ಮೇ ತಿಂಗಳಲ್ಲಿ ಕೊಪ್ಪಳ ಕಾಡುಕೆಂಡವಾಗಿರುತ್ತಿತ್ತು. ಮೇ ಪ್ರಾರಂಭದಲ್ಲಿಯೇ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹೀಗಾಗಿ ಈ ವರ್ಷದ ಬೇಸಿಗೆ ಇನ್ನಷ್ಟು ಪ್ರಖರವಾಗುತ್ತದೆ ಎಂದು ಜಿಲ್ಲೆಯ ಜನರು ಬೆವರುತ್ತಿದ್ದರು. ಆದರೆ, ಮೇ ಕೊನೆಯ ವಾರದಲ್ಲಿ ಶುರುವಾದ ಜಿಟಿ-ಜಿಟಿ ಮಳೆ ತಂಪಿನ ಮುದ ನೀಡಿದೆ.
ಕೊಪ್ಪಳ:
ಜಿಲ್ಲಾದ್ಯಂತ ಮುಂಗಾರು ಮಳೆ ಶುರುವಾಗಿದ್ದು ಬಿಸಿಲೂರಿನಲ್ಲಿಯೂ ಮಲೆನಾಡಿನ ಅನುಭವವಾಗುತ್ತಿದೆ.
ಮೇ ತಿಂಗಳಲ್ಲಿಯೇ ಬಿಸಿಲಿನ ದರ್ಶನವಿಲ್ಲದೆ ಮೋಡ ಕವಿದ ವಾತಾವರಣವಿದ್ದು ನಾಲ್ಕೈದು ದಿನಗಳಿಂದ ದಿನವೀಡಿ ತುಂತುರು ಮಳೆ ಸುರಿಯುತ್ತಿದೆ. ಕಾದು ಕೆಂಡವಾಗಿರುತ್ತಿದ್ದ ಗುಡ್ಡಗಳು ತಂಪಾಗಿವೆ. ಎಲ್ಲಿ ನೋಡಿದರೂ ಹಚ್ಚ-ಹಸಿರು ಕಾಣುತ್ತಿದ್ದು ಹಕ್ಕಿಗಳ ಕೂಗು, ಧ್ವನಿ, ನವಿಲುಗಳ ಚಿನ್ನಾಟ ನೋಡುಗರ ಕಣ್ಮನ ಸೆಳೆಯುತ್ತಿವೆ.
ಮೇ ತಿಂಗಳಲ್ಲಿ ಕೊಪ್ಪಳ ಕಾಡುಕೆಂಡವಾಗಿರುತ್ತಿತ್ತು. ಮೇ ಪ್ರಾರಂಭದಲ್ಲಿಯೇ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹೀಗಾಗಿ ಈ ವರ್ಷದ ಬೇಸಿಗೆ ಇನ್ನಷ್ಟು ಪ್ರಖರವಾಗುತ್ತದೆ ಎಂದು ಜಿಲ್ಲೆಯ ಜನರು ಬೆವರುತ್ತಿದ್ದರು. ಆದರೆ, ಮೇ ಕೊನೆಯ ವಾರದಲ್ಲಿ ಶುರುವಾದ ಜಿಟಿ-ಜಿಟಿ ಮಳೆ ತಂಪಿನ ಮುದ ನೀಡಿದೆ.
ಬಿತ್ತನೆಗೆ ಸಜ್ಜಾದ ರೈತರು:
ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತ ಸಮುದಾಯ ಖುಷಿಯಾಗಿದೆ. ಹೆಸರು ಬಿತ್ತನೆಗೆ ಕೃತಿ ಮಳೆ ಧಯೆ ತೋರಿದ್ದು ಭೂಮಿ ಹದಗೊಳಿಸಲು ರೈತರು ಕಾಯುತ್ತಿದ್ದಾರೆ. ಮಳೆ ಬಿಡುವು ಕೊಟ್ಟರೆ ಬಿತ್ತನೆ ಕಾರ್ಯ ಶುರುವಾಗಲಿದೆ. ಮೇ ಅಂತ್ಯದೊಳಗೆ ಹೆಸರು ಬಿತ್ತನೆ ಮಾಡಿದರೆ ಭರ್ಜರಿ ಫಸಲು ಬರುತ್ತದೆ. ಜುಲೈಗೆ ಕಟಾವು ಮುಗಿದು, ಹಿಂಗಾರು ಬಿತ್ತನೆಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು. ಕಳೆದ ಹತ್ತು ವರ್ಷದಲ್ಲಿಯೇ ಈ ವರ್ಷ ಪೂರ್ವ ಮುಂಗಾರು ಬಿತ್ತನೆಗೆ ಸೂಕ್ತ ಸಮಯಕ್ಕೆ ಮಳೆಯಾಗಿದೆ ಎನ್ನುತ್ತಾರೆ ಯರೇಹಂಚಿನಾಳ ನಿಂಗಪ್ಪ.
ಕಟಾವು ಮಾಡಿದವರ ಗೋಳು:
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಹಾಗೂ ನೀರಾವರಿ ಭೂಮಿಯಲ್ಲಿ ಮೆಕ್ಕೆಜೋಳ ಕಟಾವು ಮಾಡಿರುವ ರೈತರು ಮಳೆಯಿಂದ ಸಂಕಷ್ಟದಲ್ಲಿದ್ದಾರೆ. ನಿರೀಕ್ಷೆಯೇ ಇಲ್ಲದ ಈ ಮಳೆ ಮೇ ತಿಂಗಳಲ್ಲಿಯೇ ಎಡೆಬಿಡದೆ ಸುರಿಯುತ್ತಿರುವುದು ರಾಶಿ ಮಾಡುತ್ತಿರುವ ರೈತರನ್ನು ಸಂಕಷ್ಟಕ್ಕೆ ದೂಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.