ಐಎಎಸ್, ಐಪಿಎಸ್ ಹುದ್ದೆಗಳಿಗೆ ತರಬೇತಿ

KannadaprabhaNewsNetwork |  
Published : Feb 09, 2025, 01:16 AM IST
(ಪ್ರಭಾ ಮಲ್ಲಿಕಾರ್ಜುನ) | Kannada Prabha

ಸಾರಾಂಶ

ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್ ಐಪಿಎಸ್ ಬ್ಯಾಂಕಿಂಗ್ ಹುದ್ದೆಗಳಿಗೆ ಎಸ್‍ಎಸ್ ಟ್ರಸ್ಟ್ ಇಂದ ಉಚಿತ ತರಬೇತಿ ನೀಡಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹರಿಹರದಲ್ಲಿ ಹೇಳಿದ್ದಾರೆ.

ಹರಿಹರ: ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್ ಐಪಿಎಸ್ ಬ್ಯಾಂಕಿಂಗ್ ಹುದ್ದೆಗಳಿಗೆ ಎಸ್‍ಎಸ್ ಟ್ರಸ್ಟ್ ಇಂದ ಉಚಿತ ತರಬೇತಿ ನೀಡಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ರಾಜನಹಳ್ಳಿಯ ವಾಲ್ಮೀಕಿ ಜಾತ್ರೆ-2025ರ ಅಂಗವಾಗಿ ಶನಿವಾರ ಬೆಳಗ್ಗೆ ಮಹರ್ಷಿ ವಾಲ್ಮೀಕಿ ಜೀನವಾಧಾರಿತ ಫಲಪುಷ್ಪ ಪ್ರದರ್ಶನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಮಾರ್ಚ್‌ ತಿಂಗಳಲ್ಲಿ ದಾವಣಗೆರೆಯ ಬಿಐಟಿ ಹಾಗೂ ಎಂಬಿಎ ಕಾಲೇಜುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಆಯ್ದ 1500 ವಿದ್ಯಾರ್ಥಿಗಳು ಉಪಯೋಗವನ್ನು ಪಡೆಯಬಹುದು ಎಂದರು.

ವಾಲ್ಮೀಕಿ ಮಠದ ಶ್ರೀ ಕ್ರಿಯಾಶೀಲರಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಕ್ರೀಯಾ ಶೀಲರಾಗಿ ತೊಡಗಿದ್ದಾರೆ. ಸಮಾಜ ಅಥವಾ ಮಠದ ಯಾವುದೇ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಸಿ ಮಾತನಾಡಿ, ಸಮಾಜದ ಸಹಕಾರ ಹಾಗೂ ಜನರ ಆಶೀರ್ವಾದದ ಹಿನ್ನೆಲೆ ಸಂಸದೆಯಾಗಿ ಆಯ್ಕೆಯಾಗಿದ್ದೇನೆ. ತಂದೆಯಂತೆ ಸಾರ್ವಜನಿಕರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅವರ ಹೆಸರನ್ನು ಉಳಿಸುತ್ತೇನೆ. ಸಮಾಜದ ಮಹಿಳೆಯರು ಕೇವಲ ಶೈಕ್ಷಣಿಕವಾಗಿ ಅಲ್ಲದೆ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬಂದಲ್ಲಿ ಇಂಥಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಮಠದ ಯಾವುದೇ ಕಾರ್ಯಕ್ರಮಗಳಿಗೂ ಸಹಕಾರ ಸದಾ ಇರುತ್ತೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲೇ ಜಿಲ್ಲಾ ಕಸಾಪ ಸಾಕಷ್ಟು ಹೆಸರು ಮಾಡಿದೆ: ವಿ.ಹರ್ಷ ಪಟ್ಟೇದೊಡ್ಡಿ
ಶಾಲಾ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯ ಭಾಗ: ಕೆ.ಎಂ.ಉದಯ್