ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಹಾನಿಗೊಳಗಾದ ಭತ್ತದ ಗದ್ದೆಗಳಿಗೆ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿದರು.ಕಂದಾಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಬೇಳೆ ಹಾನಿಯಾದ ರೈತರಿಗೆ ಶೀಘ್ರದಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ನಿರ್ದೇಶನ ನೀಡಿದರು. ರೈತರು ಧೃತಿಗೆಡಬಾರದು ಎಂದು ಧೈರ್ಯ ತುಂಬಿದರು.ಮಾಜಿ ಶಾಸಕ ಬಸವರಾಜ ದಡೇಸೂಗೂರು, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಸತ್ಯನಾರಾಯಣ ದೇಶಪಾಂಡೆ, ಬಾಪಾರಾವು, ಅನ್ನೆ ಚಂದ್ರಶೇಖರ, ಪಿಲ್ಲಿ ಕೊಂಡಯ್ಯ ಇತರರಿದ್ದರು.