ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳಿಂದ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಶ್ರಮದಿಂದ ಸಮ್ಮೇಳನ ಯಶಸ್ವಿಯಾಗಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸುಭದ್ರ ನೆಲೆ ಹೊಂದಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲೇ ಸಾಕಷ್ಟು ಹೆಸರು ಮಾಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿ.ಹರ್ಷ ಪಟ್ಟೇದೊಡ್ಡಿ ತಿಳಿಸಿದರು.

ತಾಲೂಕಿನ ಬಾಬುರಾಯನ ಕೊಪ್ಪಲಿನ ಸರ್ಕಾರಿ ಫ್ರೌಢಶಾಲಾ ಕುವೆಂಪು ಸಭಾಂಗಣದಲ್ಲಿ ಶ್ರೀರಂಗಪಟ್ಟಣ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂಕ್ರಾಂತಿ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳಿಂದ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಶ್ರಮದಿಂದ ಸಮ್ಮೇಳನ ಯಶಸ್ವಿಯಾಗಿತ್ತು ಎಂದರು.

ತಾಲೂಕು ಕೇಂದ್ರಗಳಲ್ಲಿ ಸಂಕ್ರಾಂತಿ ಪ್ರಯುಕ್ತ ಕವಿಗೋಷ್ಠಿ ಆಯೋಜನೆ ಮಾಡಿದ್ದು ಶ್ರೀರಂಗಪಟ್ಟಣ ಮೊದಲ ತಾಲೂಕಾಗಿದೆ ಇದಕ್ಕೆ ಪರಿಷತ್ತಿನ ಪದಾದಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು ಪ್ರಾಸ್ತಾವಿಕ ಭಾಷಣ ಮಾಡಿದರು. ಸಾಹಿತಿ ಹಾಗೂ ಶಿಕ್ಷಕ ಕೊತ್ತತ್ತಿರಾಜು ಅಧ್ಯಕ್ಷತೆ ವಹಿಸಿ ಕವಿಗಳು ವಾಚಿಸಿದ ಕವಿತೆಗಳ ಕುರಿತು ಅದರ ಸಾರಾಂಶದೊಂದಿಗೆ ಯುವಕವಿಗಳಿಗೆ ತಿಳಿಸಿ ಉತ್ತೇಜಿಸಿದರು.

ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಗಾಮನಹಳ್ಳಿ ಮಾತನಾಡಿದರು. ಅಖಿಲ ಭಾರತ ಪಂಚಾಯತ್ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಂ.ಸುಬ್ರಹ್ಮಣ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ, ಕಸಾಪ ಉಪಾಧ್ಯಕ್ಷ ಗಂಜಾಂ ಮಂಜು, ಕೋಶಾಧ್ಯಕ್ಷ ಪುರುಷೋತ್ತಮ ಎಂ, ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಹೇಮಲತಾ ಹರಿಯಾಳ, ಹಿರಿಯ ಪ್ರಾಥಮಿ ಶಾಲೆ ಮುಖ್ಯ ಶಿಕ್ಷಕಿ ಸರೋಜ, ಪುರುಷೋತ್ತಮ ಚಿಕ್ಕಪಾಳ್ಯ, ಕೆ.ಟಿ,ರಂಗಯ್ಯ, ರವಿಕುಮಾರ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು, ದೈ.ಶಿ.ಶಿ. ಸಂಘದ ಅಧ್ಯಕ್ಷ ಜಿ.ಸೀತಾರಾಮು, ಸಿ.ಎಸ್.ವಾಣಿ, ತಾಲೂಕು ಕಸಾಪ ಪ್ರದಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ಕರವೇ ಬಸವರಾಜು, ಉಮಾಶಂಕರ್ ಇತರರ ಉಪಸ್ಥಿತರಿದ್ದರು.

25 ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳ ವಾಚನ ಮಾಡಿದರು. ಕವನ ಚಾಚಿಸಿದ ಕವಿಗಳಿಗೆ ಪಾರೊತೋಷಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.