, ಸ್ಲ್ಯಾಬ್‌ ಸೇತುವೆ ಮಾಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಅವರ ನಿರ್ಲಕ್ಷ್ಯಕ್ಕೆ ಜನರು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಬೆಳ್ಳಂಬೆಳಗ್ಗೆ ಮಳೆ ಜನಜೀವನ ಅಸ್ತವ್ಯಸ್ತ:

ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಹನೂರು ತಾಲೂಕಿನಲ್ಲಿ ಭಾರಿ ಸಂಚಾರ ವ್ಯತ್ಯಯವಾಗಿದೆ. ಶಾಲೆಗೆ ಹೋಗಲು ಮಕ್ಕಳು ಪರದಾಡುವಂತಾಗಿದ್ದು, ದಿನನಿತ್ಯದ ಜೀವನ ನಡೆಸಲು ಜನರಿಗೆ ತೊಂದರೆಯಾಯಿತು. ಕೆಲಸಕ್ಕೆ ತೆರಳುವವರು ಮಳೆಯಿಂದಾಗಿ ಪಡಿಪಾಟಲು ಅನುಭವಿಸಿದರು.

---

ರೈತರ ಮೊಗದಲ್ಲಿ ಮಂದಹಾಸ

ಮಳೆಯಿಲ್ಲದೇ ಆಕಾಶದತ್ತ ಮುಖ ಮಾಡಿದ್ದ ರೈತರಿಗೆ ಗುರುವಾರದ ಮಳೆ ಶುಭಘಳಿಗೆಯನ್ನು ತಂದೊಡ್ಡಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಸುರಿದ ಉತ್ತಮ ಮಳೆಯಿಂದಾಗಿ ಕೆರೆ ಕಾಳುವೆಗಳೆಲ್ಲವೂ ತುಂಬಿದ್ದು, ಜಮೀನುಗಳಲ್ಲಿ ನೀರು ನಿಂತಿವೆ. ಪರಿಣಾಮ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸಿದ್ಧತೆ ಕೈಗೊಂಡಿದ್ದಾರೆ.

---18ಸಿಎಚ್ಎನ್‌11

ಪೊನ್ನಾಚಿ ಗ್ರಾಮದ ಮಧ್ಯಭಾಗದಲ್ಲಿ ಜಲದಿಗ್ಬಂಧನ ಪರಿಸ್ಥಿತಿ ನಿರ್ಮಾಣ.18ಸಿಎಚ್ಎನ್‌12

ತುಂಬಿ ತುಳುಕುತ್ತಿರುವ ಹಳ್ಳಕೊಳ್ಳಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಯ್ಸಳರ ಪರಂಪರೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ ಲತಾಕುಮಾರಿ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ಬೇಡ: ಜಿಲ್ಲಾಧಿಕಾರಿ ಲತಾಕುಮಾರಿ