ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಆರ್.ಬಿ.ಜಿ ಪ್ರೌಢಶಾಲೆಯಲ್ಲಿ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಎನ್.ಸಿ)ವಿದ್ಯಾರ್ಥಿಗಳಿಗೆ ನನ್ನ ಸಂಕಲ್ಪ ನಾನು ಪಾಸಾಗುವೆ ಪ್ರೇರಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಕ್ಕಳಿಗೆ ಮಾರ್ಗದರ್ಶನ ಮತ್ತು ಸಮಾಲೋಚನೆ ಮುಖ್ಯ ಮತ್ತು ಮಕ್ಕಳಲ್ಲಿ ಉತ್ತಮ ಗುಣಗಳನ್ನು ತರುವಲ್ಲಿ ಶಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ನಡವಳಿಕೆಯನ್ನು ಅಪೇಕ್ಷಿಸಲಾಗುತ್ತದೆ. ಆದರೆ ಕೆಲವೊಮ್ಮೆ ಯುವ ಮನಸುಗಳಿಗೆ ತಮ್ಮ ವ್ಯಕ್ತಿತ್ವವನ್ನು ಮೆರಗುಗೊಳಿಸಲು ಮಾರ್ಗದರ್ಶನ ಇಂತಹ ಪ್ರೇರಣಾ ಶಿಬಿರಗಳು ಅವಶ್ಯಕವಾಗುತ್ತವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆ ಅಥವಾ ಮನೆಯಿಂದ ಅಗತ್ಯವಿರುವ ಎಲ್ಲವನ್ನೂ ಪಡೆಯುವುದಿಲ್ಲ. ಶಾಲಾ ಸೌಲಭ್ಯಗಳು ಅಥವಾ ಪೋಷಕರ ಹಿನ್ನೆಲೆ ನಿರೀಕ್ಷೆಗಳಿಂದ ದೂರದಲ್ಲಿರುವ ಹಳ್ಳಿಯಲ್ಲಿ ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹೇಗೆ ಎದುರಿಸುವುದು? ಪರೀಕ್ಷಾ ವಿಧಾನ, ನಮೂನೆ, ತಂತ್ರಗಳು ಪರೀಕ್ಷೆ ಸಮಯ ನಿರ್ವಹಣೆ ವಿದ್ಯಾರ್ಥಿಗಳ ಪರೀಕ್ಷಾ ಭೀತಿಯನ್ನು ಹೋಗಲಾಡಿಸುವುದು ಇತ್ಯಾದಿ ವಿಷಯಗಳ ಸಂಪೂರ್ಣ ಮಾಹಿತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಡಿವೈಎಸ್ಪಿ ಪಿ.ಎಸ್.ಬಳೂಲಮಟ್ಟಿ, ನೋಡಲ್ ಅಧಿಕಾರಿ ಎಸ್.ಡಿ.ನೀಲಗುಂದ, ಶಿಬಿರದ ಅಧ್ಯಕ್ಷತೆಯನ್ನು ಎಸ್.ಎಫ್.ನಾಯಕ, ಉದ್ಘಾಟಕರಾಗಿ ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್.ಛಬ್ಬಿ, ವೈ.ಎಂ.ಪಮ್ಮಾರ, ವಿ.ಎಲ್.ಪಾಟೀಲ, ಜಿ.ಬಿ.ಗಾಣಗೇರ, ಸುನೀಲ ನಾಯಕ, ಮಂಜುನಾಥ ಪಾಟೀಲ ಇದ್ದರು.
ಕೊನೆ ಅವಧಿಯನ್ನು ಎನ್.ಎಲ್.ಪಾಟೀಲ, ಕನ್ನಡ ವಿಷಯದ ಪತ್ರಲೇಖನ, ಅಲಂಕಾರ, ಛಂದಸ್ಸು, ಗಾದೆಮಾತುಗಳು ಪದ್ಯದ ಸಾರಾಂಶಗಳ ಕುರಿತು ಮಾಹಿತಿ ನೀಡಿದರು.