ದಾವಣಗೆರೆ: ಸಾರ್ವಜನಿಕರು ಕಚೇರಿಗೆ ನೇರವಾಗಿ ಭೇಟಿ ನೀಡಿ ಮನವಿ ಸಲ್ಲಿಸಿದಾಗ ಮಾತ್ರವಲ್ಲ, ಇ-ಮೇಲ್ ಮೂಲಕ ಕಳುಹಿಸುವ ಅಹವಾಲುಗಳಿಗೂ ಆದ್ಯತೆ ನೀಡಿ ಸ್ಪಂದಿಸುವ ನಿಟ್ಟಿನಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕ್ರಮ ಕೈಗೊಂಡಿದ್ದಾರೆ.
ಇ-ಮೇಲ್ ಮನವಿ ಪರಿಗಣಿಸಿದ ಸಂಸದರು ಸದರಿ ವಿಷಯ ರೈಲ್ವೆ ಸಚಿವಾಲಯದ ಗಮನಕ್ಕೆ ತಂದಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು, ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್‌ಗೆ ಹರಪನಹಳ್ಳಿ ರೈಲು ನಿಲ್ದಾಣದಲ್ಲಿ ಕನಿಷ್ಠ 2 ನಿಮಿಷಗಳ ವಾಣಿಜ್ಯ ನಿಲುಗಡೆ ನೀಡುವ ಸಾಧ್ಯತೆ ಪರಿಶೀಲಿಸುವಂತೆ ಕೋರಿದ್ದರು. ಜೊತೆಗೆ, ನಿಲುಗಡೆಗೆ ಸಂಬಂಧಿಸಿ ತಾಂತ್ರಿಕ ಹಾಗೂ ಕಾರ್ಯಾಚರಣಾ ಸಾಧ್ಯತಾ ಅಧ್ಯಯನ ನಡೆಸಲು ರೈಲ್ವೆ ಮಂಡಳಿ ಮತ್ತು ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಶಾಶ್ವತ ನಿಲುಗಡೆ ತಕ್ಷಣ ಸಾಧ್ಯ ಆಗದಿದ್ದಲ್ಲಿ ಪ್ರಯಾಣಿಕರ ಬಳಕೆ ಮತ್ತು ಕಾರ್ಯಾಚರಣಾ ಸಾಧ್ಯತೆ ಪರಿಶೀಲಿಸಲು 6 ತಿಂಗಳ ಪ್ರಾಯೋಗಿಕ ನಿಲುಗಡೆ ನೀಡುವುದನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಹರಪನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು, ರೈತರು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಈ ನಿಲುಗಡೆಯಿಂದ ಅನುಕೂಲವಾಗಲಿದೆ. ಸಮಯ ಮತ್ತು ಹೆಚ್ಚುವರಿ ಪ್ರಯಾಣ ವೆಚ್ಚ ಕಡಿಮೆ ಜೊತೆಗೆ ಪ್ರದೇಶದ ರೈಲು ಸಂಪರ್ಕವೂ ಉತ್ತಮಗೊಳ್ಳಲಿದೆ ಎಂದು ಸಂಸದೆ ಪತ್ರದಲ್ಲಿ ಉಲ್ಲೇಖಿಸಿದ್ದರು.ಸಂಸದರ ಮನವಿಗೆ ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯ ಪರಿಶೀಲನೆಗಾಗಿ ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ ಹಾಗೂ ಪರಿಶೀಲನೆ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
(ಟಾಪ್ ಕೋಟ್)
- ಡಾ.ಪ್ರಭಾ ಮಲ್ಲಿಕಾರ್ಜುನ್, ಸಂಸದೆ.
-7ಕೆಡಿವಿಜಿ39: ಡಾ. ಪ್ರಭಾ ಮಲ್ಲಿಕಾರ್ಜುನ್